23.8 C
Hubli
ಮಾರ್ಚ್ 28, 2023
eNews Land
ಸುದ್ದಿ

ಸಾಲಬಾಧೆ; ಹುಬ್ಬಳ್ಳಿ ರೈತ ಆತ್ಮಹತ್ಯೆ

Listen to this article

ಇಎನ್ಎಲ್ ಧಾರವಾಡ: ಸಾಲಬಾಧೆಗೆ ಬೇಸತ್ತು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ನಡೆದಿದೆ.

ಗಂಗಪ್ಪ ಹನಮಪ್ಪ ಹೊರಕೇರಿ (55) ಮೃತ ರೈತ. ಇಚರು ತಮ್ಮ ಜಮೀನಿನ ಮೇಲೆ ನಲವಡಿ ಗ್ರಾಮದ ಕೆ.ವ್ಹಿ.ಜಿ ಬ್ಯಾಂಕಿನಲ್ಲಿ 2 ಲಕ್ಷ ರುಪಾಯಿ ಬೆಳೆಸಾಲ ಮಾಡಿದ್ದರು. ಜತೆಗೆ ಊರಲ್ಲಿ ಅಂದಾಜು 2 ಲಕ್ಷ ರುಪಾಯಿ ಕೈಗಡ ಸಾಲ ಮಾಡಿದ್ದರು.
ಈಚೆಗೆ ಅಕಾಲಿಕ ಮಳೆಯಿಂದಾಗಿ ಹೊಲ ಬೆಳೆಯದೇ ಇದ್ದುದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂಬ ಕೊರಗಿನಲ್ಲಿ ತಮ್ಮ ಜಮೀನಿನಲ್ಲಿ ಯಾವುದೋ ವಿಷಕಾರಕ ಎಣ್ಣೆ ಸೇವಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟರು.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೈಋತ್ಯ ರೈಲ್ವೆ ಭರ್ಜರಿ ಗಳಿಕೆ; ಸರಕು ಸಾಗಾಣಿಕೆಯಿಂದ ₹ 4160 ಕೋಟಿ ಗಳಿಕೆ

eNewsLand Team

ಕ್ರೀಡೆಯಲ್ಲಿ ಸಮತೋಲಿತ ಭಾವ ಅಗತ್ಯ : ಮಹಾಪೌರ ಈರೇಶ್ ಅಂಚಟಗೇರಿ

eNewsLand Team

ಕೋವಿಡ್ ಸೋಂಕಿತರ ಟೆಲಿಮೆಡಿಸಿನ್ ಸೇವೆಗಾಗಿ ಈ ನಂಬರ್ ಸಂಪರ್ಕಿಸಿ…

eNewsLand Team