34 C
Hubli
ಫೆಬ್ರವರಿ 28, 2024
eNews Land
ಸುದ್ದಿ

ಕಲಘಟಗಿಯಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಇಲ್ಲ : ಶಾಸಕ ನಿಂಬಣ್ಣವರ

ದೇಶದ ಮೊಟ್ಟ ಮೊದಲ ಕಾನೂನು ಮಂತ್ರಿ ಬಾಬಾ ಸಾಹೇಬ ಅಂಬೇಡ್ಕರ್

 ಇಎನ್ಎಲ್ ಕಲಘಟಗಿ: ಡಾ.ಬಿ.ಆರ್.ಅಂಬೇಡ್ಕರವರು ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನ ರಚನೆ ಮಾಡಿದರು. ಅವರ ಪ್ರಭುದ್ಧತೆಯನ್ನು ಅರಿತು ದೇಶದ ಮೊಟ್ಟ ಮೊದಲ ಕಾನೂನು ಮಂತ್ರಿ ಎಂದ ಶಾಸಕ ಸಿ.ಎಮ್. ನಿಂಬಣ್ಣವರ.

ಇದನ್ನು ಓದಿ: ಹುದ್ದೆ ಮುಖ್ಯ ಅಲ್ಲ, ಸಂಘಟನೆ ಮುಖ್ಯ: ಎಮ್.ಅರವಿಂದ

ಸ್ಥಳೀಯ ಸರ್ಕಾರಿ ಮಾದರಿ ಕೇಂದ್ರೀಯ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ತಾಲೂಕಡಳಿತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ, ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಾರ ಹಂಗಿಗೂ ಒಳಗಾಗಲಿಲ್ಲ, ಹುಟ್ಟಿನಿಂದ ಪ್ರಭುದ್ಧತೆ ಬರುವವರೆಗೂ ತುಳಿತಕ್ಕೆ ಒಳಗಾದ ಇವರು ಶಿಕ್ಷಣದಿಂದಲೇ ಸಮಾಜದ ಪರಿವರ್ತನೆ ಸಾಧ್ಯ ಎಂದು ಅರಿತು 64ಕ್ಕೂ ಹೆಚ್ಚು ಪದವಿಗಳನ್ನು ಸಂಪಾದಿಸಿದ್ದರು. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ, ಅದೇ ಅವರಿಗೆ ಸ್ವಾಭಿಮಾನದ  ದಾರಿದೀಪವಾಗುತ್ತದೆ ಎಂದರು. ಇಂದಿಗೂ ಕಲಘಟಗಿಯಲ್ಲಿ ಯಾವುದೇ ಪ್ರತಿಮೆ ಸ್ಥಾಪನೆಯಾಗಿಲ್ಲ, ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಜಾಗೆಯನ್ನು ನಿರ್ಧರಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಇದನ್ನು ಓದಿ: ಮನಕುಲ ಕಲ್ಯಾಣವೇ  ರೇಣುಕಾಚಾರ್ಯರ ಸಂದೇಶ: ಅಭಿನವ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು
         ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕಾ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಇಂದು ಜ್ಞಾನದ ಉದಯದ ದಿನ, ಇದನ್ನು ವಿಶ್ವ ಸಂಸ್ಥೆಯೇ ಸಾರಿದೆ, ಪುಸ್ತಕಗಳ  ಜ್ಞಾನವನ್ನು  ಮಸ್ತಕಕ್ಕೆ ಸೇರಿಸಿಕೊಂಡವರು, ಬಾಲ್ಯದಲ್ಲಿ ಇವರಿಗೆ ಓದಲು ಅವಕಾಶ ಇದ್ದಿದ್ದಿಲ್ಲ, ಆದರೆ ನೂರಾರು ಕೋಟಿ ಜನರಿಗೆ ಓದುವ ವ್ಯಕ್ತಿಯಾದರು, ಮೂಢನಂಬಿಕೆ ಹೋಗಲು ಶಿಕ್ಷಣವೇ ಮುಖ್ಯ ಎಂಬುದನ್ನು ಸಾರಿದ್ದರು.
         ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಮಲ್ಲಿಕಾರ್ಜುನ ಪುರದನಗೌಡ್ರ ನಾವೆಲ್ಲರೂ ಇರಲು ಮನೆ ಕಟ್ಟಿಕೊಳ್ಳುತ್ತೇವೆ. ಆದರೆ ಬಾಬಾ ಸಾಹೇಬ ಅಂಬೇಡ್ಕರ್ ಗ್ರಂಥಗಳೇ ನನಗೆ ಸಂಗಾತಿ ಎಂದು 52 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಅವುಗಳಿಗಾಗಿಯೇ ಮನೆ ಕಟ್ಟಿಸಿ ಪ್ರಪಂಚಕ್ಕೆ ಜ್ಞಾನ ಭಂಡಾರದ ಮಹತ್ವ ತಿಳಿಸಿದ್ದಾರೆ. 9 ಭಾಷೆಗಳ ಮೇಲೆ ಪ್ರಭುತ್ವ ಹೊಂದಿ ಮೂಕನಾಯಕ ಪತ್ರಿಕೆ ಮೂಲಕ ಸಮಾಜ ಸೇವೆ ಮಾಡಿದ್ದಾರೆ ಎಂದರು. ಚಂದ್ರಶೇಖರ ನಡುವಿನಮನಿ ಮಾತನಾಡಿ ಮಹಿಳೆಯರಿಗೆ ಸರಿಸಮ ಸ್ಥಾನ ಕೊಟ್ಟವರು ಅಂಬೇಡ್ಕರ. ಈ ಕಾರ್ಯಕ್ರಮಗಳು ಕೇವಲ ಸೀಮಿತ ವರ್ಗಕ್ಕೆ ಇರದೇ ಎಲ್ಲ ವರ್ಗದವರೂ ಭಾಗವಹಿಸಬೇಕು, ಆಗ ಮಾತ್ರ ಅವರು ಹಾಕಿ ಕೊಟ್ಟ ಮಾರ್ಗ ಎಲ್ಲರಿಗೂ ದಾರಿದೀಪವಾಗುತ್ತದೆ ಎಂದರು. ಷರೀಫ ಹರಿಜನ, ಗಣಪತಿ ಮೋತೆಣ್ಣವರ, ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಇದನ್ನು ಓದಿ: ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ
        ಗ್ರೇಡ್-2 ತಹಶೀಲ್ದಾರ ರವೀಂದ್ರ ಹಾದಿಮನಿ, ತಾ.ಪಂ. ಇಓ. ಎಸ್.ಸಿ.ಮಠಪತಿ, ಪ.ಪಂ.ಮುಖ್ಯಾಧಿಕಾರಿ, ವೈ.ಜಿ.ಗದ್ದಿಗೌಡ್ರ, ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ, ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್.ಕಟ್ಟೇಗೌಡ್ರ, ಬಿಇಓ.ಉಮಾದೇವಿ ಬಸಾಪೂರ, ಅನಸೂಯ ಹೆಬ್ಬಳ್ಳಿಮಠ, ಯಲ್ಲವ್ವ ಶಿಗ್ಲಿ, ಆರ್.ಎಮ್.ಹೊಲ್ತಿಕೋಟಿ, ಫಕ್ಕೀರಗೌಡ ದೊಡಮನಿ, ಬಸವರಾಜ ಕಟ್ಟಿಮನಿ, ಯಲ್ಲಪ್ಪ ಆಸಮಟ್ಟಿ, ವಾಸು ಲಮಾಣಿ, ಮಂಜುನಾಥ ದೊಡಮನಿ, ಮಾಲಾ ತುರಿಹಾಳ, ಶೇಖಪ್ಪ ಕಟ್ಟಿಮನಿ, ಯಲ್ಲಪ್ಪ ಹುಲಮನಿ, ಮಂಗಲಪ್ಪ ಲಮಾಣಿ, ಶಿವಾಜಿ ವಡ್ಡರ, ಮಂಜುನಾಥ ದೀಪಸಾರ, ರಮೇಶ ಸೊಲಾರಗೊಪ್ಪ, ಪಿ.ಎಸ್.ಭಜಂತ್ರಿ, ಇದ್ದರು.

ಇದನ್ನು ಓದಿ: ಉತ್ತಮ ಕೆಲಸ ಮಾಡಿದ್ದೀರಿ: ಪುರುಷೋತ್ತಮ

Related posts

ವಕೀಲರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ -ನ್ಯಾಯಮೂರ್ತಿ ರವಿ ವಿ. ಹೊಸಮನಿ

eNewsLand Team

ಕಾಂಗ್ರೆಸ್’ನವರು ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ದ್ವೇಷ ಹುಟ್ಟಿಸುತ್ತಿದ್ದಾರೆ: ಸಿಎಂ ಬೊಮ್ಮಾಯಿ

eNEWS LAND Team

ಬೆಂಬಲ ಬೆಲೆ ಯೋಜನೆ; ಕಡಲೆ ಖರೀದಿ ಕೇಂದ್ರ ಸ್ಥಾಪನೆಗೆ ಆದೇಶ: ಸಚಿವ ಮುನೇನಕೊಪ್ಪ

eNEWS LAND Team