27 C
Hubli
ಏಪ್ರಿಲ್ 29, 2024
eNews Land
ಜಿಲ್ಲೆ

ಹುಬ್ಬಳ್ಳಿ ಪತ್ರಕರ್ತರ ಆಫೀಸ್ ಪರೇಡ್ ಹೇಗಿದೆ ಗೊತ್ತಾ?? ಮಾತನಾಡಿಸದವರೂ ಗುಡ್ ಮಾರ್ನಿಂಗ್ ಅಂತಿದ್ದಾರೆ!!

ಇಎನ್ಎಲ್ ಧಾರವಾಡ: ಎದುರುಬದುರಾದರೂ ಮಾತನಾಡಿಸದ ಪತ್ರಕರ್ತರು ಬೆಳ್ಳಂಬೆಳಗ್ಗೆ ಗುಡ್ ಮಾರ್ನಿಂಗ್ ಅಂತಿದ್ದಾರೆ. ಪರಸ್ಪರ ಕಾಲೆಳೆದುಕೊಳ್ಳುವವರು ಒಟ್ಟಾಗಿ ಎಲ್ಲಾ ಆಫೀಸ್ ಸುತ್ತಿ ವೋಟ್ ಪ್ಲೀಸ್ ಅಂದಿದ್ದಾರೆ.‌.!!

ಹೌದು ಇವತ್ತು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೀತಿದೆ. ಒಟ್ಟು 15 ಸ್ಥಾನಕ್ಕೆ 28 ಸ್ಪರ್ಧಿಗಳು ಆಯ್ಕೆ ಬಯಸಿ ಸ್ಪರ್ಧೆಗೆ ಇಳಿದಿದ್ದಾರೆ. 335 ಮತದಾರರು ಹಕ್ಕು ಚಲಾಯಿಸಲಿದ್ದಾರೆ‌.

ಇದೇ ಮೊದಲ ಬಾರಿ ಸಮಾನ ಮನಸ್ಕರ ತಂಡ ಚುನಾವಣೆಯಲ್ಲಿ ಹುಟ್ಟಿಕೊಂಡಿದೆ. ಅಧ್ಯಕ್ಷ ಸ್ಥಾನದ ಹುರಿಯಾಳು ಬಸವರಾಜ ಕಟ್ಟಿಮನಿ ನೇತೃತ್ವದಲ್ಲಿ ಈ ತಂಡ ಗೆಲವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದೆ‌. ಮಾಜಿ ಅಧ್ಯಕ್ಷ
ಗಣಪತಿ ಗಂಗೊಳ್ಳಿ ತಂಡದಿಂದ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿರುವ ಲೋಚನೇಶ ಹೂಗಾರ ಹಾಗೂ ಪ್ರ.ಕಾರ್ಯದರ್ಶಿ ಹುದ್ದೆ ಆಕಾಂಕ್ಷಿ ಸುಶೀಲೇಂದ್ರ ಕುಂದರಗಿ ಅವರನ್ನು ಅಧಿಕಾರದಿಂದ ದೂರ ಸರಿಸಬೇಕು. ಬದಲಾವಣೆ ತರಬೇಕು ಎಂಬುದು ಇವರ ಪ್ರಯತ್ನ. ಅದರಲ್ಲಿ ಎಷ್ಟು ಯಶಸ್ವಿಯಾಗುತ್ತಾರೆ ಎಂಬುದಕ್ಕೆ ಫಲಿತಾಂಶ ಉತ್ತರಿಸಬೇಕಿದೆ.

ಇದೆಲ್ಲಾ ಇರಲಿ, ಪತ್ರಕರ್ತರ ರಾಜಕೀಯ ಚುನಾವಣೆವರೆಗೆ ಮಾತ್ರ ಸೀಮಿತ. ನಂತರ ಎಲ್ಲರೂ ಹೆಗಲ ಮೇಲೆ ಕೈ ಹಾಕಿ ಹೋಗುವವರೆ.

ಆದರೆ ಇದರ ನಡುವೆ ಸ್ವಾರಸ್ಯ ಇದೆ. ಹಿಂದೆಂದೂ ಕಾಣದಷ್ಟು ತುರುಸಿನ‌ ಸ್ಪರ್ಧೆ ಈ ಬಾರಿ ಕಂಡುಬರುತ್ತಿದೆ ಎಂದು ಹಿರಿಯ ಪತ್ರಕರ್ತರು ಹೇಳುತ್ತಿದ್ದಾರೆ. ಅದು ನಿಜವೂ ಹೌದು.

ಹಿಂದೆಲ್ಲಾ ಚುನಾವಣೆಗೆ ಒಂದೆರಡು ದಿನಕ್ಕೆ ಮೊದಲು ನಾಲ್ಕೈದು ಸ್ಪರ್ಧಿಗಳು ಬಂದು ಮತ ಕೊಡಿ ಸೈಟ್ ಮಾಡಿಸಿಕೊಡ್ತೆವೆ ಅಂತಿದ್ದರು. ಆದರೆ ಈ ವರ್ಷ ಹೊಸ ಮುಖಗಳು ಚುನಾವಣೆಯಲ್ಲಿ ಧುಮುಕಿವೆ. ಭರ್ಜರಿ ಡಿಜಿಟಲ್ ಪ್ರಚಾರ ನಡೆಸುತ್ತಿವೆ. ವಾಟ್ಸಾಪ್, ಫೇಸ್‌ಬುಕ್‌ ನಲ್ಲಿ ಪ್ರಚಾರ ಹಚ್ಚಿಕೊಂಡಿದ್ದಾರೆ‌. ಸುದ್ದಿ ಬರೆಯುವುದು ಬಿಟ್ಟು ಥೇಟ್ ರಾಜಕೀಯ ಮಾಡುತ್ತಿದ್ದಾರೆ. ಆದರೆ, ಎಲ್ಲಿಯೂ ಹಳೆ ಹುಲಿಗಳನ್ನು ಟೀಕೆ ಮಾಡುತ್ತಿಲ್ಲ. ಹಿಂದೆ ಆಡಳಿತ ನಡೆಸಿದವರು ತಾವೇನೂ ಕಡಿಮೆ ಇಲ್ಲ ಎಂದು ಪ್ರಚಾರ ನಡೆಸಿದ್ದಾರೆ.

ಒಟ್ಟಾರೆ ಇವತ್ತು ಮತ ಚಲಾವಣೆ ಆಗಲಿದೆ. ಹುಬ್ಬಳ್ಳಿ ಪ್ರೆಸ್ ಕ್ಲಬ್ ಗೆ‌‌ಹೊಸ ರೂಪ ಬರುತ್ತದೊ, ಅಥವಾ‌ ಮುಖಗಳಷ್ಟೇ ಬದಲಾಗುತ್ತದೊ ಎಂದು ಮುಂದಿನ ದಿನಗಳು ಉತ್ತರಿಸಲಿವೆ‌.

Related posts

ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ

eNewsLand Team

ಮನೆ ಚಿಲಕ ಇನ್ನಷ್ಟು ಭದ್ರಪಡಿಸಿ; ಹುಬ್ಬಳ್ಳಿಲಿ ಮನೆಗೆ‌ ಕನ್ನ ಹಾಕಿದ ಕಳ್ಳರು ದೋಚಿದ್ದೆಷ್ಟು ನೋಡಿ!?

eNewsLand Team

ಚುನಾವಣಾ ಕರ್ತವ್ಯ ಲೋಪ;  ಹು.ಧಾ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿ ಮತಗಟ್ಟೆ ಅಧಿಕಾರಿ ನವೀನ ಸೂರ್ಯವಂಶಿರನ್ನು ಅಮಾನತ್ತುಗೊಳಿಸಿ ಡಿಸಿ ಆದೇಶ

eNEWS LAND Team