34 C
Hubli
ಮೇ 3, 2024
eNews Land
ಸುದ್ದಿ

ರಾಜೀವ್ ಗಾಂಧಿ ವಿವಿ ಕಾಯ್ದೆ ತಿದ್ದುಪಡಿ ಖಂಡಿಸಿ ಎಬಿವಿಪಿ ಪ್ರತಿಭಟನೆ

ಇಎನ್ಎಲ್ ಹುಬ್ಬಳ್ಳಿ

ರಾಜ್ಯದ ಏಕೈಕ ವೈದ್ಯಕೀಯ ವಿಶ್ವ ವಿದ್ಯಾಲಯವಾದ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯ ಹಣಕಾಸಿನ ವಿಷಯಗಳನ್ನು ಇನ್ಮುಂದೆ ಸರ್ಕಾರದ ಅಧೀನದಲ್ಲಿ ಇರಿಸಿಕೊಳ್ಳವ ನಿಟ್ಟಿನಲ್ಲಿ ಈಗಿರುವ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿರುವದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಿರ್ವವಾಗಿ ಖಂಡಿಸಿ ನಗರದ ಗೋಕುಲ ರಸ್ತೆಯ ಸಂಜೀವಿನಿ ಆಯುರ್ವೇದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾಲಯದ ಫಂಡ್‌ನ ಉಪಯೋಗಕ್ಕೆ ವಿಶ್ವವಿದ್ಯಾಲಯದ ಒಪ್ಪಿಗೆ ಇಲ್ಲದೆ ಸರಕಾರವೇ ಏಕಪಕ್ಷಿಯವಾಗಿ ಫಂಡ್ ಖರ್ಚು ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಿನ ತಿದ್ದು ಪಡಿ ಮಾಡಲು ಹೊರಟಿರುವುದು ವಿವಿಯ ಹಿತದೃಷ್ಟಿಯಿಂದ ಸಮಂಜಸವಲ್ಲ. ಯುನಿವರ್ಸಿಟಿಯ ಫಂಡ್ ಕುರಿತ ಎಲ್ಲಾ ನಿರ್ಣಯವನ್ನು ಯುನಿವರ್ಸಿಟಿಯ ಆಡಳಿತ ಮಂಡಳಿಗೆ ಬಿಡುವುದೇ ಸೂಕ್ತ. ಒಂದು ವೇಳೆ ಸರಕಾರವು ಯುನಿವರ್ಸಿಟಿಯ ಫಂಡ್ ನಿರ್ವಹಣೆ ಮಾಡುವ ಅವಕಾಶ ಪಡೆದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುವ ಸಂದರ್ಭವಿರುತ್ತದೆ. ಈ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಯುನಿವರ್ಸಿಟಿಯ ಫಂಡ್ ಕುರಿತು ಕಾನೂನು ತಿದ್ದುಪಡಿ ಮಾಡಬಾರದು.

ಶಿಕ್ಷಣ ಸಂಸ್ಥೆಗಳ ಒಟ್ಟು ಹಣಕಾಸಿನ ವಿಚಾರಗಳು ಸರ್ಕಾರದ ಅಧೀನಕ್ಕೆ ಬಂದರೆ ವಿವಿಯ ಹಣವು ಸರಿಯಾಗಿ ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ಉಪಯೋಗವಾಗದೆ ಸರ್ಕಾರಗಳ ಹಿತಾಸಕ್ತಿಯ ಆದಾರದ ಮೇಲೆ ನಡೆಯುತ್ತದೆ ಎಂಬ ಆತಂಕ ಶಿಕ್ಷಣ ತಜ್ಞರದ್ದು. ಅದರಲ್ಲೂ ಅತಿಹೆಚ್ಚು ಹಣಕಾಸಿನ ಠೇವಣಿ ಹೊಂದಿರುವ ವಿವಿಯಲ್ಲಿ ಭ್ರಷ್ಟಾಚಾರ ರಹಿತವಾದ ವಿದ್ಯಾರ್ಥಿಗಳಿಗೆ ಅನುಕೂಲಕರ ರೀತಿಯಲ್ಲಿ ಹಣಕಾಸಿನ ನಿರ್ವಹಣೆಯ ಅವಶ್ಯಕತೆ ಇದ್ದು ಮತ್ತು ಸರ್ಕಾರಗಳ ಅಧೀನದಲ್ಲಿ ಈ ಹಣಕಾಸಿನ ನಿರ್ವಹಣೆ ಬರದೆ ಸ್ವಾಯತ್ತತೆ ದೃಷ್ಟಿಯಿಂದ ಸರ್ಕಾರ ತನ್ನ ಪ್ರಸ್ತಾವನೆಯನ್ನು ಹಿಂಪಡೆಯಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.

ಪ್ರತೀಕ್ ಮಾಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಗಳು. ಅರುಣ್ ಅಮರಗೋಳ ಜಿಲ್ಲಾ ಸಂಚಾಲಕ ವಿದ್ಯಾನ೦ದ ರಮೇಶ ಲೋಖಂಡೆ ಗಂಗಾಧರ್ ಹಂಜಗಿ. ವಿನುತಾ ದೀಕ್ಷಿತ್. ಕಾಶಿನಾಥ್ ಮನೋರ್.ವೆಂಕಟೇಶ್ ಸೇರಿದಂತೆ ಇತರರಿದ್ದರು.

Related posts

ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮಾಹಿತಿ ಕೊಡುತ್ತೇನೆ: ಎಸ್.ವಿಜಯಕುಮಾರ

eNEWS LAND Team

ನೈಋತ್ಯ ರೈಲುಗಳ ಮಾರ್ಗ ಬದಲಾವಣೆ ಮಾಹಿತಿ

eNEWS LAND Team

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ CHANGE IN PATTERN OF TRAIN SERVICES

eNewsLand Team