27 C
Hubli
ಏಪ್ರಿಲ್ 20, 2024
eNews Land
ಸುದ್ದಿ

ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮಾಹಿತಿ ಕೊಡುತ್ತೇನೆ: ಎಸ್.ವಿಜಯಕುಮಾರ

ಇಎನ್ಎಲ್ ಕಲಘಟಗಿ: ಈ ಸಭೆಯಲ್ಲಿ ನಡೆದ ಮಾಹಿತಿಯನ್ನು ಪರಿಶೀಲಿಸಲು ವರಿಷ್ಠರಿಗೆ ಮಾಹಿತಿ ಕೊಡುತ್ತೇನೆಂದು ಎಸ್.ವಿಜಯಕುಮಾರ ಹೇಳಿದರು.
ಸ್ಥಳೀಯ 12 ಮಠದಲ್ಲಿ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಆಗಮಿಸಿದ ಅವರು ಕಲಘಟಗಿ ವಿಧಾನಸಭಾ ಮತಕ್ಷೇತ್ರ-75 ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕವು ಸೇರಿದಂತೆ (ಅಳ್ನಾವರ ಮತ್ತು ಕಲಘಟಗಿ ಬ್ಲಾಕ್ ಸೇರಿದಂತೆ) ತಾವು ಸಲ್ಲಿಸಿದ ಮನವಿಯನ್ನು ವರಿಷ್ಠರಿಗೆ ವರದಿ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ ನಾಗರಾಜ ಛಬ್ಬಿ ಮತ್ತು ಸಂತೋಷ ಲಾಡ್ ಒಳ್ಳೆಯ ಸ್ನೇಹಿತರಿದ್ದು, ಯಾವುದೇ ಭಿನ್ನಾಭಿಪ್ರಾಯ ಇಲ್ಲಾ, ಸಭೆಯಲ್ಲಿನ ಸಂಪೂರ್ಣ ಮಾಹಿತಿಯನ್ನು ವರಿಷ್ಠರಿಗೆ ಕೊಡುತ್ತೇನೆ ಎಂದರು.

ಬಹಳ ದಿನಗಳಿಂದ ಅಧ್ಯಕ್ಷರ ಆಯ್ಕೆಯಾಗದೇ ಕಾಂಗ್ರೆಸ್ ಪಕ್ಷ, ಹಾಗೂ ಕಾರ್ಯಕರ್ತರ ಸ್ಥಿತಿ ಗೊಂದಲಕ್ಕೆ ಸಿಲುಕಿದಂತಾಗಿದೆ. ಆದ್ದರಿಂದ ಆದಷ್ಟು ಬೇಗನೆ ಆಯ್ಕೆಯ ಪ್ರಕ್ರಿಯೆಯನ್ನು ಮುಗಿಸಲು ವೀಕ್ಷಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾಗರಾಜ ಛಬ್ಬಿ ಅವರು ತಾಲೂಕಿನಾದ್ಯಂತ ಜನಾನುರಾಗಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ಈ ಸಲ ವಿಧಾನಸಭಾ ಚುನಾವಣೆಗೆ ಛಬ್ಬಿ ಅವರಿಗೇ ಪಕ್ಷದ ಟಿಕೇಟ್ ನೀಡಲು ಕಾರ್ಯಕರ್ತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹುಲಿಕೇರಿ ಗ್ರಾಪಂ ಸದಸ್ಯ ಅಬೂಬಕ್ಕರ್ ನದಾಫ ಮಾತನಾಡಿ ಸಂತೋಷ ಲಾಡ್ ಅವರು ಕಲಘಟಗಿಗೆ ಕಾಲಿಡುವ ಮೊದಲು ಕಾಂಗ್ರೆಸ್ ಪಕ್ಷವನ್ನು ಸಕ್ರಿಯವಾಗಿ ಸಂಘಟಿಸಿದವರು ನಾಗರಾಜ ಛಬ್ಬಿಯವರು ಆದ್ದರಿಂದ ಈ ಸಲ ಕಲಘಟಗಿ ಮತಕ್ಷೇತ್ರ 75 ರ ಕಾಂಗ್ರೆಸ್ ಟಿಕೆಟ್ ಛಬ್ಬಿ ಅವರಿಗೇ ನೀಡಲು ಒತ್ತಾಯಿಸಿದರು.

ಇದನ್ನು ಓದಿ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮಾ ಅದ್ಧೂರಿ ಆಚರಣೆ

ಈ ಸಂದರ್ಭದಲ್ಲಿ ಅಣ್ಣಪ್ಪ ಓಲೇಕಾರ, ಮುತ್ತಣ್ಣ ಶಿವಳ್ಳಿ, ಶಾಂತಲಿಂಗ ಬೇರುಡಗಿ, ವಿರುಪಾಕ್ಷ ಮಡಿವಾಳರ, ನಾಗಪ್ಪ ಕನಕಪ್ಪನವರ, ತಮೀಮ್ ತೇರಗಾಂವ, ದಸ್ತಗೀರ ಹುಣಸಿಕಟ್ಟಿ, ನಾಗಪ್ಪ ಅಂಗಡಿ, ಸುಭಾಸ ಮುದಿಗೌಡ್ರ, ಶೇಕವ್ವ ಮಲಕನಕೊಪ್ಪ, ಮದನ ಕುಲಕರ್ಣಿ, ಸಂಗವ್ವ ಕುರಬರ, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ದಸ್ತಗೀರ

Related posts

ಮಲ್ಲೇಶ ಗುರುಸ್ವಾಮಿ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ

eNEWS LAND Team

ಮೂರು, ನಾಲ್ಕನೇ ರಂಗ ಸೃಷ್ಟಿಯಾದರೂ ಬಿಜೆಪಿಗೆ ಸಾಟಿಯಾಗಲ್ಲ: ಶೆಟ್ಟರ್

eNewsLand Team

ಅಣ್ಣಿಗೇರಿ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಶಾಖೆ ಗ್ರಂಥಪಾಲಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹ

eNEWS LAND Team