30 C
Hubli
ಮೇ 6, 2024
eNews Land
ಸುದ್ದಿ

ರೈತರು ರಸ್ತೆ ಬಂದ್‌ಗೊಳಿಸಿ ಪ್ರತಿಭಟನೆ, ಬೆಳೆಹಾನಿ ಪರಿಹಾರಕ್ಕೆ ಆಗ್ರಹ!

ಇಎನ್ಎಲ್ ಅಣ್ಣಿಗೇರಿ :– ಕೇಂದ್ರ, ರಾಜ್ಯ ಸರ್ಕಾರ, ಹಾಗೂ ಖಾಸಗಿ ವಿಮಾ ಕಂಪನಿ ಮುಂಗಾರು, ಹಿಂಗಾರು, ತೋಟಗಾರಿಕೆ, ಹಾಗೂ ಕೃಷಿ ಎಲ್ಲಾ ಬೆಳೆಗಳಿಗೂ ಪರಿಹಾರ ನೀಡಲು ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ತಾಲೂಕಿನ ಪಕ್ಷಾತೀತ ರೈತರು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ನೇತ್ರತ್ವದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.

 

ಪಟ್ಟಣದ ಬಸ್ ನಿಲ್ದಾಣ ಹತ್ತಿರುವಿರುವ ಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಆರಂಭಿಸಿದ ರೈತರು ರೈತ ಸಂಪರ್ಕ ಕೇಂದ್ರದ ಎದರುಗಡೆ ರಸ್ತೆ ಮೇಲೆ ಕುಳಿತು ವಾಹನ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರ-೬೯ ಅಣ್ಣಿಗೇರಿ ತಾಲೂಕಿನ ಎಲ್ಲಾ ರೈತರ ಬೆಳೆಗಳು ಅಕಾಲಿಕ ಮಳೆಯಿಂದ ಹಾನಿಯಾಗಿದ್ದು, ಖಾಸಗಿ ವಿಮಾ ಕಂಪನಿ ಹಾಗೂ ಸರ್ಕಾರದಿಂದ ಬೆಳೆ ಪರಿಹಾರ ನೀಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಣ್ಣಿಗೇರಿ ತಾಲೂಕ ಜೆಡಿಎಸ್ ಅಧ್ಯಕ್ಷ ಪ್ರದೀಪ ಲೆಂಕಿನಗೌಡ್ರ, ನಿಂಗಪ್ಪ ಬಡೆಪ್ಪನವರ, ಶಂಕರಪ್ಪ ಕುರಿ, ಭಗವಂತ ಪುಟ್ಟಣ್ಣವರ, ಹನಮಂತಪ್ಪ ಕಂಬಳಿ, ರೈತ ಮುಖಂಡರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಳೆಹಾನಿ ಪರಿಹಾರ ಕುರಿತು ರೈತರ ಬಗ್ಗೆ ತಾಳಿರುವ ಮಲತಾಯಿಧೋರಣೆಯನ್ನು ಖಂಡಿಸಿದರು.
ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, 2016-17 ರಲ್ಲಿ ಅಣ್ಣಿಗೇರಿ ವ್ಯಾಪ್ತಿಯ ರೈತರಿಗೆ ಮೆಣಸಿನಕಾಯಿ ಬೆಳೆಗೆ ಬೆಳೆ ಪರಿಹಾರ ಘೋಷಣೆಯಾದರೂ ರೈತರಿಗೆ ತಲುಪಿಲ್ಲ. 2018-19ರಿಂದ 21 ವರೆಗೆ ಕೇಂದ್ರ, ರಾಜ್ಯ ಸರ್ಕಾರ, ರೈತರ ವಂತಿಗೆ ಸೇರಿ ಖಾಸಗಿ ಮಿಮಾ ಕಂಪನಿಗೆ ಹಣ ಪಾವತಿಸಿದ್ದಾರೆ. ಖಾಸಗಿ ವಿಮಾ ಕಂಪನಿ ಕೇವಲ ಹಿಂಗಾರು ಬೆಳೆಗೆ ಮಾತ್ರ ಅರ್ಜಿ ಸ್ವೀಕರಿಸಿದ್ದಾರೆ.
ವಾಯುಭಾರ ಕುಸಿತದಿಂದ ನಿರಂತರ ಮಳೆ ಸುರಿದು ಅಪಾರ ಪ್ರಮಾಣದ ಮುಂಗಾರು ಬೆಳೆ, ಮೆಣಸಿನಕಾಯಿ, ಹತ್ತಿ, ಈರುಳ್ಳಿ, ಗೋವಿನಜೋಳ, ಲಕ್ಷಗಟ್ಟಲೆ ಆದಾಯ ತರುವ ಮೊದಲೇ ಬೆಳೆಹಾನಿ ಆಗಿದ್ದು, ಆರ್ಥಿಕವಾಗಿ ರೈತರು ಸಂಕುಷ್ಟದಲ್ಲಿದ್ದಾರೆ. ಕೊಯ್ಲಗೆ ಬಂದ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಮೆಣಸಿನಕಾಯಿ ಬೆಳೆಗೆ ಹೊಸ ವೈರಸ್ ತಗುಲಿ ಹಾಳಾಗಿವೆ. ಈರುಳ್ಳಿ ಸಂಪೂರ್ಣ ಕೊಳೆತುಹೋಗಿದೆ.ಹತ್ತಿ ಬೆಳೆ ಹಾಳಾಗಿದೆ. ವಿಮಾ ಕಂಪನಿಯವರು ಮುಂಗಾರು ಬೆಳೆಗೆ ಅರ್ಜಿ ಸೀಕರಿಸುತ್ತಿಲ್ಲ. ಕೇವಲ ಹಿಂಗಾರು ಬೆಳೆ ಕಡಲೆ ಗೋಧಿ, ಜೋಳ, ಕುಸುಬಿ. ಬೆಳೆಗೆ ಪರಿಹಾರ ಪರಿಗಣಿಸುತ್ತಿದ್ದಾರೆ. ರೈತರು, ಬ್ಯಾಂಕು, ಖಾಸಗಿ ಕೈಗಡ, ಸಾಲ ಪಡೆದು ಬೀಜ, ಗೊಬ್ಬರ, ಕೀಟಭಾದೆಗೆ ಆಳು-ಕಾಳುಗಳ ಕೃಷಿ ಚಟುವಟಿಕೆ ಖರ್ಚುವೆಚ್ಚಕ್ಕೆ ವಿನಯೋಗಿಸಿದ್ದು, ಆರ್ಥಿಕ ಸಂಕಷ್ಟದಲ್ಲಿ ರೈತರು ತೊಂದರೆ ಅನುಭವಿಸಿದಂತಾಗಿದೆ.
ಕಳೆದ ಜುಲೈ, ನವ್ಹಂಬರ ತಿಂಗಳಲ್ಲಿ ಅತಿವೃಷ್ಠಿ ಮಳೆಯಿಂದ ಬೆಳೆಹಾನಿಯಾಗಿದ್ದು ಮತ್ತೇ ಮಳೆ ಪ್ರಾರಂಭಗೊoಡಿದೆ. ರೈತರಿಗೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸುವುದೇ ಒಂದು ಉದ್ಯೋಗವಾಗಿದೆ. ವಿಮಾ ಕಂಪನಿ ರೈತರ ಅರ್ಜಿಸ್ವೀಕೃತಿ, ರಜಿಸ್ಟರ್ ನಮೂದಿಸದೇಅರ್ಜಿ ಪಡೆದು ನೂರಾರು ಅರ್ಜಿಯಲ್ಲಿ ಕೇವಲ 5 ರಿಂದ 10 ಅರ್ಜಿಗಳನ್ನು ಪರಿಗಣಿಸುತ್ತಿದ್ದಾರೆ. ಖಾಸಗಿ ಕಂಪನಿ ವಿರುದ್ಧ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹುಬ್ಬಳ್ಳಿ ಗೋಕುಲ ರಸ್ತೆ ಪೋಲಿಸ್ ಠಾಣೆಗೆ 26/11/2021 ರಂದು ದೂರು ದಾಖಲಿಸಿದ್ದಾರೆ. ಈವರೆಗೂ ಎಪ್.ಆಯ್.ಆರ್, ಮಾಡಿಲ್ಲ. ವಿಮಾ ಕಂಪನಿಗೆ ನೋಟಿಸ್ ನೀಡಿದ್ದು, ಮಾಹಿತಿ ಸಂಗ್ರಹಿಸಲು ಒಂದು ವಾರ ಬೇಕಾಗುತ್ತದೆಂದು ಪೋಲಿಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಎಂದು ದೂರಿದರು.
ತಾಲೂಕಿನ ಸಾರ್ವಜನಿಕ ರಸ್ತೆಗಳು, ಚಕ್ಕಡಿ ರಸ್ತೆಗಳು ಮಳೆಯಿಂದ ಸಂಪೂರ್ಣ ತಗ್ಗು ದಿನ್ನುಗಳಿಂದ ಅವರಿಸಿಕೊಂಡಿದ್ದು ಸಾರ್ವಜಿನಕರಿಗೆ ಸಂಚರಿಸಲು ತೊಂದರೆಯಾಗಿದೆ. ರೈತರು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ರಸ್ತೆ ದುರಸ್ತಿಗೊಳಿಸಿಬೇಕೆಂದರು. ಆಶ್ರಯ ಫಲಾನುಭವಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ರೈತ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ರೈತ ಮುಖಂಡರು,ತಾಲೂಕಿನ ಪಕ್ಷಾತೀತ ರೈತ ಹೋರಾಟ ಸಮಿತಿ ರೈತರು ಉಪಸ್ಥಿತರಿದ್ದರು.

Related posts

ದೇಶಭಕ್ತರನ್ನು ಗೌರವಿಸಿ- ವದಂತಿಗಳನ್ನು ಹರಡದಿರಲು ಸಿಎಂ ಮನವಿ

eNEWS LAND Team

ಧಾರವಾಡ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ಡಾ.ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ

eNewsLand Team

ಅಣ್ಣಿಗೇರಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆ

eNEWS LAND Team