28 C
Hubli
ಸೆಪ್ಟೆಂಬರ್ 21, 2023
eNews Land
ಸಿನೆಮಾ

ದಕ್ಷಿಣ ಏಷ್ಯಾದ ಗಣ್ಯರ ಪಟ್ಟಿಯಲ್ಲಿ ನಟ ಪ್ರಭಾಸ್‌ಗೆ ಮೊದಲ ಸ್ಥಾನ

ಇಎನ್ಎಲ್ ಫಿಲ್ಮ್ ಡೆಸ್ಕ್

ಬ್ರಿಟನ್‌ ಮೂಲದ ಈಸ್ಟರ್ನ್‌ ಐ  ವಾರಪತ್ರಿಕೆಯು ‘ಬಾಹುಬಲಿ’ ಖ್ಯಾತಿಯ ತೆಲುಗು ನಟ ಪ್ರಭಾಸ್‌ ಅವರನ್ನು 2021ನೇ ಸಾಲಿನಲ್ಲಿ ದಕ್ಷಿಣ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿರುವ ಗಣ್ಯ ವ್ಯಕ್ತಿ ಎಂದು ಹೆಸರಿಸಿದೆ.

ಬಿಲ್ಲಾ’, ‘ಡಾರ್ಲಿಂಗ್‌’ ಮತ್ತು ‘ಬಾಹುಬಲಿ’ ಸಿನಿಮಾಗಳಲ್ಲಿನ ತಮ್ಮ ಅಭಿನಯಕ್ಕೆ ಹೆಸರಾದ ಪ್ರಭಾಸ್‌ ಅವರು ಏಷ್ಯಾದ 50 ಗಣ್ಯರ ಪಟ್ಟಿಗೆ ಆಯ್ಕೆಯಾಗಿದ್ದು, ಈ ಪಟ್ಟಿ ‘ಈಸ್ಟರ್ನ್‌ ಐ’ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾಗಲಿದೆ.

ಈ ಪಟ್ಟಿಯಲ್ಲಿ ಬ್ರಿಟಿಷ್‌ ಪಾಕಿಸ್ತಾನಿ ನಟ, ಸಂಗೀತಕಾರ ರಿಜ್‌ ಅಹಮದ್‌ ಅವರು ದ್ವಿತೀಯ, ನಟಿ ಪ್ರಿಯಾಂಕಾ ಚೋಪ್ರಾ ಅವರು ಮೂರನೇ ಸ್ಥಾನ ಹಾಗೂ ಭಾರತೀಯ–ಅಮೆರಿಕನ್‌ ಮಿಂಡಿ ಕಲಿಂಗ್‌ ಅವರು ನಾಲ್ಕನೇ ಸ್ಥಾನ, ಗಾಯಕಿ ಶ್ರೇಯಾ ಘೋಷಾಲ್ ಅವರು ಐದನೇ ಸ್ಥಾನ ಪಡೆದಿದ್ದಾರೆ.

Related posts

ಅಪ್ಪು ನಿತ್ಯ ನಿರಂತರ ಜೀವಂತ : ಸಿಎಂ ಬೊಮ್ಮಾಯಿ

eNewsLand Team

Good news for RRR star Ram Charan: born baby

eNEWS LAND Team

ಸಖತ್ ಆಗಿದೆ ಶುರುವಾಗಿದೆ ಸಾಂಗ್‌

eNewsLand Team