26.4 C
Hubli
ಏಪ್ರಿಲ್ 18, 2024
eNews Land
ಸುದ್ದಿ

ದೇಶಭಕ್ತರನ್ನು ಗೌರವಿಸಿ- ವದಂತಿಗಳನ್ನು ಹರಡದಿರಲು ಸಿಎಂ ಮನವಿ

ಇಎನ್ಎಲ್ ಬೆಂಗಳೂರು:
ಶಿವಾಜಿ ಮಹಾರಾಜ್, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಇವರೆಲ್ಲರೂ ದೇಶಭಕ್ತರು. ಅವರನ್ನು ಗೌರವಿಸಬೇಕು ಹಾಗೂ ವದಂತಿಗಳನ್ನು ಹರಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ದೇಶಭಕ್ತರ ಹೆಸರಿನಲ್ಲಿ ವಿಭಜನೆ ಸಲ್ಲದು
ಶಿವಾಜಿ ಮಹಾರಾಜ್, ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ದೇಶಭಕ್ತರು.ದೇಶಕ್ಕೆ ಸ್ವತಂತ್ರ ತಂದುಕೊಟ್ಟು ದೇಶವನ್ನು ಒಗ್ಗೂಡಿಸಿದವರು. ಅವರ ಹೆಸರಿನಲ್ಲಿ ವಿಭಜನೆ ಮಾಡುವುದು ಖಂಡನೀಯ. ಇಂತಹ ಕೃತ್ಯಗಳನ್ನು ತೀವ್ರವಾಗಿ ಖಂಡಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಹಿಂಸಾಚಾರ ಸಹಿಸುವುದಿಲ್ಲ
ಹಿಂಸಾಚಾರ ಮಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಪುಂಡಾಟ ನಡೆಸುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿದ ಆರೋಪದಲ್ಲಿ 27 ಜನರನ್ನು ಬೆಳಗಾವಿಯಲ್ಲಿ ಹಾಗೂ ಮೂವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದರು.

ಸುಳ್ಳು ಸುದ್ದಿ ಹರಡಬೇಡಿ
ಕಳೆದ ಎರಡು ದಿನಗಳಿಂದ ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ. ಹೇಳದೆ ಇರುವುದನ್ನು ಹೇಳಲಾಗಿದೆ ಎಂದು ಬಿಂಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾಗಿದೆ. ದೇಶಭಕ್ತರ ಬಗ್ಗೆ ನನಗೆ ವಿಶೇಷ ಗೌರವ ಮತ್ತು ಆದರಗಳಿವೆ ಎಂದು ಸ್ಪಷ್ಟಪಡಿಸಿದರು. ಯಾರೂ ಸುಳ್ಳು ಸುದ್ದಿಗಳನ್ನಾಗಲಿ, ಪ್ರಚೋದನೆಯನ್ನಾಗಲಿ ಹರಡಬಾರದು ಎಂದು ಮನವಿ ಮಾಡಿದರು.

Related posts

ಬರ್ಬರ ಹತ್ಯೆಗೈದು ಹಳಿ ಮೇಲೆ ಒಗೆದುಹೋದ ದುಷ್ಕರ್ಮಿಗಳು

eNewsLand Team

ಹುಬ್ಬಳ್ಳಿ ಧಾರವಾಡದಲ್ಲಿ ಕ್ರಿಸ್‌ಮಸ್‌ ಮೆರುಗು

eNewsLand Team

ಬ್ಲಾಕ್ ಆ್ಯಂಡ್ ವೈಟ್ ನಂಬಿ ಕಲಘಟಗಿ ಕೆಲಸ ಬಿಟ್ಟ ವೈದ್ಯೆಗೆ ₹ 50 ಲಕ್ಷ ಪಂಗನಾಮ!!

eNewsLand Team