37 C
Hubli
ಮೇ 5, 2024
eNews Land
ಜಿಲ್ಲೆ

ಮಳೆ: ಧಾರವಾಡದಲ್ಲಿ ಶಾಲೆಗೆ ರಜೆ ಘೋಷಣೆ

ಇಎನ್ಎಲ್ ಧಾರವಾಡ:

ಜಿಲ್ಲೆಯಲ್ಲಿ ಗುರುವಾ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರವೂ ಮಳೆ ಮುಂದುವರಿಯುವುದಾಗಿ ಹವಾಮಾನ ಇಲಾಖೆ ವರದಿ ನೀಡಿದೆ. ಹೀಗಾಗಿ ಮುಂಜಾಗ್ರತೆಯಾಗಿ ನಾಳೆ, ನವೆಂಬರ 20 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಇಂದು ಸಂಜೆ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಜಿಲ್ಲೆಯ ಎಲ್ಲ ಶಾಲಾ ಮುಖ್ಯಸ್ಥರಿಗೆ, ವಿದ್ಯಾರ್ಥಿ ಪಾಲಕರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

23ರವರೆಗೆ ಮಳೆ ಮುಂದುವರಿಕೆ

ಜಿಲ್ಲೆಯಲ್ಲಿ ನಾಳೆಯಿಂದ (ನ.20 ರಿಂದ 23 ವರೆಗೆ) ಮುಂದಿನ ನಾಲ್ಕು ದಿನಗಳ ವರಗೆ ಈಗ ಆಗುತ್ತಿರುವ ಪ್ರಮಾಣದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಜಿಲ್ಲಾಡಳಿತದಿಂದ ಮಳೆ ಹಾನಿ ತಡೆಯಲು ಅಗತ್ಯಕ್ರಮ ವಹಿಸಿದ್ದು, ಕೆರೆ ಕಟ್ಟೆಗಳ ಕಡೆ ಜನ, ಜಾನುವಾರ ಹೋಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಚುನಾವಣಾ ಕರ್ತವ್ಯ ಲೋಪ;  ಹು.ಧಾ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿ ಮತಗಟ್ಟೆ ಅಧಿಕಾರಿ ನವೀನ ಸೂರ್ಯವಂಶಿರನ್ನು ಅಮಾನತ್ತುಗೊಳಿಸಿ ಡಿಸಿ ಆದೇಶ

eNEWS LAND Team

ಕುಡಿವ ನೀರಿಗೆ ಮೀಟರ್ ಅಳವಡಿಕೆಗೆ ವಿರೋಧಿಸಿ ದುಮ್ಮವಾಡದಲ್ಲಿ ಪ್ರತಿಭಟನೆ

eNewsLand Team

ಅಣ್ಣಿಗೇರಿ: ಮನಕುಲದ ಶ್ರೇಷ್ಠ ದಾರ್ಶನಿಕ ಕನದಾಸರು- ಡಾ.ಬಿ.ಎನ್.ಹೊಸಮನಿ

eNewsLand Team