36.8 C
Hubli
ಮಾರ್ಚ್ 29, 2024
eNews Land
ರಾಜಕೀಯ

ಕೃಷಿ ಕಾಯ್ದೆ ಹಿಂತೆಗೆತವನ್ನು ರೈತ ಸಂಘಟನೆಗಳು ಸ್ವಾಗತಿಸುತ್ತಿವೆ : ಸಿಎಂ

ಇಎನ್ಎಲ್ ಬೆಂಗಳೂರು

ಕೃಷಿ ಕಾಯ್ದೆಯ ಹಿಂತೆಗೆತವನ್ನು ರೈತ ಸಂಘಟನೆಗಳು ಸ್ವಾಗತಿಸುತ್ತವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಪ್ರಧಾನ ಮಂತ್ರಿಯವರು ರೈತರಿಗೆ ಸ್ಪಂದಿಸಿದ್ದಾರೆ. ಯಾವುದೇ ಕಾನೂನನ್ನು ಪ್ರಜಾಪ್ರಭುತ್ವದಲ್ಲಿ ರೂಪಿಸುವ ಸಂದರ್ಭದಲ್ಲಿ ಅದರ ಬಗ್ಗೆ ಪರ ವಿರೋಧ ವಾದಗಳು ಬರುವ ಹಿನ್ನೆಲೆಯಲ್ಲಿ ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ಪ್ರಧಾನಿಗಳು ನಿರೂಪಿಸಿರುವುದು ಅವರ ದೊಡ್ಡ ಗುಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರೈತ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳನ್ನು ಹೋರಾಟದಲ್ಲಿ ಭಾಗಿಯಾಗಿಸಿರಲಿಲ್ಲ ಹಾಗೂ ವೇದಿಕೆ ಹಂಚಿಕೊಂಡಿರಲಿಲ್ಲ. ಕಾಂಗೆಸ್ ಪಕ್ಷ ಇದು ಅವರ ಜಯ ಎಂದು ಭಾವಿಸುವುದು ತಪ್ಪು. ಇದರಿಂದ ಕಾಂಗ್ರೆಸ್ ಪಕ್ಷದ ರಾಜಕೀಯ ಕೆಳಮಟ್ಟಕ್ಕೆ ಇಳಿದಿರುವುದನ್ನು ಬಿಂಬಿಸುತ್ತದೆ ಎಂದು ಟೀಕಿಸಿದರು.

Related posts

ಚುನಾವಣೆಯಲ್ಲಿ ಬಿಜೆಪಿಗೇ ಮತ್ತೆ ಅಧಿಕಾರ: ಶೋಭಾ ಕರಂದ್ಲಾಜೆ

eNEWS LAND Team

ಅವಿರೋಧ ಆಯ್ಕೆ ಬೇಡ: ಕುಸ್ತಿನೇ ಬೇಕು: ಕಾಂಗ್ರೆಸ್ ನಾಯಕರಿಗೆ  ಸಿಎಂ ಬಹಿರಂಗ ಸವಾಲು

eNEWS LAND Team

ಪುನೀತ್ ಮನೆಗೆ ಸಿಎಂ ಭೇಟಿ

eNEWS LAND Team