23.8 C
Hubli
ಮಾರ್ಚ್ 28, 2023
eNews Land
ಜಿಲ್ಲೆ

ಕುಡಿವ ನೀರಿಗೆ ಮೀಟರ್ ಅಳವಡಿಕೆಗೆ ವಿರೋಧಿಸಿ ದುಮ್ಮವಾಡದಲ್ಲಿ ಪ್ರತಿಭಟನೆ

Listen to this article

ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಶ್ವಾಸನೆ ಮೇರೆಗೆ ಹೋರಾಟ ಹಿಂತೆಗೆತ

ಇಎನ್ಎಲ್ ಕಲಘಟಗಿ: ತಾಲೂಕಿನ ದುಮ್ಮವಾಡ ಗ್ರಾಮದಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಕೈಬಿಡಬೇಕೆಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಆರ್ ಕೆ ಎಸ್ ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಎಐಐಎಂಎಸ್ಎಸ್ ವತಿಯಿಂದ ಮೆರವಣಿಗೆ ನಡೆಸಿ , ಗ್ರಾಮ ಪಂಚಾಯಿತಿಯ ಎದುರು ಪ್ರತಿಭಟನೆ ನಡೆಸಿದರು.

https://youtu.be/avRyWOpuqt8

ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಕೈಬಿಡಬೇಕು, ನೀರು ಮಾರಾಟದ ವಸ್ತು ಅಲ್ಲ, ನೀರು ಮೂಲಭೂತ ಹಕ್ಕು,ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಗುರುನಾಥ ಬೇಟಗೇರಿ ಮನವಿ ಸ್ವೀಕರಿಸಿ ಮಾತನಾಡಿ ಯಾವುದೇ ಕಾರಣಕ್ಕೆ ದುಮ್ಮವಾಡ ಗ್ರಾಮದಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಸುವುದಿಲ್ಲ ಎಂಬ ಆಶ್ವಾಸನೆ ನೀಡಿದರು.

ಬಳಿಕ ಪ್ರತಿಭಟನಾಕಾರರು ಅಧ್ಯಕ್ಷರ ಭರವಸೆ ಮೇರೆಗೆ ಸಾಂಕೇತಿಕ ಪ್ರತಿಭಟನೆ ಮುಗಿಸುತ್ತಿದ್ದೇವೆ, ಮುಂದೆ ನಳಕ್ಕೆ ಮೀಟರ್ ಕೂಡಿಸಲು ಬಂದರೆ, ಅವಕಾಶ ನೀಡಲ್ಲ ಎಂದು ಎಚ್ಚರಿಕೆ ನೀಡಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಎಸ್ ) ಜಿಲ್ಲಾಧ್ಯಕ್ಷರಾದ ಮದುಲತಾ ಗೌಡರ್, ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿದರು. ಪ್ರತಿಭಟನೆ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ ವಹಿಸಿದ್ದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್,ಗ್ರಾಮ ಸಮಿತಿಯ ಸದಸ್ಯರಾದ ರೂಪಾ,ನಿರ್ಮಲಾ ಸಾವಿತ್ರಿ ಹೊಸಮನೆ, ಬಾಳಮ್ಮ ,ಲಕ್ಷ್ಮಿ , ಹೊಸಮನೆ, ಮಹಾದೇವಿ ಸೇರಿ ಹಲವರು ಇದ್ದರು.

Related posts

ಹುಬ್ಬಳ್ಳಿ: ನಕಲಿ ಬಂಗಾರ ಅಡವಿಟ್ಟು ಸಾಲ ಪಡೆದವ ಅಂದರ್

eNewsLand Team

ಹೊಲ್ತಿಕೋಟಿ ಕೆರೆ ದುರಸ್ತಿ ಆರಂಭ

eNewsLand Team

ಅಣ್ಣಿಗೇರಿ ಯಾವ ವಾರ್ಡಲ್ಲಿ‌ ಎಷ್ಟು ಮತದಾನ ಆಗಿದೆ ಗೊತ್ತಾ? ಇಲ್ನೋಡಿ

eNewsLand Team