ಇಎನ್ಎಲ್ ಅಣ್ಣಿಗೇರಿ
“ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ” ಎಂದು ಮನುಕುಲ ಶ್ರೇಷ್ಠ ದಾರ್ಶನಿಕ, ಸಂತ, ಕವಿ, ದಾಸಶ್ರೇಷ್ಠ ಕನಕದಾಸರೆಂದು ಪ್ರಾಚಾರ್ಯ ಬಿ.ಎನ್.ಹೊಸಮನಿ ಹೇಳಿದರು.
ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 534ನೇ ಕನಕದಾಸ ಜಯಂತಿ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನಕದಾಸರು ಉಡುಪಿಯ ಶ್ರೀ ಕೃಷ್ಣನನ್ನು ಒಲಿಸಿಕೊಂಡ ಪರಿಯನ್ನು ಅತ್ಯಂತ ವಿಶ್ಲೇಷಣಾತ್ಮಕವಾಗಿ ವಿವರಿಸಿದರು
ಬಿಜಾಪೂರ (ಕಣ್ಣೂರು) ಶಾಂತಿಕುಟೀರದ ಶ್ರೀ ಕೃಷ್ಣ ಮಹಾರಾಜರು ಪಾಲ್ಗೊಂಡು ಕನಕ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಡಾ.ಸುಧಾ ಎಸ್.ಕೌಜಗೇರಿ ಕನಕದಾಸರ ಸಮಗ್ರ ಜೀವನ ಬದುಕು, ಕುರಿತು ಮಾತನಾಡಿದರು. ಡಾ.ಎ.ಸಿ.ವಾಲಿ ಕನಕದಾಸರ ಭಕ್ತಿಗೀತೆ ಹಾಡಿದರು.
ಈ ವೇಳೆ ಕಾಲೇಜಿನ ಅಧ್ಯಾಪಕರ ವೃಂದ, ಸಿಬ್ಬಂದಿ ವರ್ಗ, ಉಮಾದೇವಿ ಕಣವಿ, ಗೋರಖ್‌ನಾಥ ಟಿಲೆ.ಆರ್,ಕೀರ್ತಿ ಕಳ್ಳೇರ, ವಿಜಯಲಕ್ಷ್ಮಿ ಪಾಟೀಲ, ಸೀಮಾ ಗ್ರಾಂಪುರೋಹಿತ್.,ಪಿ.ಎಚ್.ಹಿರೇಗೌಡ್ರ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.