37 C
Hubli
ಮೇ 7, 2024
eNews Land
ಸುದ್ದಿ

ದೀಪಾವಳಿ ಹೀಗೂ ಆಚರಿಬಹುದು ಎಂದು ತೋರಿಸಿದ ಹಾವೇರಿ ಡಿಸಿ

ಇಎನ್ಎಲ್ ಹಾವೇರಿ :

ಅನಾಥ ಮಕ್ಕಳೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಸಿಹಿ ವಿತರಿಸಿ ಶುಭ ಹಾರೈಸಿದರು.

ಗುರುವಾರ ಮಧ್ಯಾಹ್ನ ಅನಾಥಾಶ್ರಮದ ಮಕ್ಕಳು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯರನ್ನು ಮನೆಗೆ ಆಹ್ವಾನಿಸಿ ದೀಪಾವಳಿಯ ಆಚರಿಸಿದರು.

ಜಿಲ್ಲಾಧಿಕಾರಿಗಳಿಗೆ ಜೊತೆಯಾದ ಜಿಲ್ಲಾ ಪಂಚಾಯತ ಸಿಇಒ ಮಹಮ್ಮದ ರೋಷನ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ವೃದ್ಧರು ಮತ್ತು ಮಕ್ಕಳೊಂದಿಗಿನ ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸಿ ಬುಂದಿ ಹಾಗೂ ಬೆಸನ್ ಲಾಡು, ಚಾಕಲೇಟ್ ಹಾಗೂ ಬಾಳೆಹಣ್ಣು ವಿತರಿಸಿದರು.

ಆಶ್ರಮದಲ್ಲಿ ಸಿಹಿಯ ಹೋಳಿಗೆಯ ಊಟ ಸಿದ್ಧ ಪಡಿಸಲಾಗಿತ್ತು.
ಶಕ್ತಿ ವೃದ್ಧಾಶ್ರಮದಿಂದ 22 ಜನ ವಯೋವೃದ್ಧ ಪುರುಷರಿಗೆ ಶರ್ಟ್, ಪಂಚೆ, ಟವೆಲ್ ಹಾಗೂ ಮಹಿಳೆಯರಿಗೆ ಸೀರೆ, ರವಿಕೆ,ಟವೆಲ್ ಹಾಗೂ ಸರ್ಕಾರಿ ತೆರೆದ ತಂಗುದಾಣದಲ್ಲಿ ಆಶ್ರಯ ಪಡೆದಿರುವ 12 ಜನ ಮಕ್ಕಳು ಭಾಗವಹಿಸಿದ್ದು, ಬಾಲಕಿಯರಿಗೆ ಸ್ಕರ್ಟ್ ಹಾಗೂ ಬಾಲಕರಿಗೆ ಪ್ಯಾಂಟ್ ಶರ್ಟ್ ವಿತರಿಸಲಾಯಿತು.

ಮಕ್ಕಳಿಗೆ ಸಿಹಿ ಮತ್ತು ಬಟ್ಟೆ ವಿತರಿಸಿದ ಮಾತನಾಡಿದ ಜಿಲ್ಲಾಧಿಕಾರಿಗಳು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಸಂಪಾದಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ, ನಿಮಗೆ ಒಳ್ಳೆಯ ಭವಿಷ್ಯ ಸಿಗಲಿ ಎಂದು ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಆಲದರ್ತಿ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಅಂಕಿತಾ ವರ್ಮಾ ಮಹಮ್ಮದ ರೋಷನ್ ಇತರರು ಉಪಸ್ಥಿತರಿದ್ದರು.

Related posts

ಬ್ಲಾಕ್ ಆ್ಯಂಡ್ ವೈಟ್ ನಂಬಿ ಕಲಘಟಗಿ ಕೆಲಸ ಬಿಟ್ಟ ವೈದ್ಯೆಗೆ ₹ 50 ಲಕ್ಷ ಪಂಗನಾಮ!!

eNewsLand Team

ತಲೆ ತಗ್ಗಿಸಿ ನಿನ್ನ ಕೆಲಸ ಮಾಡಿದರೆ ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ: ಪ್ರಾಚಾರ್ಯ ಬಿರಾದಾರ

eNEWS LAND Team

ಅಣ್ಣಿಗೇರಿ ಪುರಸಭೆ ಚುನಾವಣೆ ಅಂಗಳದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ!!

eNEWS LAND Team