18 C
Hubli
ನವೆಂಬರ್ 30, 2022
eNews Land
ಸುದ್ದಿ

ಅಣ್ಣಿಗೇರಿ ಪುರಸಭೆ ಚುನಾವಣೆ ಅಂಗಳದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ!!

Listen to this article
ಇಎನ್ಎಲ್ ಅಣ್ಣಿಗೇರಿ: 
ತೆನೆ ಇಳಿಸಿ ಕೈ ಹಿಡಿದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ
ಜೆಡಿಎಸ್ ಪಕ್ಷದಲ್ಲಿ ಟಿಕೇಟ ಆಕಾಂಕ್ಷಿಗಳ ಗೊಂದಲ ಕೈ-ಕಮಲ ಪಕ್ಷಕ್ಕೆ ಸ್ಥಾನಪಲ್ಲಟ.
ಕಳೆದ ೨೪ ವರ್ಷ ತೆನೆ ಪಕ್ಷದಲ್ಲಿದ್ದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪಕ್ಷ ತೊರೆಯಲು ಕಾರಣವೇನು? ಜೆಡಿಎಸ್ ಪಕ್ಷ ರಾಜಕೀಯ ನೆಲೆ-ಬಲ-ಸ್ಥಾನ-ಮಾನ ಕೊಟ್ಟಿದ್ದರೂ ತೊರಿದ್ದಿದೇಕೆ? ಎಲ್ಲಿಯೂ ಬಹಿರಂಗವಾಗಿ ಮಾತೃ ಪಕ್ಷದ ಬಗ್ಗೆ ಆರೋಪದ ಪ್ರಸ್ತಾಪದ ಮಾತಗಳನ್ನಾಡದೇ, ನವಲಗುಂದ. ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಗಟ್ಟಿಗೊಳಿಸಿ,ಪಕ್ಷದ ಅಸ್ತಿತ್ವ ಉಳಿಸಿ, ತೆನೆ ಪಕ್ಷ ತೊರೆದು ಕೈ ಪಕ್ಷ ಸೇರಿದ್ದೇಕೆ? ಎಂಬ ಪ್ರಶ್ನೆ ಕೂತುಹಲ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತಿದೆ.
ಸದ್ದಿಲ್ಲದೇ ಕ್ಷೇತ್ರದ ಕಾರ್ಯಕರ್ತರು ಮುಖಂಡರು ಜೊತೆ ಸಮಾಲೋಚಿಸಿ, ತಮ್ಮ ಪಕ್ಷಾಂತರ ನಿಲವು ಬಗ್ಗೆ ತಿಳಿಸಿ,ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಕನ್ಯೆ ನೋಡಲಿಕ್ಕೆ ಹೋಗಿ ಮದುವೆ ಮಾಡಿಕೊಂಡ ಬಂದ್ಹಾoಗ  ಕೈ ಪಕ್ಷ ಸೇರಿದರು.
ಕಳೆದ ಸಲ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ೧೦ ಸ್ಥಾನ ಗೆದ್ದು ಪುರಸಭೆ ಆಡಳಿತೆ ತನ್ನ ತೆಕ್ಕೆಗೆ ಪಡೆದಿತ್ತು. ನಾಲ್ಕಾರು ಪುರಸಭೆ ಸದಸ್ಯರು ಹೈಕೊರ್ಟಗೆ ರಿಟ್ ಹಾಕಿದ ಪರಿಣಾಮ ಪುರಸಭೆ ಚುನಾವಣೆ ಕೋರ್ಟ ಆದೇಶ ಬರುವುವರೆಗೆ ಮುಂದೂಡಿತ್ತು. ಕಳೆದ ೩ ವರ್ಷಗಳಿಂದ ಜಿಲ್ಲಾಡಳಿತ ಆಧಿಕಾರವಿದ್ದರೂ ಪಟ್ಟಣ ಅಭಿವೃದ್ಧಿ ಕುಂಠಿತಗೊoಡಿತ್ತು.
ಇತ್ತ ಪುರಸಭೆ ಚುನಾವಣೆ ಡಿ.೨೭ ರಂದು ಘೋಷಣೆಯಾಗುತ್ತಿದ್ದಂತೆ, ಚುನಾವಣೆ ಅಖಾಡಕ್ಕೆ ಸ್ಪರ್ಧಿಸಲು ಅಭ್ಯರ್ಥಿಗಳ ಹುಮ್ಮಸ್ಸು, ಕಾತುರ ಮೀತಿಮೀರಿತ್ತು. ನಾಮಪತ್ರ ಸಲ್ಲಿಸಲು ಕೈ-ಕಮಲ,ತೆನೆ-ಅಮ್ ಆದ್ಮಿ ಪಕ್ಷ ಟಿಕೇಟ್ ಆಕಾಂಕ್ಷಿಗಳು ಒಟ್ಟು ೨೨೦ ರಷ್ಟು ಅಭ್ಯರ್ಥಿಗಳು ಪಕ್ಷಗಳಿಗೆ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರೀಯ ಪಕ್ಷಗಳ ಟಿಕೇಟಿಗೆ ಅಭ್ಯರ್ಥಿಗಳ ಇರಸು-ಮುರುಸಿನ-ತಿಕ್ಕಾಟದ ಪೈಪೋಟಿಗೆ  ಪಕ್ಷದ ಮುಖಂಡರಿಗೆ ಟಿಕೇಟ್ ಹಂಚಿಕೆ ತಲೆನೋವು ಆಗಿತ್ತು.
ಇಂತಹ ಸಂದರ್ಭದಲ್ಲಿ ಜೆಡಿಎಸ್‌ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಟಿಕೇಟ್ ನೀಡದೇ ಮಿಂಚಿನ ಸಂಚಲನದoತೆ ಕ್ಷೇತ್ರ ತೊರೆದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ತೆನೆ ಪಕ್ಷ ತೊರೆದು ಕೈ ಪಕ್ಷ ಸೇರಿದ ಪರಿಣಾಮ ರಂಗೇರಬೇಕಾದ ಪರಸಭೆ ಚುನಾವಣೆ ಅಖಾಡ ಕಣ ಕಳಚಿತ್ತು. ಜೆಡಿಎಸ್ ಪಕ್ಷದ ಬಿ ಫಾರ್ಮ್ ಪಡೆದು ಚುನಾವಣೆ ಅಖಾಡಕ್ಕೆ ನಿಲ್ಲುವ ಅಭ್ಯರ್ಥಿಗಳಿಗೆ ದಿಕ್ಕು ತೋಚದಂತಾಗಿತ್ತು.
ಕೆರೆಯಲ್ಲಿ ಈಜುವ ಮೀನಗಳು ಹೊರಕ್ಕೆ ಎಸೆದಂತೆ ಅಭ್ಯರ್ಥಿಗಳ ಪಾಡಾಗಿತ್ತು. ಹೊಳೆಯ್ಯಾಗ ಕೈಬಿಟ್ಟು, ತೆನೆ ಪಕ್ಷದ ಪುರಸಭೆ ಚುನಾವಣೆ ಆಕಾಂಕ್ಷಿಗಳನ್ನು ತೊರೆದು, ಕೈ ಪಕ್ಷ ಹಿಡಿದು ತೆನೆ ಅಭ್ಯರ್ಥಿಗಳಿಗೆ ಕಷ್ಟ ಇಟ್ಟ ಎಲ್ಲೋ ಎಂಬoತಾಗಿತ್ತು.
೪೦ ತೆನೆ ಪಕ್ಷದ ಆಕಾಂಕ್ಷಿಗಳು ಪಕ್ಷದ ನಾಯಕನಿಲ್ಲದೇ,ಒಕ್ಕಟ್ಟಿನ ಪಕ್ಷದ ಕಾರ್ಯಕರ್ತರ ಪಡೆಯಿಲ್ಲದೇ,  ಪಕ್ಷದ ಟಿಕೇಟ್ ಪಡೆದು ಮಾಡುವುದಾದರು ಎನು? ಎಂದು ತಮ್ಮಿಷ್ಟದಂತೆ ಕೈ-ಕಮಲ-ಅಮ್ ಅದ್ಮಿ ಪಕ್ಷ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವಲ್ಲಿ ತಿರ್ಮಾನಿಸಿ ಪುರಸಭೆ ಚುನಾವಣೆಗೆ ಸ್ಥಾನಪಲ್ಲಟ ಮಾಡಿ  ನಾಮಪತ್ರ ಸಲ್ಲಿಸಿದರು.
ತೆನೆ ಪಕ್ಷದಿಂದ ಕೈಪಕ್ಷ ಸೇರಿದ್ದ ಪ್ರಕಾಶ ಅಂಗಡಿ ಕೈ ಪಕ್ಷ ತೊರೆದು ಮತ್ತೆ ಮರಳಿ ತೆನೆ ಪಕ್ಷ ಸೇರಿ ತೆನೆ ಪಕ್ಷದ ಉಳಿವಿಗೆ ಟಿಕೇಟ್ ಆಕಾಂಕ್ಷಿಗಳಿಗೆ ಚೇತನಶಕ್ತಿ ತುಂಬಿ ಪುರಸಭೆ ಚುನಾವಣೆ ಅಖಾಡಕ್ಕೆ ೧೧ ಜನರಿಗೆ ಪಕ್ಷದ ಬಿ ಫಾರ್ಮ್ ನೀಡಿ ಕಣಕ್ಕಿಳಲು ಪಟ್ಟ ಶ್ರಮ ದೇವರೆ ಬಲ್ಲ ಎಂಬoತಾಗಿತ್ತು.

Related posts

ಸಂಘಟಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಬಜೆಟ್ ಪೂರಕ: ಜಗದೀಶ್ ಶೆಟ್ಟರ್

eNEWS LAND Team

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಶೀಘ್ರ ತೀರ್ಮಾನ : ಸಿಎಂ ಬೊಮ್ಮಾಯಿ

eNEWS LAND Team

ನೆನೆಸಿದ ಖರ್ಜೂರ, ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆದಂತಾರೆ? ಎಷ್ಟು ನಿಜ?

eNewsLand Team