29 C
Hubli
ಮೇ 3, 2024
eNews Land
ಸುದ್ದಿ

ಬ್ಯಾಂಕ್‌ಗಳಲ್ಲಿ ಕನ್ನಡಕ್ಕೆ ಆದ್ಯತೆ : ಡಿಸಿ ನಿತೇಶ್ ಪಾಟೀಲ

 

ಜಿಲ್ಲಾ ಲೀಡ್ ಬ್ಯಾಂಕ್ ಜಿಲ್ಲಾ ಗ್ರಾಹಕರ ಸಂಪರ್ಕ ಕಾರ್ಯಕ್ರಮ

ಗ್ರಾಹಕರು ಕಡಿಮೆ ಬಡ್ಡಿದರಲ್ಲಿ ಬ್ಯಾಂಕ್‌ಗಳಲ್ಲಿ ಸಿಗುವ ಸಾಲ ಸೌಲಭ್ಯ ಪಡೆಯಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ

ಹುಬ್ಬಳ್ಳಿ. ಅ.21:

ಗ್ರಾಹಕರು ಬ್ಯಾಂಕ್‌ಗಳಲ್ಲಿ ಹೌಸಿಂಗ್ ಲೋನ್, ಎಜುಕೇಶನ್, ವೆಹಿಕಲ್, ಕೃಷಿ, ಮುದ್ರಾ, ರಿಟೇನ್ ಲೋನ್ ಹಾಗೂ ವಿವಿಧ ರೀತಿಯಲ್ಲಿ ಯಾವುದಾದರೂ ಒಂದು ಲೋನ್ ಪಡೆದಿರುತ್ತಾರೆ. ಇನ್ನು ಕೆಲವರು ಬೇರೆ ವಲಯಗಳಲ್ಲಿ ಹೆಚ್ಚು ಬಡ್ಡಿಯ ಸಾಲ ಪಡೆದು ಮೀಟರ್ ಹಾಗೂ ಚಕ್ರ ಬಡ್ಡಿ ತುಂಬಿ ಶೋಷಿತರಾಗುತ್ತಿದ್ದಾರೆ. ಆದ್ದರಿಂದ ಯಾರು ಸಾಲ ಸೌಲಭ್ಯ ಪಡೆದಿಲ್ಲವೋ ಅವರು ಬ್ಯಾಂಕ್‌ಗಳಲ್ಲಿ ದೊರೆಯುವ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ರಾಹಕರಲ್ಲಿ ಮನವಿ ಮಾಡಿದರು.

ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಏರ್ಪಡಿಸಿದ ಜಿಲ್ಲಾ ಲೀಡ್ ಬ್ಯಾಂಕ್ ಜಿಲ್ಲಾ ಗ್ರಾಹಕರ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೇರೆ ವಲಯಗಳಲ್ಲಿ ಸಾಲ ಕೊಡುವವರು ಬ್ಲ್ಯಾಂಕ್ ಚೆಕ್ ನಲ್ಲಿ ಬರೆಸಿಕೊಂಡು ಲೋನ್ ಕೊಡುತ್ತಾರೆ. ಮುಂದೆ ಹೆಚ್ಚಿನ ಬಡ್ಡಿ ಹಾಗೂ ಚಕ್ರಬಡ್ಡಿ ಹಾಕುತ್ತಾರೆ. ಇದರಿಂದ ಅಸಲು ಸಹ ಕಟ್ಟಲಾಗದೆ ಜನರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಸಾಲದ ಹೊರೆಯಿಂದ ಪಾರಾಗಲು ಪಾಲಕರು ತಮ್ಮ ಮಗುವನ್ನು ಮಾರಿದ ಉದಾಹರಣೆಗಳಿವೆ. ಭಾರತದಲ್ಲಿ ಬ್ಯಾಂಕಿಂಗ್ ಸೆಕ್ಟರ್ ಬೆಳವಣಿಗೆಯಾದರೂ ಸಹ ಇನ್ನು ಲಕ್ಷಾಂತರ ಜನರಿಗೆ ತಲುಪಿಲ್ಲ. ಅದು ಗ್ರಾಮೀಣ ಪ್ರದೇಶಗಳಲ್ಲಿ ತಲುಪಬೇಕು ಎಂದರು.

ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ

ಗ್ರಾಮೀಣ ಪ್ರದೇಶದಲ್ಲಿ ಬಡವರು, ಅನಕ್ಷರಸ್ಥರು ಹಾಗೂ ರೈತರು ಬರುತ್ತಾರೆ. ಅವರಿಗೆ ಕನ್ನಡ ಹೊರತು ಪಡಿಸಿ ಬೇರೆ ಭಾಷೆ ಮಾತನಾಡಲು ಬರದ ಕಾರಣ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಗ್ರಾಹಕರು ಬ್ಯಾಂಕ್‌ಗೆ ತೆರಳಿದಾಗ ಮಾಹಿತಿ ನೀಡದೆ ಸತಾಹಿಸದೇ, ಸರಿಯಾಗಿ ಸ್ವಂದಿಸಬೇಕು. ಹಳ್ಳಿಯ ಜನರಿಗೆ ಬ್ಯಾಂಕ್ ಸಾಲ ಸೌಲಭ್ಯದ ಮಾಹಿತಿ ಕೊರತೆ ಇರುವುದರಿಂದ, ಬ್ಯಾಂಕಿನ ನಡೆ ಹಳ್ಳಿಯ ಕಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿ ಹಳ್ಳಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಸಂಗತಿ.
ಇದರಿಂದ ರೈತರಿಗೆ ಹಾಗೂ ಬಡವರಿಗೆ ಸಾಲ ಸೌಲಭ್ಯ ಸಬ್ಸಿಡಿಯ ಯೋಜನೆ
ಪಡೆಯಲು ಅನುಕೂಲವಾಗಲಿದೆ.
ಗ್ರಾಹಕರು ಬೆಳೆದಾಗ ಬ್ಯಾಂಕ್ ಬೆಳೆಯುತ್ತದೆ. ಬ್ಯಾಂಕ್ ಬೆಳೆದರೆ ದೇಶ ಅಭಿವೃದ್ಧಿಯಾಗುವುದು ಎಂದರು.

ಕರ್ನಾಟಕ ಎಸ್‌ಎಲ್‌ಬಿಸಿ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರಾವ್ ಮಾತನಾಡಿ, ಗ್ರಾಹಕರಿಗೆ
ಲೋನ್ ನೀಡುವುದಕ್ಕಾಗಿ ಒಟ್ಟು 170 ಕೋಟಿ
ರೂ. ಹಣ ಬಿಡುಗಡೆ ಮಾಡಲಾಗಿದೆ.
ಗ್ರಾಹಕರು ವಂಚಕರಿಂದ ತಪ್ಪಿಸಿಕೊಳ್ಳಬೇಕು. ಬ್ಯಾಂಕ್ ಹೆಸರು ಹೇಳಿ ಕರೆ ಮಾಡಿ ಮಾಹಿತಿ ಪಡೆದು ವಂಚಿಸುತ್ತಾರೆ. ಯಾವುದೇ ಕಾರಣಕ್ಕೂ ಓಟಿಪಿಯನ್ನು ಗ್ರಾಹಕರು ಹಂಚಿಕೊಳ್ಳಬೇಡಿ. ಬ್ಯಾಂಕ್ ಗಳು ಸಾಕಷ್ಟು ಯೋಜನೆಗಳನ್ನು ಗ್ರಾಹಕರಿಗಾಗಿ ತಂದಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಮನೆ ಕಟ್ಟಲು ಶೇ.7 ರಷ್ಟು ಬಡ್ಡಿದರಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ ಆರ್. ಸ್ವಾಗತಿಸಿ ಮಾತನಾಡಿ, ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಬ್ಯಾಂಕ್ ಸೌಲಭ್ಯದ ಅರಿವು ಮೂಡಿಸಲು ಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗೂ ಸಾಲ ಮುಂಜೂರಾತಿ ಪತ್ರವನ್ನು ಸಹ ವಿತರಿಸಲಾಗುವುದು. ಬ್ಯಾಂಕಿನ ನಡೆ ಹಳ್ಳಿಯ ಕಡೆ ಎಂಬ ಧ್ಯೆಯ ವಾಕ್ಯದೊಂದಿಗೆ ಗ್ರಾಮೀಣ ಜನರಿಗೆ ಯೋಜನೆ ಬಗ್ಗೆ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಚೇರ್ಮನ್ ಗೋಪಿಕೃಷ್ಟ ಮಾತನಾಡಿ,
ಗ್ರಾಹಕರ ಸಂಪರ್ಕ ಕಾರ್ಯಕ್ರಮವು
ಒಂದು ದಿನದ ಕಾರ್ಯಕ್ರಮವಲ್ಲ.
ವಾರದಲ್ಲಿ ಒಂದು ದಿನ ನಮ್ಮ ಬ್ಯಾಂಕ್ ಸಿಬ್ಬಂದಿ ಹಳ್ಳಿಗಳಿಗೆ ತೆರಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೋವಿಡ್ ಸಂದರ್ಭದಲ್ಲಿಯೂ ಕೂಡ ಬ್ಯಾಂಕ್‌ಗಳು ಉತ್ತಮ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಿವೆ ಎಂದರು.

ಬ್ಯಾಂಕ್ ಆಫ್ ಬರೋಡ ಉಪವಲಯ ಮುಖ್ಯಸ್ಥ ಗೋಪಾಲಕೃಷ್ಣ ಮಾತನಾಡಿ,
ಯಾರೇ ಸಾಲ ಸೌಲಭ್ಯ ಪಡೆದರು ಮರಳಿ ಸಾಲ ಮುಟ್ಟಿಸಬೇಕು. ಅಂದಾಗ ಬ್ಯಾಂಕ್ ಅಭಿವೃದ್ಧಿ ಯಾಗುವುದು. ಗ್ರಾಹಕರಿಗೆ ಮನೆ ನಿರ್ಮಾಣ ಮಾಡಲು ಬ್ಯಾಂಕ್‌ಗಳು ಶೇ. 6.5 ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ. ಎಲ್ಲ ಬ್ಯಾಂಕ್‌ಗಳು ಗ್ರಾಹಕರನ್ನು ಮುಗುಳುನಗೆಯಿಂದ ಬರಮಾಡಿಕೊಳ್ಳಬೇಕು. ಕನ್ನಡಿಯಲ್ಲಿಯೇ ಮಾತನಾಡಬೇಕು ಎಂದರು.

ಯುಸಿಒ ಬ್ಯಾಂಕ್ ಮ್ಯಾನೇಜರ್ ರವಿಶಂಕರ್ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಗ್ರಾಹಕರಿಗೆ ಸಾಲ ಸೌಲಭ್ಯದ ಮಂಜೂರಾತಿ ಪತ್ರ ಹಾಗೂ ಚೆಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ವಿ. ಅಮರಶೆಟ್ಟಿ, ಇಂಡಿಯನ್ ಬ್ಯಾಂಕ್ ಮಾನ್ಯೆಜರ್ ಕನಕಾ, ಬ್ಯಾಂಕ್ ಆಫ್ ಬರೋಡಾ ರಿಜಿನಲ್ ಮ್ಯಾನೇಜರ್ ಮಟ್ಟಿ ಚಕ್ರವರ್ತಿ, ವಿವಿಧ ಬ್ಯಾಂಕ್‌ಗಳ ಸಿಬ್ಬಂದಿ ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು.

Related posts

ಆಸ್ಪತ್ರೆಗೆ ಮಗು ತೋರಿಸಲು ಬಂದ ದಂಪತಿ ಅಪಘಾತದಲ್ಲಿ ಸಾವು, ಮಗು ಸ್ಥಿತಿ ಹೇಗಿದೆ?

eNewsLand Team

ಅತಿವೃಷ್ಟಿಗಾಗಿ ತುರ್ತು ಸಭೆ : ರೈತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ: ಶಾಸಕ ನಿಂಬಣ್ಣವರ

eNEWS LAND Team

ಕನ್ನಡ ನಾಡು ಉಳಿಸಿ ಬೆಳಸಿ ಕನ್ನಡ ಮನಸ್ಸುಗಳನ್ನು ಕಟ್ಟಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

eNEWS LAND Team