27 C
Hubli
ಮೇ 25, 2024
eNews Land
ಸುದ್ದಿ

ಅತಿವೃಷ್ಟಿಗಾಗಿ ತುರ್ತು ಸಭೆ : ರೈತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ: ಶಾಸಕ ನಿಂಬಣ್ಣವರ

ಇಎನ್ಎಲ್ ಕಲಘಟಗಿ: ತಾಲೂಕಿನಲ್ಲಿ ಕಳೆದ 8-10 ದಿನಗಳಿಂದ ಬಿಡುವಿಲ್ಲದೇ ಮಳೆ ಸುರಿಯುತ್ತಿದೆ, ಕೃಷಿಕರಿಗೆ ಹಾಗೂ ಬೆಳೆಗಳ ಮೇಲೆ ತೀವ್ರ ಪೆಟ್ಟು ಬೀಳುತ್ತಿದೆ, ರೈತ ನೆಮ್ಮದಿಯಿಂದ ಇರಲು ಎಲ್ಲ ಇಲಾಖೆಯವರು ಸಹಕರಿಸಿರಿ, ಆಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಶಾಸಕ ಸಿ.ಎಮ್. ನಿಂಬಣ್ಣವರ ಹೇಳಿದರು.

ಇದನ್ನು ಓದಿ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ

   ಸ್ಥಳೀಯ ತಾಲೂಕು ಪಂಚಾಯತ ಸಭಾ ಭವನದಲ್ಲಿ ತುರ್ತು ಸಭೆ ಕರೆದು, ತಾಲೂಕಿನಲ್ಲಿ ಹಸಿಮೆಣಸಿನಕಾಯಿ ಬೆಳೆಯು ಹಾನಿಯಾಗುತ್ತಿರುವುದು ರೈತರಿಂದ ನನಗೆ ದೂರುಗಳು ಬರುತ್ತಿವೆ, ತಕ್ಷಣವೇ ಆಯಾ ಇಲಾಖೆಯ ಅಧಿಕಾರಿಗಳು ರೈತರ ಜಮೀನಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಿರಿ ಎಂದರು

ಇದನ್ನೂ ಓದಿಫ್ಯಾಷನ್‌ಯುಗ ಮಹಿಳೆಯರಿಗೆ ಪೂರಕ: ಭಾಗ್ಯಶ್ರೀ ಜಾಗೀರದಾರ

ಇದು ಮಲೆನಾಡಿನ ಸೆರಗು, ರೈತರು ತುಂಬಾ ಕಷ್ಟ ಪಡುತ್ತಾರೆ, ಕಬ್ಬು ಬೆಳೆ ಹೊರತುಪಡಿಸಿ ಗೋವಿನ ಜೋಳ, ಸೊಯಾಬೀನ, ಮುಂತಾದ ಬೆಳೆಗಳಿಗೆ ತುಂಬಾ ಹಾನಿಯಾಗುತ್ತಿದೆ, ಕೃಷಿ ಅಧಿಕಾರಿಗಳೂ ಸಹ ಕ್ಷೇತ್ರಗಳಿಗೆ ಭೇಟಿ ನೀಡಿ ಎಂದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್. ಕಟ್ಟೇಗೌಡರ ಮಾತನಾಡಿ ಸಿಬ್ಬಂದಿಯು ಕಡಿಮೆಯಿದೆ, ತಾವುಗಳು ನಮ್ಮ ವರದಿಯನ್ನು ಆಧರಿಸಿ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಬೇಕೆಂದು ಬೇಡಿಕೆ ಇಟ್ಟರು. ಶಿಕ್ಷಣ ಇಲಾಖೆಗೆ ಸಂಬoಧಪಟ್ಟoತೆ ತಾಲೂಕಿನಲ್ಲಿ ಅನೇಕ ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು ನನಗೆ ವರದಿಗಳು ಬಂದಿವೆ, ಅನೇಕ ಶಾಲೆಗಳಲ್ಲಿ ಶೌಚಾಲಯಗಳ ಕೊರೆತೆ ಇದೆ, ನರೇಗಾ ಯೋಜನೆಯಲ್ಲಿ ಇವುಗಳಿಗೆ ಸರ್ಕಾರವು ಅವಕಾಶಗಳನ್ನು ಕಲ್ಪಿಸಿದೆ, ತಾವು ಖುದ್ದಾಗಿ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಯೋಜನಾ ವರದಿ ತಯಾರಿಸಿ ಮಕ್ಕಳಿಗೆ ತೊಂದರೆಯಾಗದoತೆ ನಿಗಾ ವಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಅವರಿಗೆ ಸೂಚಿಸಿದರು. ಶಿಕ್ಷಕಿಯರೊಬ್ಬರ ಕುರಿತು ಧರಣಿ ಕುಳಿತ ವಿಷಯವು ನನ್ನ ಗಮನಕ್ಕೆ ಬಂದಿದೆ, ಕರ್ತವ್ಯ ಲೋಪ ಇದ್ದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹೇಳಿದರು. ಕಲಘಟಗಿಯು ಈಗ ಸ್ವಂತ ಡಿಪೋ ಹೊಂದಿದೆ, ಆದರೂ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ನಮ್ಮೆಲ್ಲರ ಕರ್ತವ್ಯ, ಇಲ್ಲಿನ ಮಕ್ಕಳು ದಾಸ್ತಿಕೊಪ್ಪದ ಸೈನ್ಸ್ ಹಾಗೂ ಡಿಗ್ರಿ  ಕಾಲೇಜುಗಳಿಗೆ ಹೋಗುತ್ತಾರೆ, ಅವರ ವಿದ್ಯಾರ್ಜನೆಗೆ ತೊಂದರೆಯಾಗದoತೆ ಅನೂಕೂಲ ಕಲ್ಪಿಸಿರಿ ಎಂದು ಡಿಪೋ ಮ್ಯಾನೇಜರಗೆ ಸೂಚಿಸಿದರು. ವಿದ್ಯುತ್ ಇಲಾಖೆಗೆ ಸಂಬoಧಪಟ್ಟoತೆ ಗುತ್ತಿಗೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ, ಬಡವರಿಗೆ ಬೆಳಕು ಯೋಜನೆ, ನಿರಂತರ ಜ್ಯೋತಿ, ಗಂಗಾ ಕಲ್ಯಾಣ, ಇನ್ನಿತರ ಎಲ್ಲ ಯೋಜನೆಗಳಿಗೂ ಸಮರ್ಪಕ ಸೇವೆ ಕೊಡಿರಿ ಎಂದರು.

ಇದನ್ನು ಓದಿ ಮನೆ ಮನೆಗೆ ಕೃಷಿ ಮಾಹಿತಿ ರಥ: ಶಾಸಕ ನಿಂಬಣ್ಣವರ

ಗ್ರಾಮಗಳ ಅಭಿವೃದ್ಧಿಗಳಲ್ಲಿ ಸಹಕರಿಸದ ಪಿಡಿಓ ಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿರಿ, ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ ಎಂದು ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗೀರದಾರ ಅವರಿಗೆ ಹೇಳಿದರು.  ನಾನು ತಾಲೂಕಿನ ಶಾಸಕನೂ ಹೌದು, ಸೇವಕನೂ ಹೌದು, ತಾವೆಲ್ಲ ಅಧಿಕಾರಿಗಳು ಸಹಕರಿಸಿರಿ ಎಂದರು. ಪೋಲಿಸ್ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನು ಓದಿ ನಿಮ್ಮದು ಕಳಂಕ ರಹಿತ ಸೇವೆ: ಸಿ.ಎಮ್.ನಿಂಬಣ್ಣವರ
     

Related posts

ನುಂಗಣ್ಣ ಕ್ಷೇತ್ರದ ಶಾಸಕರಾದರೆ ಹಾನಗಲ್ಲ ಉಳಿತದಾ ? ಸಿದ್ರಾಮಯ್ಯ ಪ್ರಶ್ನೆ …?

eNEWS LAND Team

ಧಾರವಾಡ ಜಿಲ್ಲೆಯ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಶೇ.100 ರಷ್ಟು ಕೋವಿಡ್ ಮೊದಲ ಡೋಸ್ ಲಸಿಕೆ

eNEWS LAND Team

ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

eNEWS LAND Team