26.4 C
Hubli
ಮೇ 12, 2024
eNews Land
ಸುದ್ದಿ

ಅಣ್ಣಿಗೇರಿ ಪುರಸಭೆ… ಅಧ್ಯಕ್ಷಗಿರಿ ಮೆಹಬೂಬಿ… ಯಾವ ಪಕ್ಷ? ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೇ ನೋಡಿ ಮತ್ತು ಶೇರ್ ಮಾಡಿ

ಇಎನ್‌ಎಲ್ ಅಣ್ಣಿಗೇರಿ: ಪಟ್ಟಣದ ಅಂಬಿಕಾನಗರ ನಗರದ 22ನೇ ವಾರ್ಡಿನ ಪುರಸಭೆ ಸದಸ್ಯೆ ಮೆಹಬೂಬಿ ಹಜರೇಸಾಬ ನವಲಗುಂದ ಇಂದು ನಡೆದ ಪುರಸಭೆ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿ, ಪ್ರತಿಸ್ಪರ್ಧಿ 8ನೇ ವಾರ್ಡಿನ ಜಾಡಗೇರಿ ಒಣಿಯ ಸದಸ್ಯೆ ಅಮಿನಾಬೇಗಂ ಬಾರಿಗಿಡದ ಅವರನ್ನು ಪರಾಭವಗೊಳಿಸಿ  ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದರು.

  ಅಣ್ಣಿಗೇರಿ ಪುರಸಭೆಗೆ 23 ವಾರ್ಡುಗಳಿದ್ದು 23 ಸದಸ್ಯರಲ್ಲಿ 12 ಕಾಂಗ್ರೆಸ್, 5 ಬಿಜೆಪಿ, 6 ಪಕ್ಷೇತರ ಸದಸ್ಯರಿದ್ದಾರೆ. ಪುರಸಭೆ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಒಲದಿತ್ತು. 30 ತಿಂಗಳ ಅವಧಿಯಲ್ಲಿ ಈಗಾಗಲೇ ಪ್ರತಿ  10 ತಿಂಗಳ ಕಾಲಾವಧಿಗೆ ಸರದಿ ಪ್ರಕಾರ  ಗಂಗಾ ಕರೆಟ್ಟನವರ, ರಜೀಯಾಬೇಗಂ ರೊಕ್ಕದಕಟ್ಟಿ, ಸದ್ಯ ಮಹಬೂಬ್ಬಿ ಹಜರೇಸಾಬ ನವಲಗುಂದ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೆಹಬೂಬಿ ನವಲಗುಂದ ಹಾಗೂ ಅಮೀನಾಬೇಗಂ ಬಾರಿಗಿಡದ ಪಕ್ಷದ ಅಂತರಿಕ ಭಿನ್ನಾಭಿಪ್ರಾಯಗಳಿಂದ ಎರಡು ಬಣಗಳಾದ ಹಿನ್ನಲೆಯಲ್ಲಿ ಪುರಸಭೆ ಅಧ್ಯಕ್ಷ ಚುನಾವಣೆಗೆ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು.
ಮೆಹಬೂಬಿ ನವಲಗುಂದ ಅವರಿಗೆ  ಕಾಂಗ್ರೆಸ್, ಬಿಜೆಪಿ, ಪಕ್ಷೇತರ, ಅಭ್ಯರ್ಥಿಗಳು ಕೈಎತ್ತಿ ಬೆಂಬಲಿಸುವುದರ ಮೂಲಕ  13 ಮತಗಳನ್ನು ಪಡೆದು ಅಧ್ಯಕ್ಷ ಚುನಾವಣೆಯಲ್ಲಿ ವಿಜಯ ಸಾಧಿಸಿದರು. ಪ್ರತಿಸ್ಪರ್ಧಿ ಅಮೀನಾಭೇಗಂ ಬಾರಿಗಿಡದ 11 ಮತಗಳನ್ನು ಪಡೆದರು.  ಮೊದಲ ಎರಡುವರೆ ವರ್ಷದ  30 ತಿಂಗಳ ಅವಧಿಯ ಕೊನೆಯ  ಅವಧಿಗೆ ಪುರಸಭೆ ಅಧ್ಯಕ್ಷರಾಗಿ ಮೆಹಬೂಬಿ ನವಲಗುಂದ  ಆಯ್ಕೆಯಾದರೆಂದು ಚುನಾವಣೆ ಅಧಿಕಾರಿ ಶಿವನಾಂದ ಹೆಬ್ಬಳ್ಳಿ ಘೋಷಿಸಿದರು.

ಕಾಂಗ್ರೆಸ್ ಪಕ್ಷದ ಎರಡು ಬಣಗಳ ನಡುವಿನ ಅಂತರಿಕ ಕಲಹ ಭಿನ್ನಾಭಿಪ್ರಾಯಗಳಿಂದ ತುರುಸಿನ ನಿರ್ಣಯದ ಪೈಪೋಟಿಯಲ್ಲಿ ಪುರಸಭೆ ಅಧ್ಯಕ್ಷ ಚುನಾವಣೆ ಜಿದ್ದಾಟದಲ್ಲಿ ಒಂದು ಬಣ ಗೆಲವು ಕೇಕೇ ಹಾಕಿದ್ದರೂ ನಮ್ಮ ಪಕ್ಷದ ಅಭ್ಯರ್ಥಿಯೇ ಅಧ್ಯಕ್ಷರಾಗಿದ್ದರಿಂದ ಪಕ್ಷದ ಎಲ್ಲಾ ಸದಸ್ಯರು ಒಮ್ಮತ ಒಗ್ಗಟ್ಟಿನಿಂದ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಿ ಬೆಂಬಲಿಸಬೇಕೆoದು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿ, ಶಾಸಕ ಎನ್.ಎಚ್.ಕೋನರಡ್ಡಿ ಸದಸ್ಯರಿಗೆ ಕಿವಿ ಮಾತು ಹೇಳಿದರು.

ಪುರಸಭೆಗೆ ನೂತನವಾಗಿ ಆಯ್ಕೆಯಾದ ಮೆಹಬೂಬಿ ಎಚ್.ನವಲಗುಂದ ಅಧ್ಯಕ್ಷರನ್ನು ಅಭಿಮಾನಿಗಳು, ಪುರಸಭೆ ಸದಸ್ಯರು, ಸಾರ್ವಜನಿಕರು, ವಾರ್ಡಿನ ಗುರುಹಿರಿಯರು, ಮಹಿಳೆಯರು, ಮತಭಾಂದವರು, ಹಿತೈಷಿಗಳು,  ಪುಷ್ಪಾರ್ಪಣೆ ಮಾಡಿ, ಅಭಿನಂದಿಸಿದರು. 
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಪೋಲಿಸ್ ಇನ್ಸ್ಪೆಕ್ಟರ್ ಸಿದ್ಧಾರೂಢ ಆಲದಕಟ್ಟಿ, ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಕರಡ್ಡಿ, ಪುರಸಭೆ ಸರ್ವ ಸದಸ್ಯರು, ಸಿಬ್ಬಂದಿ  ವರ್ಗ ಉಪಸ್ಥಿತರಿದ್ದು ಆಯ್ಕೆಯಾದ ಅಧ್ಯಕ್ಷರನ್ನು ಅಭಿನಂದಿಸಿದರು. ಪೋಲಿಸ್ ಇಲಾಖೆ ಪುರಸಭೆ ಸುತ್ತಮುತ್ತಲೂ ಕಟ್ಟುನಿಟ್ಟಿನ ಬಂದೋಬಸ್ತ್ ಕಲ್ಪಿಸಿತ್ತು.

Related posts

ಹೌ ಟು ಮೇಕ್ ಮನಿ ಎಂದು ಇಟ್ಟರು ಗುನ್ನಾ! ನಿಮ್ಮ ವಾಟ್ಸ್ ಆ್ಯಪ್ ಮೂಲಕ ಲಕ್ಷಕ್ಕೆ ಹೊಡಿಬಹುದು ಕನ್ನಾ!

eNewsLand Team

ಅಣ್ಣಿಗೇರಿ ತಾಲೂಕಾ ಕಸಾಪ ಕಾರ್ಯಕಾರಣಿ ಸಭೆ

eNEWS LAND Team

ನೀತಿ ನಿಯಮಗಳ ಆಡಳಿತ ಬೇಕು: ಶಾಸಕ ನಿಂಬಣ್ಣವರ

eNEWS LAND Team