ಇಎನ್ಎಲ್ ಕಲಘಟಗಿ: ಪ್ರಪoಚದ ಅನೇಕ ದೇಶಗಳ ಸಂವಿಧಾನಗಳ ತಿರುಳುಗಳನ್ನು ಅಧ್ಯಯನ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶದ ಶ್ರೇಷ್ಠ ಸಂವಿಧಾನವನ್ನು ರಚನೆ ಮಾಡಿದರು. ಜಾರಿಗೆ ತರುವವರು ಭ್ರಷ್ಟರಾದರೆ ಪ್ರಜಾ ಪ್ರಭುತ್ವವೂ ಹಾಳಾಗುತ್ತದೆ. ಆದ್ದರಿಂದ ನಮಗೆ ನೀತಿ – ನಿಯಮಗಳ ಆಡಳಿತ ಬೇಕು ಎಂದು ಹೇಳಿದರು. ಸ್ಥಳೀಯ ಪಟ್ಟಣದ ಶಾಸಕರ ಮಾದರಿ ಕೇಂದ್ರ ಶಾಲಾ ಆವರಣದಲ್ಲಿ 73ನೇ ರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರಜಾಪ್ರಭುತ್ವವು ಉಳ್ಳವರ ಪಾಲಾಗುತ್ತಿದೆ, ನಮ್ಮಲ್ಲಿ 90 ಕೋಟಿ ಮತದಾರರಿದ್ದಾರೆ, ಮುಂದಿನ ದಿನಗಳಲ್ಲಿ ಹಣಕ್ಕಾಗಿ ಬೆಲೆ ಕೊಡದೇ ಎಚ್ಚೆತ್ತು ಉತ್ತಮ ಪ್ರತಿನಿಧಿಗಳನ್ನು ಆರಿಸಿ ಕಳಿಸಿದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವದ ಉಳಿವು ಸಾಧ್ಯ, ಇದೇ ರೀತಿ ಮುಂದುವರಿದರೆ ನಮ್ಮ ದೇಶವು ಗಂಡಾoತರ ಸ್ಥಿತಿಗೆ ಹೋಗುತ್ತದೆ, 12ನೇ ಶತಮಾನದಲ್ಲೇ ಬಸವಣ್ಣನವರ ಕಾಲದಲ್ಲಿ ಸಂವಿಧಾನ ರಚನೆಯಾಯಿತು, ಚಿಂತನ-ಮoಥನ, ಒಳಿತು-ಕೆಡಕು, ಕಾಯಕ ಸಿದ್ಧಾಂತ, ಜಾತಿರಹಿತ ಸಂವಿಧಾನವು ಜನಕಲ್ಯಾಣಕ್ಕೋಸ್ಕರ ಯಾರೂ ಉಪವಾಸ ಇರಬಾರದು ಎಂಬ ತತ್ವ ಸಿದ್ಧಾಂತಗಳು ಆಗಲೇ ನಿರ್ಮಾಣವಾಗಿವೆ. ಎಲ್ಲರೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ, ಬಲಿಷ್ಠ ರಾಷ್ಟ್ರ ಕಟ್ಟೋಣ ಎಂದರು.
ಇದೇ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕಾ ತಹಶೀಲ್ದಾರ ಯಲ್ಲಪ್ಪ ಗೊಣ್ಣೆನ್ನವರ ಮಾತನಾಡಿ ನಮ್ಮ ದೇಶದ ನೈಸರ್ಗಿಕ ಸಂಪತ್ತು ಇರುವ ಹಾಗೆಯೇ ನಮ್ಮ ಸಂವಿಧಾನದ ರಚನೆ ಆಗಿದೆ, ವಿದೇಶಿಗರು ಭಾರತವು ಹಾವಾಡಿಗರ ದೇಶ ಎಂದು ಟೀಕಿಸುವ ಕಾಲವಿತ್ತು, ಆದರೆ ಇಂದು ನಾವು ಇಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ, ನಮ್ಮಲ್ಲಿ ರೋಗ-ನಿರೋಧಕ ಶಕ್ತಿ ಉತ್ತಮವಾಗಿದೆ, ಎಲ್ಲ ಅಧಿಕಾರಿಗಳ, ಪ್ರಜೆಗಳ ಸಹಕಾರದಿಂದ ಕೋರೋನವನ್ನು ಹಿಮ್ಮೆಟ್ಟಿಸಿದ್ದೇವೆ, ಒಂದನೇ ಲಸಿಕೆ ಶೇಕಡಾ100ರಷ್ಟು ಆಗಿದೆ, ಉಳಿದ ಲಸಿಕೆಗಳನ್ನು ಎಲ್ಲರೂ ಕಡ್ಡಾಯವಾಗಿ ತೆಗೆದುಕೊಳ್ಳಿ, ಜೀವ ಇದ್ದರೇ ಜೀವನ, ಆರೋಗ್ಯಕ್ಕಿಂತ ಹೆಚ್ಚಿನ ಭಾಗ್ಯ ಇನ್ನೊಂದಿಲ್ಲ, ಸ್ವಚ್ಛತೆ ಕಾಪಾಡಿಕೊಳ್ಳಿ, ಶುದ್ಧ ಕುಡಿಯುವ ನೀರು ಉಪಯೋಗಿಸಿಕೊಳ್ಳಿ ಎಂದರು.
ತಾ.ಪಂ. ಇ.ಓ. ಎಸ್.ಸಿ.ಮಠಪತಿ ಮಾತನಾಡಿ ಇದು ವರ್ಷದ ಮೊದಲನೇ ರಾಷ್ಟ್ರೀಯ ಹಬ್ಬ, ಸರ್ಕಾರಿ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಿ, ಉತ್ತಮ ಪ್ರಜೆಗಳಾಗಿ ಎಂದರು. ಈ ಸಂದರ್ಭದಲ್ಲಿ ಪ.ಪಂ ವತಿಯಿಂದ ಅಂಗವಿಕಲರಿಗೆ ಶೇ5 ರಷ್ಟು ದಿವ್ಯಾಂಗರ ಯೋಜನೆಯಿಂದ ದ್ವಿಚಕ್ರ ವಾಹನವನ್ನು ವಿತರಿಸಲಾಯಿತು. ಪೋಲಿಸ್ ಇನಸ್ಪೆಕ್ಟರ್ ಪ್ರಭು ಸೂರಿನ್, ವೈ.ಜಿ.ಗದ್ದಿಗೌಡರ, ಅನಸೂಯ ಹೆಬ್ಬಳ್ಳಿಮಠ, ಯಲ್ಲವ್ವ ಶಿಗ್ಲಿ, ವಿ.ಎಸ್.ಪಾಟೀಲ, ಡಾ.ಬಸವರಾಜ ಬಾಸೂರ, ಎಮ್.ಆರ್.ಹೊಲ್ತಿಕೋಟಿ, ಅಶೋಕ ಯೋಗಪ್ಪನವರ, ಆರ್.ಎಫ್.ಓ.ಶ್ರೀಕಾಂತ ಪಾಟೀಲ, ಎನ್.ಎಫ್.ಕಟ್ಟೇಗೌಡರ, ಚಂದ್ರು ಪೂಜಾರ, ಶರಣಪ್ಪ ಉಣಕಲ್, ಸದಾನಂದ ಚಿಂತಾಮಣಿ, ರಾಕೇಶ್ ಪದ್ಮರಾಜ, ಮಂಜುಳಾ ನಾಯಕ, ಪರಶುರಾಮ ಹುಲಿಹೊಂಡ, ಗಂಗಾಧರ್ ಗೌಳಿ, ಮುಂತಾದ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಿ.ಇ.ಓ. ಉಮಾದೇವಿ ಸ್ವಾಗತಿಸಿದರು. ಶ್ರೀಧರ್ ಪಾಟೀಲ ಕುಲಕರ್ಣಿ ನಿರೂಪಿಸಿದರು. ಪುಟ್ಟಪ್ಪ ಭಜಂತ್ರಿ ವಂದಿಸಿದರು.