21 C
Hubli
ನವೆಂಬರ್ 12, 2024
eNews Land
ಸುದ್ದಿ

ಹೌ ಟು ಮೇಕ್ ಮನಿ ಎಂದು ಇಟ್ಟರು ಗುನ್ನಾ! ನಿಮ್ಮ ವಾಟ್ಸ್ ಆ್ಯಪ್ ಮೂಲಕ ಲಕ್ಷಕ್ಕೆ ಹೊಡಿಬಹುದು ಕನ್ನಾ!

ಇಎನ್ಎಲ್ ಧಾರವಾಡ: ಆತ 22 ವರ್ಷದ ಹುಡುಗ, ಕೆಲಸಕ್ಕಾಗಿ ಕ್ರೋಮ್ ಮೂಲಕ ತಡಕಾಡುತ್ತಿದ್ದಾಗ ವಾಟ್ಸ್ ಆ್ಯಪ್ ಐಕಾನ್ ಕಳಿಸಿದ ಸೈಬರ್ ದುಷ್ಕರ್ಮಿಗಳು ಲಕ್ಷಾಂತರ ರುಪಾಯಿ ಕೊಳ್ಳೆ ಹೊಡೆದಿದ್ದಾರೆ!

ಹುಬ್ಬಳ್ಳಿ ನವನಗರ ಪಂಚಾಕ್ಷರಿ ನಗರದ ಮನಪ್ರಿತ್ ರೆಡ್ಡಿ ಹೀಗೆ ವಂಚನೆಗೆ ಒಳಗಾಗಿ ಸೈಬರ್ ಪೊಲೀಸರ ಮೊರೆ ಹೋಗಿದ್ದಾನೆ.

ಆಗಿದ್ದೇನು? ಮನಪ್ರೀತ ತಮ್ಮ ಮೊಬೈಲ ಪೋನ ಕ್ರೋಮ ಆ್ಯಪಲ್ಲಿ ಕೆಲಸಕ್ಕಾಗಿ ಹುಡುಕಾಡುತ್ತಿರುವಾಗ ವಂಚಕರು, ವಾಟ್ಸ್ ಆಪ್ ಐಕಾನ್ ಕಳುಹಿಸಿದ್ದರು. ಅದನ್ನು ಕ್ಲಿಕ್ ಮಾಡಿದಾಗ  ಮೊಬೈಲದಿಂದ +63 945 207 7649 ನೇರಕ್ಕೆ: “HIT WANT TO KNOW HOW TO MAKE MONEY! ಅಂತಾ ನಾನಾಗಿಯೇ ಮೇಸೇಜ್ ಹೋಗಿರುತ್ತದೆ.

ಹೀಗೆ ಸಂಪರ್ಕ ಬೆಳಸಿದ ಆರೋಪಿತರು ತಾವು CUSTOMER ASISTANT AMZON ಮುಂಬೈ, ಹೆಸರು ರಾಣಿ ಎಂದು ಪರಿಚಯ ಮಾಡಿಕೊಂಡು ಹೂಡಿಕೆ‌ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ  30000, 4000, 30000, 3000, 1000, 16899 ಸೇರಿ ಒಟ್ಟು 1,13,874/- ವರ್ಗಾಯಿಸಿಕೊಂಡಿದ್ದಾರೆ.

ಇದನ್ನು ಓದಿ ಸುರಕ್ಷಿತವಾಗಿರಿ ಎನ್ನತ್ತಲೇ 2ಲಕ್ಷ ದೋಚಿದ್ರು! ಹುಬ್ಬಳ್ಳಿಲಿ ಯಾರನ್ನ ನಂಬೇಕು? ಯಾರನ್ನ ಬಿಡಬೇಕು?

ಅಲ್ಲದೇ ಆತನ ಮೊಬೈಲಿಗೆ ಕಳುಹಿಸಿದ ವೆಬ್ ಸೈಟದಲ್ಲಿ ಲಾಭ ತೋರಿಸುತ್ತಾ,  ಹಣ ವಿತ್ ಡ್ರಾ ಮಾಡಿಕೊಳ್ಳಲು ಹೋದಾಗ ಪ್ರೀಜ್ ಆದಂತೆ ತೋರಿಸಿ ಮಾಹಿತಿ ತಂತ್ರಜ್ಞಾನದ ದುರುಪಯೋಗ ಪಡಿಸಿಕೊಂಡು ಮೋಸ ಪಡಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಸಿಇಎ ಜನನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ ಪೆಹೆಲೆ ಲೋನ್ ಲೋ, ಬಾದ್ ಮೆ ಸೆಕ್ಸ್ ವರ್ಕರ್ ಲೋ..? ಏನಿದು ಸೈಬರ್ ಕ್ರೈಮ್ ಹಾವಳಿ!!

Related posts

ರಾಷ್ಟ್ರಪತಿ ದ್ರೌಪದಿ ಮುರ್ಮು ಆಡಳಿತದಲ್ಲಿ ದೇಶದ ಅಭಿವೃದ್ಧಿ ಉತ್ತುಂಗಕ್ಕೆ ಏರಲಿ: ಸಿಎಂ ಬೊಮ್ಮಾಯಿ

eNEWS LAND Team

ರಾಯಣ್ಣನ ಹೆಸರಿನಲ್ಲಿ 180 ಕೋಟಿ ರು. ವೆಚ್ಚದಲ್ಲಿ ವೆಚ್ಚದಲ್ಲಿ ಮಿಲಿಟರಿ ಶಾಲೆ : ಮುಖ್ಯ ಮಂತ್ರಿ  ಬೊಮ್ಮಾಯಿ

eNewsLand Team

ನೈಋತ್ಯ ರೈಲ್ವೆಯಲ್ಲಿ ಭಾರತ್ ಗೌರವ್ ರೈಲುಗಳ ಸೇವಾ ಸೌಲಭ್ಯ

eNEWS LAND Team