24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ

ಪುರಸಭೆ ತಾ.ಪಂ ಕಛೇರಿಯಲ್ಲಿ ಗಾಂಧೀಜಿ ಶಾಸ್ತ್ರೀಜಿ ಜಯಂತಿ

ಇಎನ್‌ಎಲ್ ಅಣ್ಣಿಗೇರಿ: ಪಟ್ಟಣದ ಪುರಸಭೆ ಹಾಗೂ ತಾ.ಪಂ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಜನ್ಮದಿನಾಚರಣೆ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ ಮಾತನಾಡಿ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಅಹಿಂಸಾ ಸತ್ಯ ಮಾರ್ಗದಲ್ಲಿ ತಂದ ಕೊಟ್ಟ ಗಾಂಧೀಜಿ ಶಾಸ್ತ್ರೀ ನಿಸ್ವಾರ್ಥಸೇವೆ, ಹೋರಾಟ,ಆದರ್ಶ, ಸ್ಮರಿಸುವ ಜನ್ಮದಿನಾಚರಣೆ ದಿನವಾಗಿದೆ. ಅವರ ಆದರ್ಶ ತತ್ವ ಸಿದ್ದಾಂತ, ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲಾ ಮುನ್ನಗ್ಗಬೇಕಾಗುತ್ತದೆ ಎಂದರು.
ತಾ.ಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಸಿಂಗನಹಳ್ಳಿ ಮಾತನಾಡಿ ಗಾಂಧೀಜಿ ಶಾಸ್ತ್ರೀ ಬದುಕಿನ ಮೌಲ್ಯಗಳು ಆದರ್ಶಪ್ರಾಯವಾಗಿದ್ದು, ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸಿದ ಸ್ವಾತಂತ್ರ್ಯ ಹೋರಾಟ,ಅವರು ತೋರಿದ ಮಾರ್ಗದಲ್ಲಿ ದೇಶದ ಅಭಿವೃದ್ಧಿಗೆ ನಾವೆಲ್ಲಾ ಸೇವೆಗೆ ಸನ್ನದ್ದರಾಗಿ ಸಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಕಛೇರಿಯಲ್ಲಿ ಆಡಳಿತಾಧಿಕಾರಿಗಳು, ಮುಖ್ಯ ಜಿ.ಪಂ ಲೆಕ್ಕಾಧಿಕಾರಿ ಲಲಿತಾ ಲಮಾಣಿ, ತಾಪಂ ಸಿಬ್ಬಂದಿ ವರ್ಗ,ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ಸಿಬ್ಬಂದಿ ವರ್ಗ, ಪೌರಕಾರ್ಮಿಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Related posts

ಜೂ.12 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

eNEWS LAND Team

ಇಬ್ರಾಹಿಂಪೂರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

eNewsLand Team

ಅಣ್ಣಿಗೇರಿ:ತಾಪಂ ಕಛೇರಿ ಹಾಗೂ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನ. ಯಾರ್ಯಾರು ಭಾಗಿ ನೋಡಿ!

eNEWS LAND Team