23 C
Hubli
ಮೇ 17, 2024
eNews Land
ಅಪರಾಧ ವೈರಲ್ ಸುದ್ದಿ ಸುದ್ದಿ

ಅಪಘಾತಕ್ಕೊಳಗಾದ ಹುಧಾ ಚಿಗರಿ!! ಎಲ್ಲಿ? ಯಾವಾಗ ನೋಡಿ?

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಚಲಿಸುತ್ತಿರುವಾಗ ಸುವರ್ಣ ಪೆಟ್ರೋಲ್ ಪಂಪ ಹತ್ತಿರ ಚಿಗರಿ ಬಸ್, ಖಾಸಗಿ ವಾಹನಗಳು ಟ್ರ್ಯಾಕ್ಸ್, ಕಾರು ಸೇರಿದಂತೆ ಕಾರಿನಲ್ಲಿ ಹಿಂದುಗಡೆ ಕುಳತ್ತಿದ್ದ ಓರ್ವ ಮಹಿಳೆಗೆ ಹಾಗೂ ಪ್ರಯಾಣಿಕರಿಗೆ ಸಣ್ಣಪಟ್ಟ ಗಾಯಗಳು ಆಗಿರುತ್ತವೆ ಹಾಗೂ ಬಿಆರ್‌ಟಿಎಸ್ ಬಸ್ ಚಾಲಕನಿಗೆ ಒಳಪೆಟ್ಟುಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜು.7 ರಂದು ಸಮಯ ಬೆಳ್ಳಿಗ್ಗೆ ಸುಮಾರು7.30 ಕ್ಕೆ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ  ಬಿಆರ್‌ಟಿಎಸ್ ವಾಹನ ಸಂಖ್ಯೆ KA-25 F-3467 ಹುಬ್ಬಳ್ಳಿಯಿಂದ ಧಾರವಾಡಕ್ಕೆ ಚಲಿಸುತ್ತಿರುವಾಗ ಸುವರ್ಣ ಪೆಟ್ರೋಲ್ ಪಂಪ ಹತ್ತಿರ ಜಂಕ್ಷನ್‌ನಲ್ಲಿ ಏಕಾಏಕಿ ಖಾಸಗಿ ಬಸ್ಸು ಮಿಶ್ರಪಥದಿಂದ ಅನಧಿಕೃತವಾಗಿ  ಬಿಆರ್‌ಟಿಎಸ್ ಕಾರಿಡಾರ್‌ಗೆ ಪ್ರವೇಶಿಸಿದಾಗ ಬಿಆರ್‌ಟಿಎಸ್ ವಾಹನ ಚಾಲಕ ಯಮನಪ್ಪ ಮಾದರ ವಾಹನ ಬಲಕ್ಕೆ ತೆಗೆದುಕೊಂಡಿರುತ್ತಾರೆ.  ಅದಾಗ್ಯೂ ಖಾಸಗಿ ವಾನಹವು ಬಿಆರ್‌ಟಿಎಸ್ ವಾಹನಕ್ಕೆ ಎಡಗಡೆ ಡಿಕ್ಕಿ ಹೊಡೆದು. ಖಾಸಗಿ ವಾಹನವು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಹಾಗೆಯೇ ಮುಂದೆ ಹೋಗಿರುತ್ತದೆ. ಈ ಘಟನೆಯಿಂದ ಬಲಕ್ಕೆ ಚಲಿಸಿದ ಬಿಆರ್‌ಟಿಎಸ್ ವಾಹನ ರಸ್ತೆಯ ವಿಭಜಕದ ಮೇಲೆ ಏರಿ  ಉಂಟಾದ ಜಿಗಿತದಿಂದ ಚಾಲಕ ವಾಹನ ನಿಯಂತ್ರಣ ಕಳೆದುಕೊಂಡಿರುತ್ತಾರೆ. ಆಗ ವಾಹನ ಕಾರಿಡಾರ್‌ನ ಬಲಕ್ಕೆ ಚಲಿಸಿ ಬಲಭಾಗದ ಮಿಶ್ರಪಥದಲ್ಲಿ ಪ್ರವೇಶಿಸಿರುತ್ತದೆ  ಈ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಒಂದು ಖಾಸಗಿ ಕಾರು & ಟ್ರ್ಯಾಕ್ಸಗೆ  ಬಿಆರ್‌ಟಿಎಸ್ ಬಸ್ಸ್ ಡಿಕ್ಕಿ ಹೊಡೆದಿರುತ್ತದೆ. ಇದರಿಂದ ಬಿಆರ್‌ಟಿಎಸ್ ಬಸ್ಸು ಖಾಸಗಿ ಕಾರು & ಬಸ್ಸು  ಜಖಂಗೊoಡಿರುತ್ತವೆ. ಕಾರಿನಲ್ಲಿ ಹಿಂದುಗಡೆ ಕುಳತ್ತಿದ್ದ ಓರ್ವ ಮಹಿಳೆಗೆ ಹಾಗೂ ಪ್ರಯಾಣಿಕರಿಗೆ ಸಣ್ಣಪಟ್ಟ ಗಾಯಗಳು ಆಗಿರುತ್ತದೆ.  ಹಾಗೂ ಬಿಆರ್‌ಟಿಎಸ್ ಬಸ್ ಚಾಲಕನಿಗೆ ಒಳಪೆಟ್ಟುಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸಂಸ್ಥೆಯಿoದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಅಪಘಾತಕ್ಕೆ ಕಾರಣರಾದ ಅನಧಿಕೃತವಾಗಿ ಬಿಆರ್‌ಟಿಎಸ್ ಕಾರಿಡಾರ್ ಪ್ರವೇಶಿಸಿದ ಖಾಸಗಿ ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿದೆ.
ಸದರಿ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳು ಪ್ರವೇಶ ಇರುವುದಿಲ್ಲಾ. ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಸಾರ್ವಜನಿಕ & ಖಾಸಗಿ ವಾಹನಗಳು ಪ್ರವೇಶಿಸಬಾರದು ಎಂದು ವಾಕರಸಾ ಸಂಸ್ಥೆ ಹು-ಧಾ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ತಿಳುವಳಿಕೆ ನೀಡುವ ನಿಟ್ಟಿನಲ್ಲಿ  ಪತ್ರಿಕಾ ಪ್ರಕಟನೆ ತಿಳಿಸಿದ್ದಾರೆ.

Related posts

ಹುಬ್ಬಳ್ಳಿಲಿ ಆಸ್ತಿಗಾಗಿ ಸೋದರನ ಮಗನಿಗೆ ವಿಷವಿಕ್ಕಿದಳು; ಕೋರ್ಟ್ ಕೊಟ್ಟ ತೀರ್ಪೇನು ಗೊತ್ತಾ?

eNewsLand Team

ಅಣ್ಣಿಗೇರಿ; ಅಂದರ್, ಬಾಹರ್ ಆಡಿದ 12 ಮಂದಿ ಅಂದರ್!

eNewsLand Team

ಡ್ರಗ್ಸ್ ತಡೆಗೆ ಸರ್ಕಾರದ ಜೊತೆ ಕೈ ಜೋಡಿಸಿ: ಸಿಎಂ

eNewsLand Team