27.1 C
Hubli
ಮೇ 2, 2024
eNews Land
ಕೃಷಿ

ಎಪಿಎಮ್’ಸಿ ಹತ್ತಿರದ ಅಮರಗೋಳ ರೇಲ್ವೇ ಸ್ಟೇಶನ್‌ದಿಂದ ಕೃಷಿ ಉತ್ಪನ್ನಗಳ ಸರಕು ತುಂಬಲು (ವಾಗೀನು) ವ್ಯವಸ್ಥೆ ರೈಲ್ವೇ ಇಲಾಖೆಗೆ ಮನವಿ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಅಮರಗೋಳ ಮುಖ್ಯ ಕೃಷಿ ಉತ್ಪನ್ನ ಮಾರುಕಟ್ಟೆಯು 434 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುತ್ತದೆ. ಇದು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಹಾಗೂ ಮಾದರಿಯ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಹೊಂದಿರುತ್ತದೆ. ಈ ಮಾರುಕಟ್ಟೆಯಲ್ಲಿ 1000 ಕ್ಕೂ ಹೆಚ್ಚು ಜನ ವ್ಯಾಪಾರಸ್ಥರು ರೈತರ ಕೃಷಿ ಉತ್ಪನ್ನಗಳ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಈ ಮಾರುಕಟ್ಟೆಗೆ ಪರ ರಾಜ್ಯಗಳಿಂದ, ಜಿಲ್ಲೆಗಳಿಂದ ರೈತರ ಕೃಷಿ ಉತ್ಪನ್ನಗಳು ಮಾರಾಟಕ್ಕೆ ಬರುತ್ತವೆ. ಅಲ್ಲದೇ ವ್ಯಾಪಾರಸ್ಥರು ಇಲ್ಲಿಗೆ ಉತ್ಪನ್ನಗಳ ಖರೀದಿಗೆ ಬರುತ್ತಾರೆ. ವ್ಯಾಪಾರಸ್ಥರು ಸದರ ಮಾರುಕಟ್ಟೆಯಲ್ಲಿ ಖರೀದಿ ಮಾಡಿದ ಮೆಕ್ಕೆಜೋಳ (ಗೋವಿನಜೋಳ), ಹತ್ತಿಕಾಳು, ಹಿಂಡಿ, ಆಹಾರಧಾನ್ಯ ಮುಂತಾದ ಕೃಷಿ ಉತ್ಪನ್ನಗಳನ್ನು ರೇಲ್ವೆ ವಾಗೀನ ತುಂಬಿ ಪರ ರಾಜ್ಯಕ್ಕೆ ಕಳುಹಿಸಲು ಹುಬ್ಬಳ್ಳಿ ಅಥವಾ ರಾಯಾಪೂರ ಸ್ಟೇಶನ್‌ಗೆ ಓಡಾಡಬೇಕಾಗುತ್ತದೆ. ಇದರಿಂದ ವರ್ತಕರಿಗೆ ಸಮಯದ ಅಭಾವ, ಲಾರಿ ಭಾಡಿಗೆ, ಹಮಾಲಿಯಂತ ಅನಾವಶ್ಯಕ ಖರ್ಚುಗಳು ಹೆಚ್ಚಿಗೆ ಬರುತ್ತವೆ.

ಹುಬ್ಬಳ್ಳಿ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯು ಅಮರಗೋಳ ರೇಲ್ವೆ ಸ್ಟೇಶನ್ ಪಕ್ಕದಲ್ಲಿಯೇ ಇದ್ದು, ಮಾರುಕಟ್ಟೆಗೆ ಸಮೀಪದಲ್ಲಿಯೇ ರೇಲ್ವೇ ಹಳಿಗಳು ಹಾದು ಹೋಗಿರುತ್ತವೆ. ಸದರ ಸ್ಟೇಶನ್‌ದಿಂದ ವ್ಯಾಪಾರಸ್ಥರಿಗೆ ಕೃಷಿ ಉತ್ಪನ್ನಗಳ ಸರಕುಗಳನ್ನು ರೇಲ್ವೇ ವಾಗೀನು ಮೂಲಕ ಕಳುಹಿಸಲು ಮತ್ತು ಆಮದು ಮಾಡಿಕೊಳ್ಳಲು ಅನುಕೂಲವಾಗುವಂತೆ ಅಮರಗೋಳ ರೇಲ್ವೇ ಸ್ಟೇಶನ್‌ನ್ನು ಅಭಿವೃದ್ಧಿ ಪಡಿಸಿ ರೇಲ್ವೆಗೆ ವಾಗೀನು ತುಂಬುವ ವ್ಯವಸ್ಥೆ ಕಲ್ಪಿಸಿ ಕೊಡುವುದು ಅಗತ್ಯವಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ಹೆಚ್ಚಿನ ಖರ್ಚು ಬರುವುದು ತಡೆಯಬಹುದು. ಮತ್ತು ಸಮಯದ ಉಳಿತಾಯವೂ ಆಗುತ್ತದೆ ಎಂದು ಮನವಿ ಸಲ್ಲಿಸಿದ ಹುಬ್ಬಳ್ಳಿ ನೈಋತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ (DRUCC) ರಾಜಕಿರಣ ಮೆಣಸಿನಕಾಯಿ.

Related posts

ಮೂವರು ಶ್ರೀಗಳಿಂದ ಭೂಮಿ ತಾಯಿಗೆ ಚರಗ !!

eNEWS LAND Team

ಮಾವುಬೆಳೆ; ಹೂ, ಕಾಯಿ ಉದುರುವಿಕೆ ತಡೆ ಹಾಗೂ ರೋಗ ನಿಯಂತ್ರಣ ಕ್ರಮ

eNEWS LAND Team

ಅಣ್ಣಿಗೇರಿ ಬರಗಾಲ ಪ್ರದೇಶ  ಘೋಷನೆ ಆಗಿಲ್ಲ ಯಾಕೆ? ಇಲ್ಲಿನ ಶಾಸಕರು, ತಾಲೂಕ ಆಡಳಿತಾಧಿಕಾರಿಗಳು, ರೈತ ಮುಖಂಡರು ಅಸಮರ್ಥರಾ???

eNEWS LAND Team