24 C
Hubli
ಮಾರ್ಚ್ 21, 2023
eNews Land
ಅಪರಾಧ

ಅಣ್ಣಿಗೇರಿ; ಅಂದರ್, ಬಾಹರ್ ಆಡಿದ 12 ಮಂದಿ ಅಂದರ್!

Listen to this article

ಇಎನ್ಎಲ್ ಧಾರವಾಡ

ಅಣ್ಣಿಗೇರಿ ಪಟ್ಟಣದ ಹುಡೇದ ಬೈಲದಲ್ಲಿನ ಸಿನಿಮಾ ಟಾಕೀಜ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಇಸ್ಪೀಟ್ ಅಂದರ್ ಬಾಹರ್ ಆಡುತ್ತಿದ್ದ 12 ಜನರನ್ನು ಪೊಲೀಸರು ಅಂದರ್ ಮಾಡಿದ್ದಾರೆ.

ಮಂಜಪ್ಪ ರಾಮಪ್ಪ ಕಲ್ಲಗೂಡಿ, ಧನಸಿಂಗ ಲಕ್ಷ್ಮಣ್ಣ ಲಮಾಣಿ, ದೇವಪ್ಪ ಪುರದಪ್ಪ ಬೆಳವಡಿ, ರಾಮಪ್ಪ ಯಲ್ಲಪ್ಪ ಭೋವಿ, ಚನ್ನಬಸಪ್ಪ ಸೋಮಪ್ಪ ಬೆಳವಡಿ, ಹನಮಪ್ಪ ಶಂಕ್ರಪ್ಪ ಬೆಳಹಾರ, ಪರಸಪ್ಪ ಅಮೃತಪ್ಪ ಹುಡೇನಕಟ್ಟಿ, ಮಾಂತೇಶ ಪರಸಪ್ಪ ಲಿಂಗಶೆಟ್ಟಿ, ಸಿದ್ದಪ್ಪ ಚಂದಪ್ಪ ಗುಡವಿನಕಟ್ಟಿ, ತಿಪ್ಪಣ್ಣ ಬಸವಣ್ಣೆಪ್ಪ ಉಣಕಲ್, ಸಿದ್ದಪ್ಪ ಫಕ್ಕೀರಪ್ಪ ನಾಯ್ಕರ ಹಾಗು ಮಹಾದೇವಗೌಡ ಯಲ್ಲಪ್ಪಗೌಡ ಪಾಟೀಲ‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್ಲರೂಬಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಆಡುತ್ತಿದ್ದಾಗ ಸಿಕ್ಕಿದ್ದು  ಅವರಿಂದ 5,500 ರು. ವಶಪಡಿಸಿಕೊಳ್ಳಲಾಗಿದೆ. ಈ  ಕುರಿತು ಅಣ್ಣಿಗೇರಿ  ಪೊಲೀಸ್ ಠಾಣೆಯಲ್ಲಿ ಕಲಂ 87 ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ಗೂಡ್ಸ್ ಲಾರಿ ಮತ್ತು ಬೈಕ್ ಅಪಘಾತ : ಯುವಕ ಸ್ಥಳದಲ್ಲಿಯೇ ಸಾವು

eNEWS LAND Team

ಶಿಗ್ಗಾಂವಿಯಲ್ಲಿ ಶೂಟ್; ಕತ್ತಲಲ್ಲಿ ಮನೆಯೊಳಗೆ ಓಡಿ ಬಚಾವಾದ ಸಲ್ಮಾ!!

eNewsLand Team

ಸೈನಿಕನ ಹೆಸರಲ್ಲಿ ನಡೆಯಿತು ಸೈಬರ್ ಕ್ರೈಂ!! ನಿಮಗೂ ಪಂಗನಾಮ ಹಾಕಬಹುದು ಹುಷಾರ್

eNEWS LAND Team