26.4 C
Hubli
ಏಪ್ರಿಲ್ 18, 2024
eNews Land
ಅಪರಾಧ ಸುದ್ದಿ

ಡ್ರಗ್ಸ್ ತಡೆಗೆ ಸರ್ಕಾರದ ಜೊತೆ ಕೈ ಜೋಡಿಸಿ: ಸಿಎಂ

ಇಎನ್ಎಲ್ ಬೆಂಗಳೂರು: ಯುವಜನತೆಯ ಸಹಕಾರದೊಂದಿಗೆ ಕರ್ನಾಟಕದಿಂದ ಡ್ರಗ್ಸ್ ನ್ನು ಸಂಪೂರ್ಣವಾಗಿ ತೊಡೆದು ಹಾಕುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಗೃಹ ಇಲಾಖೆ ಸಹಯೋಗದಲ್ಲಿ ‘ ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನ’ಅಂಗವಾಗಿ ವಿಂಟೇಜ್ ಕಾರು, ಬೈಕರ್ ರ್ಯಾಲಿ ಹಾಗೂ ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲ ಪ್ರಮುಖ ಕಾಲೇಜುಗಳ ಸುತ್ತಮುತ್ತಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅಂತೆಯೇ ಕಾಲೇಜುಗಳ ಕ್ಯಾಂಪೆಸ್ ಗಳಲ್ಲಿ ಹಾಗೂ ಹಾಸ್ಟೆಲ್ ಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾಲೇಜುಗಳ ಸುತ್ತಮುತ್ತ ಹಾಗೂ ಒಳಗೆ ಮಾದಕ ವಸ್ತುಗಳ ಮಾರಾಟ ಹಾಗೂ ಖರೀದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಡ್ರಗ್ಸ್ ವಿರುದ್ಧ ಯುದ್ಧವನ್ನು ಸಾರಿದೆ. ದೊಡ್ಡ ಪ್ರಮಾಣದ ಡ್ರಗ್ಸ್ ನ್ನು ವಶಪಡಿಸಿ ನಾಶ ಮಾಡಲಾಗಿದೆ. ಡ್ರಗ್ಸ್ ವಿರುದ್ಧದ ಅಭಿಯಾನ ನಿರಂತರವಾಗಿ ನಡೆಯುತ್ತದೆ. ವಿದೇಶದ ಕೆಲವು ನಾಗರಿಕರು ನಗರದಲ್ಲಿ ಡ್ರಗ್ಸ್ ಮಾರಾಟದಂಧೆಯಲ್ಲಿ ತೊಡಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಎನ್ ಡಿ ಪಿ ಟಿ ಎಸ್ ಕಾನೂನನ್ನು ಜಾರಿಗೆ ತರಲಾಗುತ್ತದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಡಾರ್ಕ್ ವೆಬ್ ನ್ನು ಬೇಧಿಸಲಾಗಿದೆ. ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ವಿದೇಶದಿಂದ ಡ್ರಗ್ಸ್ ಸರಬರಾಜನ್ನು ತಡೆಗಟ್ಟಲಾಗಿದೆ ಎಂದು ತಿಳಿಸಿದರು.

Related posts

ಕನ್ನಡ ಭಾಷೆಗೆ ಆದ್ಯತೆ ಕೊಡೋನಾ, ಬೇರೆ ಭಾಷೆ ಪ್ರೀತಿಸೋಣ: ಸಿ.ಎಮ್.ನಿಂಬಣ್ಣವರ

eNEWS LAND Team

ಹೂಗಾರ ಸಮಾಜ ಸೇವಾ ಸಂಘದ ಸಭೆ

eNEWS LAND Team

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪೂರ್ವ ಕ್ಷೇತ್ರದ ಪ್ರಣಾಳಿಕೆಯ ಬಿಡುಗಡೆ: ಡಾ.ಕ್ರಾಂತಿಕಿರಣ

eNewsLand Team