23.3 C
Hubli
ಮೇ 8, 2024
eNews Land
ಜಿಲ್ಲೆ ಸುದ್ದಿ

ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ ವಿಕಲಚೇತನರ ಹಾಗೂ 80 + ವಯಸ್ಸಾದವರ ಮನೆಗೆ ಏ.29,30 ಹಾಗೂ ಮೇ 1 ರಂದು ಚುನಾವಾಣಾ ಸಿಬ್ಬಂದಿ ಭೇಟಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಇಎನ್ಎಲ್ ಧಾರವಾಡ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ನೇದ್ದಕ್ಕೆ ಸಂಬಂಧಿಸಿದಂತೆ, ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ, ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಅಂಚೆ ಮತದಾನದ ಮೂಲಕ ಮತದಾನ ಮಾಡಲು ಇಚ್ಛಿಸಿ, ನಮೂನೆ 12ಡಿ ರಲ್ಲಿ ಚುನಾವಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ ವಿಕಲಚೇತನ ಮತ್ತು 80+ ಮತದಾರರ ಮನೆಗಳಿಗೆ, ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ಏ.29, 30 ಹಾಗೂ ಮೇ 1 ರಂದು ಭೇಟಿ ನೀಡಿ ಅಂಚೆ ಮತಪತ್ರಗಳ ವಿತರಣೆ ಮತ್ತು ಸ್ವೀಕೃತಿ ಕಾರ್ಯವನ್ನು ಕೈಗೊಳ್ಳಲಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ
ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು
ಏ.29, 30 ಹಾಗೂ ಮೇ 1 ರ ಈ ಮೂರು ದಿವಸಗಳಂದು ನಮೂನೆ 12ಡಿ ದಲ್ಲಿ ಚುನಾವಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ ವಿಕಲಚೇತನ ಹಾಗೂ 80+ ಮತದಾರರು ತಮ್ಮ ವಾಸಸ್ಥಳದಲ್ಲಿ ಹಾಜರಿದ್ದು, ತಮ್ಮ ಮನೆಗೆ ಬರುವ ಮತಗಟ್ಟೆ ಅಧಿಕಾರಿಗಳು,ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆಂದು ಅವರು ತಿಳಿಸಿದ್ದಾರೆ

Related posts

ಚನ್ನಪಟ್ಟಣದ ಜೀಪು ಖರೀದಿಸಿದ ಸಿಎಂ ಬೊಮ್ಮಾಯಿ

eNewsLand Team

ಉದಾಸಿ ಹಾಗೂ ಸಜ್ಜನರ ಮೂಡೂರ ಗ್ರಾಮದಲ್ಲಿ ಮತಯಾಚಿಸಿದರು

eNEWS LAND Team

ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿದ ತಜ್ಞರ ಸಮಿತಿ

eNEWS LAND Team