27 C
Hubli
ಮೇ 25, 2024
eNews Land
ಸಣ್ಣ ಸುದ್ದಿ

ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು. ಯಾರ್ಯಾರು ಭಾಗಿ ನೋಡಿ!!!

ಇಎನ್ಎಲ್ ಕಲಘಟಗಿ: ವಕೀಲರ ಸಂಘ ಪೊಲೀಸ್ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಬೂದನಗುಡ್ಡ ಬಸವೇಶ್ವರ ಪ್ರೌಢಶಾಲೆ ದುಮ್ಮವಾಡ ಇವರ ಸಹಯೋಗದೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಧೀಮಂತ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಜಯಂತಿಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದಂತಹ ಹಿರಿಯ ದಿವಾಣಿ ನ್ಯಾಯಾಧೀಶರಾದ ಜಿ.ಆರ್.ಶೆಟ್ಟರ ಇವರು ಮಾತನಾಡಿ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರಿಜೀ ಅವರ ಜೀವನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವುದರ ಜೊತೆಗೆ ಶಾಲಾ ಸ್ವಚ್ಚತೆ ಹಾಗೂ ದುಷ್ಟಚಟಗಳ ಬಗ್ಗೆ ಅರಿವು ಮೂಡಿಸಿದರು. ಅದೇ ರೀತಿಯಾಗಿ ಮುಖ್ಯ ಅತಿಥಿಯಾಗಿ ದಿವಾಣಿ ನ್ಯಾಯಾಧೀಶರಾಗಿರುವ ಗಣೇಶ.ಎಮ್ ಅವರು ಮಾತನಾಡಿ ಶಾಲೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಜೊತೆಗೆ ಶಾಲಾ ಮೂಲಭೂತ ಸೌಲಭ್ಯಗಳಲ್ಲಿ ಮುತುವರ್ಜಿ ವಹಿಸುವಂತೆ ಕರೆ ನೀಡಿದರು ,ಅಲ್ಲದೆ ನ್ಯಾಯಾಲಯಗಳು ತಮಗಾಗಿ ಮುಕ್ತ ಅವಕಾಶಗಳನ್ನು ಒದಗಿಸಿ ಕೊಟ್ಟಿರುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಲಘಟಗಿ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲ ಸಂಘದವರು ಮಾನ್ಯ ದಿವಾಣಿ ನ್ಯಾಯಾಧೀಶರ ಸಂಘಟನೆಯಲ್ಲಿ ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮ ನಿಜವಾಗಲೂ ಶ್ಲಾಘನೀಯವಾಗಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ನ್ಯಾಯಾಲಯದ ಮುಂದೆ ಎಲ್ಲರೂ ಸರಿಸಮಾನರು ಅದಕ್ಕಾಗಿ ಇಲಾಖೆಯು ನ್ಯಾಯಾಲಯದ ಮುಂದೆ ತಲೆತಗ್ಗಿಸುತ್ತದೆ ಎಂದು ಹಿತನುಡಿಗಳನ್ನು ನೀಡಿದರು. ಅದೇ ರೀತಿ ಕೆ.ಬಿ.ಗುಡಿಹಾಳ, ವಿ.ಕೆ.ನಡುವಿನಮನಿ, ಎಂ.ಎಸ್ ಧನಿಗೊಂಡ, ಎಸ್‌.ಟಿ.ತೆಗ್ಗಿಹಳ್ಳಿ, ವ್ಹಿ.ಬಿ.ಶಿವನಗೌಡರು ಮಾತನಾಡಿ ಸ್ವಚ್ಛತೆ ಹಾಗೂ ದುಶ್ಚಟಗಳ ಬಗ್ಗೆ ಕಾನೂನು ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾತನಾಡಿದರು. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಆರ್.ಕೆ.ನಡುಗೇರಿ ಅವರ ಅಧ್ಯಕ್ಷತೆಯಲ್ಲಿ ಮಾನ್ಯ ದಿವಾಣಿ ನ್ಯಾಯಾಧೀಶರನ್ನು ಹಾಗೂ ಗಣ್ಯರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಎಂ.ಎಸ್.ಬಾಬಜಿ ಹಾಗೂ ರಮೇಶ್ ಬಾಬಜಿ, ಯಲ್ಲಪ್ಪ ಹುಲಮನಿ, ಮಂಜುನಾಥ ಚಂಡೂನವರ, ಬಸಪ್ಪ ದೊಡ್ಡಮನಿ, ಗ್ರಾಪಂ ಅಧ್ಯಕ್ಷ ಬಸವರಾಜ ನರೇಂದ್ರ, ಉಪಾಧ್ಯಕ್ಷೆ ಗಿರಿಜಾ ಹಿರೇಮಠ, ಸದಸ್ಯರು, ಪಿಡಿಓ, ಸ್ಥಳಿಯರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕ ಶಿಕ್ಷಕಿಯರು, ಶಾಲಾ ಸಿಬ್ಬಂದಿ ವರ್ಗದವರು ಮತ್ತು ಅಡುಗೆ ಸಹಾಯಕರು ಭಾಗವಹಿಸಿದ್ದರು. ಅದೇ ರೀತಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ, ಸಮೂಹ ಸಂಪನ್ಮೂಲ ಅಧಿಕಾರಿಗ ಪಾಂಡುರಂಗ ಪೂಜಾರಿ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಾಂತ ರೆಡ್ಡೇರ ಭಾಗಿಯಾಗಿದ್ದರು. ಶಾಲೆಯ ಹಿರಿಯ ಶಿಕ್ಷಕವಿ.ಬಿ.ಸೋಮಣ್ಣವರ ನಿರೂಪಿಸಿದರು.
ಕಾರ್ಯಕ್ರಮ ಮುಕ್ತಾಯದ ನಂತರ ಶಾಲಾ ಮೈದಾನದಲ್ಲಿ ದಿವಾಣಿ ನ್ಯಾಯಾಧೀಶರು, ವಕೀಲರು, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯವರು ಶಾಲಾ ಸುಧುರಣಾ ಸಮಿತಿಯವರು, ಗ್ರಾಮಸ್ಥರು, ವಿದ್ಯಾರ್ಥಿಗಳು ,ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.

Related posts

ಅಣ್ಣಿಗೇರಿ ಅಮೃತೇಶ್ವರ ಕಾಲೇಜ್ ಸೀಲ್ ಡೌನ್

eNEWS LAND Team

ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದಿಂದ ಶಿವಶರಣ ಮಾದಯ್ಯನವರ ಜಯಂತಿ

eNEWS LAND Team

ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ; ಮಾಜಿ ಸಿಎಂ ಸಿದ್ದರಾಮಯ್ಯ …

eNEWS LAND Team