ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ವತಿಯಿಂದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ಡಿ.3ರಿಂದ ಡಿ.7 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಚಂದ್ರಶೇಖರ ಮಟ್ಟಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸ್ವಾಮಿಯ ಅಗ್ನಿ ಮಹೋತ್ಸವ, ರಥೋತ್ಸವ ಹಾಗೂ ಜರುಗಲಿದ್ದು, ಪ್ರತಿದಿನ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಮಂಗಳಾರತಿ ಜರುಗಲಿದೆ ಎಂದರು.
ಡಿ.6 ರಂದು ಸಂಜೆ 6 ಗಂಟೆಗೆ ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಸಿದ್ಧರಾಮ ಶಿವಯೋಗಿಗಳು ಇವರು ಲಕ್ಷ ದೀಪೋತ್ಸವದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮಂಗಳವಾರ ಡಿ. 7 ರಂದು ಮೆರವಣಿಗೆ ಉದ್ಘಾಟನೆಯನ್ನು ಶಾಸಕ ಪ್ರಸಾದ ಅಬ್ಬಯ್ಯ ನೆರವೇರಿಸಲಿದ್ದಾರೆ. ರಥೋತ್ಸವ ಉದ್ಘಾಟನೆಯನ್ನು ಮಾಜಿ ಲೋಕಸಭಾ ಸದಸ್ಯ ಮಂಜುನಾಥ ಕುನ್ನೂರ ನೆರವೇರಿಸಲಿದ್ದಾರೆ. ರಥೋತ್ಸವದ ನಂತರ ಅನ್ನಸಂತರ್ಪನೆ ಮತ್ತು ಮುಕ್ತಾಯದ ನಂತರ ಕಾರ್ಯಕ್ರಮ ಮಂಗಲಗೊಳ್ಳಲಿದೆ ಎಂದು ತಿಳಿಸಿದರು.
ಕೊರೊನಾ ಮುಂಜಾಗ್ರತಾ ಕ್ರಮವಾಗಿ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ, ಕಾರ್ಯದರ್ಶಿ ಈರಣ್ಣ ಬಲೂಚಿಗಿ, ಶಿವಯೋಗಿ ವಿಭೂತಿಮಠ, ಚಂದ್ರಶೇಖರಪ್ಪ ಹುರಕಡ್ಲಿ, ವೀರಣ್ಣ ಹಳ್ಳಿಕೇರಿ, ಪ್ರಭುದೇವ ಹಿಪ್ಪರಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.