23.9 C
Hubli
ಏಪ್ರಿಲ್ 1, 2023
eNews Land
ಜಿಲ್ಲೆ ರಾಜಕೀಯ ರಾಜ್ಯ

ಹುಬ್ಬಳ್ಳಿಲಿ 11 ವರ್ಷದ ಬಳಿಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಸಭೆಗೆ ಬಂದವರಿಗೆ ವಿಶೇಷ ಗಿಫ್ಟ್ ಸಿಗತ್ತೆ!!

Listen to this article

ಇಎನ್ಎಲ್ ಧಾರವಾಡ: ಬರೋಬ್ಬರಿ 11 ವರ್ಷದ ನಂತರ ಹುಬ್ಬಳ್ಳಿ ನಗರದ ಡೆನಿಸನ್ಸ್ ಹೊಟೆಲ್ ನಲ್ಲಿ ಡಿ.28,29ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಪಕ್ಷ ಸಂಘಟನೆ, ಆಂತರಿಕ ವಿಚಾರಗಳ ಕುರಿತು ಚರ್ಚೆ ಆಗಲಿದೆ. ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಭೆಗೆ ಆಗಮಿಸುವರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮೂರು ತಿಂಗಳಿಗೊಮ್ಮೆ ನಡೆಯಲಿರುವ ಕಾರ್ಯಕಾರಿಣಿ ಸಭೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ೧೧ ವರ್ಷದ ಬಳಿಕ ಆಯೋಜನೆ ಆಗುತ್ತಿದೆ. ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ  ಅರುಣ ಸಿಂಗ್,ಸಹ ಉಸ್ತುವಾರಿ ಡಿ.ಕೆ.ಅರುಣಾ, ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಾಜೆ, ನಾರಾಯಣ ಸ್ವಾಮಿ, ಭಗವಂತ ಖೂಬಾ, ರಾಜೀವ ಚಂದ್ರಶೇಖರ ಆಗಮಿಸುವರು. ರಾಜ್ಯ ಸಭೆ ಸದಸ್ಯರು ಆಗಮಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಎಲ್ಲ ಸಚಿವರು ಉಪಸ್ಥಿತರಿರುವರು.

ಒಟ್ಟಾಾರೆ ಕಾರ್ಯಕ್ರಮಕ್ಕೆೆ 568 ಅಪೇಕ್ಷಿತರು ಆಗಮಿಸಲಿದ್ದಾರೆ. ಒಟ್ಟೂ 600 ಕಾರ್ಯಕರ್ತರು ಸಭೆಯ ಯಶಸ್ಸಿಗಾಗಿ ತೊಡಗಿಸಿಕೊಂಡಿದ್ದೇವೆ ಎಂದರು.

ಗಣ್ಯರಿಗೆ ವಿಶೇಷ ಗಿಫ್ಟ್: ಕಾರ್ಯಕ್ರಮಕ್ಕೆ ಬಂದವರಿಗೆ ಮೊಮೆಂಟೊ ನೀಡುವುದು ಸಾಮಾನ್ಯ. ಆದರೆ ಹುಬ್ಬಳ್ಳಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮೊಮೆಂಟೊ ಬದಲಾಗಿ ಉಕ ತಿನಿಸು
ನಗರದ ಡೆನ್ನಿಸನ್ಸ್ ಹೊಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಮೆಂಟೊ ಬದಲಾಗಿ ಉಕ ಭಾಗದ ಶೇಂಗಾ ಚಟ್ನಿ ಕರಂಡಿ, ಧಾರವಾಡ ಪೇಢಾ, ಅಗಸಿ ಚೆಟ್ನಿ ನೀಡಲು ನಿರ್ಧರಿಸಿದ್ದೇವೆ. ಲಕ್ಷ್ಮೇಶ್ವರದ ಲಡ್ಕಿಪಾಕ್ ಖಾದ್ಯವನ್ನು ನೀಡಲಾಗುವುದು. ಅದರ ಜತೆಗೆ ಶ್ರೀ ಸಿದ್ಧಾರೂಢ ಸ್ವಾಾಮೀಜಿ ಪುಟ್ಟ ಮೂರ್ತಿಯನ್ನು ನೀಡಲಾಗುವುದು ಎಂದು ಟೆಂಗಿನಕಾಯಿ ತಿಳಿಸಿದರು.

Related posts

ಒಂದಾದರೂ ಬಸವಣ್ಣನ ವಚನ ಪಾಲಿಸಿ: ಸಿಎಂ

eNewsLand Team

ಪೆಟ್ರೋಲ್, ‌ಡೀಸೆಲ್ ಬೆಲೆ ಇಳಿಕೆ, ಇಂದು ಸಂಜೆ ಅಧಿಸೂಚನೆ: ಸಿಎಂ

eNEWS LAND Team

ಸ್ವಚ್ಛ ಸರ್ವೇಕ್ಷಣೆ: ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ 25ನೇ ಸ್ಥಾನ

eNewsLand Team