27 C
Hubli
ಮಾರ್ಚ್ 28, 2023
eNews Land
ರಾಜಕೀಯ

ಕಾಂಗ್ರೆಸ್ಸಿಗೆ ಮೋದಿ ಫೋಬಿಯಾ: ಸೆಂಟ್ರಲ್ ಮಿನಿಸ್ಟರ್ ಹೀಗೆ ಹೇಳಿದ್ಯಾಕೆ ಗೊತ್ತಾ?

Listen to this article

ಇಎನ್ಎಲ್ ಧಾರವಾಡ: ಕಾಂಗ್ರೆಸ್ ನವರಿಗೆ ಮೋದಿ ಫೋಬಿಯಾ ಶುರುವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಹಕ್ಕು ಮೋದಿ ಕಸಿದುಕೊಳ್ಳುತ್ತಿದ್ದಾರೆ ಎಂಬ ಮನಸ್ಥಿತಿ ಕಾಂಗ್ರೆಸ್ ನವರಿಗೆ ಇದೆ. ಕಳೆದ ಎರಡು ಬಾರಿಯ ಜನಾದೇಶವನ್ನು ಅವರು ಒಪ್ಪಲು ತಯಾರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಐದು ವರ್ಷ ಆಡಳಿತ ನಡೆಸಲು ಜನ ಸ್ಪಷ್ಟ ಆದೇಶ ನೀಡಿದ್ದಾರೆ. ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ.

ಚುನಾವಣೆ ಕಾನೂನು ತಿದ್ದುಪಡಿ ಮಸೂದೆಯನ್ನು ಮಾಡಿದ್ದೇವೆ. ಅದರಲ್ಲಿ ಏನು ತಪ್ಪಿದೆ ಎಂದು ಗೊತ್ತಾಗುತ್ತಿಲ್ಲ. ಸ್ಟ್ಯಾಂಡಿಂಗ್ ಕಮೀಟಿಯಲ್ಲೂ ಚರ್ಚೆ ಆಗಿದೆ. ಆಗ ವಿರೋಧ ವ್ಯಕ್ತಪಡಿಸಿಲ್ಲ.

ಅದರ ಬಳಿಕ ಚುನಾವಣಾ ಆಯೋಗ ಎಲ್ಲಾ ಪಕ್ಷಗಳ ಜೊತೆಗೆ ಚರ್ಚೆ ಮಾಡಿದೆ. ಆಗಲೂ ಯಾರೂ ಭಿನ್ನಾಭಿಪ್ರಾಯದ ಟಿಪ್ಪಣಿ ಸಲ್ಲಿಸಿಲ್ಲ. ಆದರೆ ಸಂಸತ್ತಿಗೆ ಬಂದಾಗ, ಮೋದಿ ಇದಕ್ಕೆ ಮುಂದಾದಾಗ ವಿರೋಧ ಯಾಕೆ?

ಮತದಾರರ ಗುರುತಿಗೆ ಆಧಾರ ಲಿಂಕ್ ಮಾಡಿದರೆ ಸಮಸ್ಯೆ ಏನು? ಎರಡೂ ಅಧಿವೇಶನ ನಡೆಸಲು ಅವಕಾಶ ನೀಡಲಿಲ್ಲ.

ಮೋದಿ ಎನೂ ಮಾಡಿದರೂ ಕಾಂಗ್ರೆಸ್ ನವರು ವಿರೋಧ ಮಾಡ್ತಾ ಇದ್ದಾರೆ. ಕಾಂಗ್ರೆಸ್ ನವರಿಗೆ ಮೋದಿ ಫೋಬಿಯಾ ಶುರುವಾಗಿದೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ಸಂಸತ್ ಸದನದಲ್ಲಿ ಪ್ರತಿಪಕ್ಷಗಳ ವರ್ತನೆಗೆ ವಿಷಾದ ವ್ಯಕ್ತಪಡಿಸಿ ಅಂದರೂ ಕೇಳಲಿಲ್ಲ. ಟೇಬಲ್ ಮೇಲೆ ಹತ್ತಿದರು, ಟಿವಿ ಸ್ಕ್ರೀನ್ ಎಸೆಯಲು ಮುಂದಾದರು, ಮಾರ್ಷಲ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ದಿನಾಚರಣೆಯನ್ನು ಬಹಿಷ್ಕಾರ ಮಾಡಿದರು. ಅಂಬೇಡ್ಕರ್ ಅವರಿಗೆ ಹಿಂದಿನಿಂದಲೂ ಕಾಂಗ್ರೆಸ್ ಅಗೌರವ ತೋರುತ್ತಿದೆ ಎಂದು ಟೀಕೆ ಮಾಡಿದರು.

ಅಂಬೇಡ್ಕರ್ ವಿರುದ್ಧ ‌ಚುನಾವಣಾ ಪ್ರಚಾರಕ್ಕೆ ಸ್ವತಃ ನೆಹರು ಹೋಗಿದ್ದರು.ಈಗಲೂ ಅದೇ ರೀತಿ ಅಗೌರವ ಮುಂದುವರಿಸಿದೆ. ಅವರು ಎಲ್ಲರನ್ನೂ ಬಹಿಷ್ಕಾರ ಮಾಡುತ್ತಾರೆ. ಹೀಗೆ ಸಾಗಿದರೆ ಜನ ಅವರನ್ನು ಬೈಕಾಟ್ ಮಾಡಲಿದ್ದಾರೆ ಎಂದರು.

ಮತಾಂತರ ನಿಷೇಧ ಕಾಯಿದೆಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಮಂಡನೆ ಆಗಿಲ್ಲ. ಮುಂಬರುವ ದಿನಗಳಲ್ಲಿ ಮಂಡನೆ ಮಾಡುತ್ತೇವೆ ಎಂದರು.

 

Related posts

ಕೃಷಿ ಕಾಯ್ದೆ ಹಿಂತೆಗೆತವನ್ನು ರೈತ ಸಂಘಟನೆಗಳು ಸ್ವಾಗತಿಸುತ್ತಿವೆ : ಸಿಎಂ

eNewsLand Team

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರ್ ಕಮೀಟಿ ಬಳಿಕ ಹೇಳಿದ್ದೇನು?

eNEWS LAND Team

ಬೆಂಗಳೂರು ಮಿಷನ್ 2022 ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ

eNEWS LAND Team