27.4 C
Hubli
ಏಪ್ರಿಲ್ 24, 2024
eNews Land
ಜಿಲ್ಲೆ ರಾಜಕೀಯ ರಾಜ್ಯ ಸುದ್ದಿ

ಶೆಟ್ಟರ್ ಸೋಲಿಸಲು ಬಿಜೆಪಿ ಚಕ್ರವ್ಯೂಹ: ಕಾಂಗ್ರೆಸ್ ಶಾಲು ಹಾಕ್ಕೊಂಡವರ ರಾಜಕೀಯ ಜೀವನ ‘THE END’?

ಇದನ್ನು ಓದಿ: ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಣ ಸಂಘರ್ಷ: ಕನ್ನಡಿಗರ ರಕ್ಷಣೆ ಮಾಡುವಂತೆ ಕಸಾಪ ಆಗ್ರಹ

ಇಎನ್ಎಲ್ ಎಕ್ಸಕ್ಲೂಸಿವ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು. ಬಿಜೆಪಿಯಲ್ಲಿ ತೀವ್ರ ಸಿಟ್ಟಿಗೆ ಕಾರಣವಾಗಿದ್ದು, ಶತಾಯ ಗತಾಯ ಅವರನ್ನು ರಾಜಕೀಯವಾಗಿ ಹಣಿಯಲೇಬೇಕು ಎಂದು ನಿಂತಿರುವ ಬಿಜೆಪಿ ಚಕ್ರ ವ್ಯೂಹವನ್ನು ರಚಿಸುತ್ತಿದೆ.

ಹೌದು! ರಾಜ್ಯದಲ್ಲೇ ಹೈವೋಲ್ಟೇಜ್ ಚುನಾವಣಾ ಕ್ಷೇತ್ರವಾಗಿ ಹುಬ್ಬಳ್ಳಿ ಸೆಂಟ್ರಲ್ ಬದಲಾಗಿದೆ.

ಇದನ್ನು ಓದಿ: ಮತದಾರರ ಜಾಗೃತಿ ಅಭಿಯಾನಕ್ಕೆ ಜಿಪಂ ಸಿಇಒ ಸ್ವರೂಪ ಟಿ.ಕೆ ಚಾಲನೆ: ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ

ಇದರ ಭಾಗವಾಗಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಲಿಂಗಾಯತ ಧರ್ಮದ ಮುಖಂಡರ ಸಭೆಯಲ್ಲೂ ಚರ್ಚೆಗಳಾಗಿವೆ. ಸೆಂಟ್ರಲ್ ಕ್ಷೇತ್ರದ ಲಿಂಗಾಯತ ಮತಬ್ಯಾಂಕ್ ಶೆಟ್ಟರ್ ಬಳಿಯಿಲ್ಲ. ಬದಲಾಗಿ ಬಿಜೆಪಿ ಬಳಿಯಿದೆ ಎಂಬ ಸಂದೇಶವನ್ನು ಈ ಚುನಾವಣೆಯಲ್ಲಿ ಸಾರಬೇಕಿರುವ‌ ಅನಿವಾರ್ಯತೆಗೆ ಕಮಲ ಸಿಲುಕಿದೆ. ಅದರ ಜೊತೆಗೆ ಬಿಜೆಪಿ ಲಿಂಗಾಯತರಿಗೆ‌ ಯಾವುದೇ ಅನ್ಯಾಯ ಮಾಡಿಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಇದರ ಭಾಗವಾಗಿಯೇ ಬಿಜೆಪಿ ‘ಲಿಂಗಾಯತ ಮುಖ್ಯಮಂತ್ರಿ’ ಅಸ್ತ್ರವನ್ನು ಪ್ರಯೋಗಿಸಿದೆ. ಮಹೇಶ ಟೆಂಗಿನಕಾಯಿ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದನ್ನು ಹೈಲೈಟ್ ಮಾಡಲಾಗುತ್ತಿದೆ. ಹುಬ್ಬಳ್ಳಿ ಮಾತ್ರವಲ್ಲದೆ ಶೆಟ್ಟರ್ ವಿರುದ್ಧ ರಾಜ್ಯ ಮಟ್ಟದಲ್ಲಿ ಬಿಜೆಪಿ‌ ವ್ಯೂಹ ರಚಿಸುತ್ತಿದೆ.

ಇದನ್ನು ಓದಿ: ಚುನಾವಣೆ: ಒಟ್ಟು 47 ನಾಮಪತ್ರ ಸಲ್ಲಿಕೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ

ಈ ಕಾರಣಕ್ಕೆ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಹುಬ್ಬಳ್ಳಿಯ ಅರವಿಂದ್ ಬೆಲ್ಲದ್ ನಿವಾಸದಲ್ಲಿ ಬಿಜೆಪಿ ವರಿಷ್ಠರ ರಹಸ್ಯ ಸಭೆ ನಡೆಸಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಶೆಟ್ಟರ್ ಗೆಲ್ಲಬಾರದು ಎಂದು ಬಿಜೆಪಿ ನಾಯಕರಿಗೆ ಜೆ.ಪಿ. ನಡ್ಡಾ ಖಡಕ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ  ಶೆಟ್ಟರ್ ಕಟ್ಟಿ ಹಾಕಲು ಬಿಜೆಪಿ ರಣತಂತ್ರ ಹೆಣೆದಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಚಿವ ಗೋವಿಂದ್ ಕಾರಜೋಳ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಜಿಲ್ಲಾಧ್ಯಕ್ಷ ಸಂಜಯ್ ಕಪಟ್ಕರ್ ಈ ಸಭೆಯಲ್ಲಿ ಉಪಸ್ಥಿತಿ ಇದ್ದರು.

ಇದನ್ನು ಓದಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ASRTU ನೀಡುವ “HERO’S ON THE ROAD” ರಾಷ್ಟ್ರಮಟ್ಟದ ಪ್ರಶಸ್ತಿ ಯಾರಿಗೆ?

ಇನ್ನು, ಶೆಟ್ಟರ್ ಅದೇ ಹಾಡು, ಅದೇ ರಾಗ ಎನ್ನುವಂತೆ ಬಿಜೆಪಿ ನನಗೆ ಅನ್ಯಾಯ ಮಾಡಿತು ಎಂದು ಟೀಕೆ ಮಾಡುತ್ತಿದ್ದಾರೆ ವಿನಃ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುನ್ನೆಲೆಗೆ ತಂದು ಮಾತನಾಡುತ್ತಿಲ್ಲ. ಬಿಜೆಪಿ ಅನ್ಯಾಯ ಮಾಡಿತೆಂದು ತಮ್ಮ ತತ್ವ‌ ಸಿದ್ಧಾಂತಗಳನ್ನೇ ಮೂಲೆಗೊತ್ತಿ ಕಾಂಗ್ರೆಸ್ ಶಾಲು ಹಾಕಿಕೊಂಡಿದ್ದಾರೆ ಎಂಬ ಬೇಸರ ಕಾರ್ಯಕರ್ತರಲ್ಲಿ ಇರುವುದು ಸುಳ್ಳಲ್ಲ. ಹಾಗಂತ ಶೆಟ್ಟರ್ ಬಗ್ಗೆ ಮರುಕ ಇರುವವರೂ ಇದ್ದಾರೆ.

ಇದನ್ನು ಓದಿ: ಕಾಂಗ್ರೆಸ್ 40 ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ. ಯಾರ್ಯಾರು ಪ್ರಚಾರಕರು ನೋಡಿ!

ಒಟ್ಟಾರೆ 40 ವರ್ಷಗಳ ಕಾಲ ಬಿಜೆಪಿ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದ ಜಗದೀಶ್ ಶೆಟ್ಟರ್ ಈಗ ತಮ್ಮ ಹಿಂದಿನ ಪಕ್ಷದ ವ್ಯೂಹ ಬೇಧಿಸುತ್ತಾರಾ? ಅಥವಾ ರಾಜಕೀಯ ಜೀವನ ‘ದಿ ಎಂಡ್’ ಮಾಡಿಕೊಳ್ತಾರಾ ನೋಡಬೇಕಿದೆ.

ಇದನ್ನು ಓದಿ: ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ ಕಾರಣ: ಜಗದೀಶ ಶೆಟ್ಟರ್. ಮಾನಸ ಪುತ್ರ ಯಾರು?

Related posts

ಹುಬ್ಬಳ್ಳಿ ಧಾರವಾಡದಲ್ಲಿ ಕ್ರಿಸ್‌ಮಸ್‌ ಮೆರುಗು

eNewsLand Team

ಟಾರ್ಗೇಟ್ ಹುಬ್ಬಳ್ಳಿ ಬಿಡ್ನಾಳ: ಮನೆ ಸರಣಿಗಳವು!!

eNewsLand Team

ಧಾರಾಕಾರ ಮಳೆ; ಉತ್ತರ ಕನ್ನಡ, ಉಡುಪಿ ಶಾಲೆಗೆ‌ ರಜೆ, ಕೊಡಗಲ್ಲಿ ಗುಡ್ಡ ಕುಸಿತ

eNewsLand Team