35.4 C
Hubli
ಏಪ್ರಿಲ್ 28, 2024
eNews Land
ಸುದ್ದಿ

ಏ.4 ಅಹಿಂಸೆಯ ಅಗ್ರನಾಯಕ ತೀರ್ಥಂಕರ ಮಹಾವೀರರ 2622 ನೆಯ ಜನ್ಮಕಲ್ಯಾಣ ಮಹೋತ್ಸವ

ಉತ್ತಮವಾಗಿ ಕೆಲಸ ನಿರ್ವಹಿಸಿ ಇಲಾಖೆಗೆ ಗೌರವ ತನ್ನಿ: ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಟಿ.ಜಿ.ದೊಡ್ಡಮನಿ

ಇಎನ್ಎಲ್ ಹುಬ್ಬಳ್ಳಿ: ಅಹಿಂಸೆ, ಸತ್ಯ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ, ಅನೇಕಾಂತವಾದ ತತ್ವಗಳ ಅಗ್ರಗಣ್ಯ ಪ್ರತಿಪಾದಕ, ಜೈನ ಪರಂಪರೆಯ, 24ನೇ ತೀರ್ಥಂಕರ ಭಗವಾನ್ ಮಹಾವೀರರ 2622ನೇ ಜನ್ಮಕಲ್ಯಾಣ ಮಹೋತ್ಸವವನ್ನು ಜೈನ ಸಮಾಜ ಏ.4 ರಂದು ಸಂಭ್ರಮದಿಂದ ಆಚರಿಸುತ್ತಿದೆ.
    ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ಅನಿರೀಕ್ಷಿತ ವಿಯೋಗದಿಂದ ಅವರ ಗೌರವಾರ್ಥ ವಿವಿಧ ಸ್ಪರ್ಧೆಗಳು, ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವನ್ನು ಹುಬ್ಬಳ್ಳಿ ದಿಗಂಬರ ಜೈನ ಸಮಾಜವು ರದ್ದುಪಡಿಸಿದ್ದು, ಏ.4 ರಂದು ಬೆಳಿಗ್ಗೆ ನಗರದ ಎಲ್ಲ ಜೈನಮಂದಿರಗಳಲ್ಲಿ ವಿಶೇಷ ಪೂಜೆಗಳು ನಂತರ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯ 1250 ವರ್ಷಗಳ ಪುರಾತನ ಜಿನಬಿಂಬವನ್ನು ಹೊಂದಿರುವ ಅಸಾರ ಓಣಿಯ ಭಗವಾನ್ ಶ್ರೀ ಅನಂತನಾಥ ದಿಗಂಬರ ಜೈನ ಮಂದಿರದಿಂದ ಶ್ರೀ ಮಹಾವೀರ ಜಿನಬಿಂಬ, ಭಾವಚಿತ್ರ, ಸ್ವಸ್ತಿಶ್ರೀ ಚಾರುಕೀರ್ತಿಗಳ ಭಾವಚಿತ್ರ ಮೆರವಣಿಗೆ ಹಳೇಹುಬ್ಬಳ್ಳಿ ದುರ್ಗದಬೈಲ್, ಬೆಳಮಕರ ರಸ್ತೆ, ಅಕ್ಕಸಾಲಿಗರ ಓಣಿ, ಕರ್ಜಗಿ ಓಣಿ,ಕಸಬಾಪೇಟೆ, ನ್ಯೂ ಇಂಗ್ಲೀಷ್ ಸ್ಕೂಲ್, ಬೊಮ್ಮಾಪುರ ಓಣಿ, ಹಿರೇಪೇಟೆ, ಕoಚಗಾರ ಓಣಿ, ಮಹಾವೀರ ಗಲ್ಲಿ, ಮೂರುಸಾವಿರಮಠ ರಸ್ತೆ, ಕೋಯಿನ್ ರಸ್ತೆ, ಜೆ.ಸಿ.ನಗರ, ಸ್ಟೇಷನ್ ರಸ್ತೆ,ಜೈನ ಬೋರ್ಡಿಂಗ್, ಮರಾಠ ಗಲ್ಲಿ, ಬ್ರಾಡ್ ವೇ, ದುರ್ಗದಬೈಲ್, ಜವಳಿಸಾಲ, ಹಿರೇಪೇಟೆ, ಕಂಚಗಾರ ಗಲ್ಲಿ ಮಾರ್ಗವಾಗಿ ಶಾಂತಿನಾಥ ಭವನಕ್ಕೆ ಕೊನೆಗೊಳ್ಳಲಿದೆ ಎಂದು ಹುಬ್ಬಳ್ಳಿ ಜೈನ ಸಮಾಜದ ಆಡಳಿತ ಮಂಡಳಿ ಸದಸ್ಯ ಶಾಂತಿನಾಥ ಕೆ ಹೋತಪೇಟಿ ಪ್ರಕಟಣೆ ತಿಳಿಸಿದ್ದಾರೆ.

Related posts

ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ: ಸಾಮೂಹಿಕ ಜವಾಬ್ದಾರಿ

eNEWS LAND Team

ವಿಧಾನ ಪರಿಷತ್ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ-2022 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ…

eNEWS LAND Team

ಶಲವಡಿ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

eNEWS LAND Team