36 C
Hubli
ಮೇ 2, 2024
eNews Land
ಸುದ್ದಿ

ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ: ಸಾಮೂಹಿಕ ಜವಾಬ್ದಾರಿ

ಧಾರವಾಡ: ಇಲ್ಲಿನ ಡಯಟ್ ಸಂಸ್ಥೆಯ ಸಭಾ ಭವನದಲ್ಲಿ ಇತ್ತೀಚೆಗೆ  ಜಿಲ್ಲೆಯ ಎಲ್ಲ ಬಿ.ಆರ್.ಪಿ. ಮತ್ತು ಸಿ.ಆರ್.ಪಿ.ಗಳನ್ನುದ್ದೇಶಿಸಿ, ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಮಾತನಾಡಿ, ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ ಸಾಮೂಹಿಕ ಜವಾಬ್ದಾರಿಯಾಗಿದೆ.ತಳ ಹಂತದ ಮೇಲ್ವಿಚಾರಕರು , ಎಲ್ಲಾ ಗ್ರಾಮ ಜನವಸತಿ ಪ್ರದೇಶಗಳಲ್ಲಿನ  ಅನಕ್ಷರಸ್ಥರನ್ನು ಸಮೀಕ್ಷೆ ಮಾಡಿಸಿ, ಕಲಿಕಾ ಕೇಂದ್ರಗಳು ತೆರೆದು ಬೋಧಕರನ್ನು ಗುರುತಿಸಿ, ಕಲಿಕಾ ಕೇಂದ್ರಗಳನ್ನು ನಿಯಮಿತವಾಗಿ ನಡೆಸಬೇಕು, ವಿವಿಧ ಇಲಾಖೆಗಳ ಸಹಯೋಗ ಸಹಕಾರ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.
ಗ್ರಾಮ ಪಂಚಾಯತಿ ಪಿಡಿಓ, ಸದಸ್ಯರು, ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯವರೆಲ್ಲರ ಸಮನ್ವಯದೊಂದಿಗೆ , ಸಾಮೂಹಿಕ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸೋಣ.  ಜಿಲ್ಲೆಯಲ್ಲಿ 34  ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತೆ ಮಾಡಲು ಸರ್ಕಾರ  ಗುರಿ ನೀಡಿದೆ. ಆದರೆ ನಾವು   ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ‌ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತೆಯನ್ನು ಮಾಡಲು ಎಲ್ಲರೂ ಪಣ‌ ತೊಡೋಣ . ಧಾರವಾಡ  ಶಿಕ್ಷಣ ಕಾಶಿ ಜಿಲ್ಲೆಯೆಂದು ಮತ್ತೊಮ್ಮೆ ಮನವರಿಕೆ ಮಾಡೋಣ. ಎಲ್ಲಾ ಅನಕ್ಷರಸ್ಥರಿಗೆ ಬರೆಯಲು ಸ್ಲೇಟು,ಬಳಪಗಳನ್ನು ಗ್ರಾಮ ಪಂಚಾಯತಿಯಿಂದ ಪೂರೈಸಲಾಗುವುದು.  ಶಿಕ್ಷಣ ಇಲಾಖೆಯ ಶಾಲೆಗಳಿಗೆ, ವಿಶೇಷ ಅನುದಾನದಡಿಯಲ್ಲಿ ಸ್ಮಾರ್ಟ ಕ್ಲಾಸ್ ಸೌಲಭ್ಯ ಅಳಡಿಸುವುದು, ಕುಡಿಯುವ ನೀರು ಸೌಲಭ್ಯ , ಆಟದ ಮೈದಾನ , ಊಟದ ಭವನ, ಹೆಣ್ಣು ಮಕ್ಕಳಿಗೆ ವಿಶೇಷ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಎಸ್.ಎಸ್.ಎಲ್.ಸಿ.ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ವಿಶೇಷ ಶೈಕ್ಷಣಿಕ ಕಾರ್ಯಕ್ರಮ ಹಾಕಿಕೊಳ್ಳುವುದಾಗಿ ತಿಳಿಸಿದರು.
ಲೋಕ ಶಿಕ್ಷಣ ನಿರ್ದೇಶನಾಲಯದ ಉಪನಿರ್ದೇಶಕ  ಎನ್.ಎಚ್.‌ನಾಗೂರ  ಮಾತನಾಡಿ,  ನವ ಭಾರತ ಸಾಕ್ಷರತಾ ಕಾರ್ಯಕ್ರಮ, ಲಿಂಕ್ ಅನುದಾನದ ಸಾಕ್ಷರತಾ ಕಾರ್ಯಕ್ರಮ ಮತ್ತು ಈ ವರ್ಷದ ಆಯವ್ಯಯದಲ್ಲಿ ಘೋಷಿತ ಒಂದು ಸಾವಿರ ಗ್ರಾಮ‌ ಪಂಚಾಯತಿಗಳಲ್ಲಿ ಸಂಪೂರ್ಣ ಸಾಕ್ಷರತೆ ಘೋಷಣೆ ಕಾರ್ಯಕ್ರಮಗಳ ಅನುಷ್ಠಾನದ ವಿಧಾನ ತಿಳಿಸಿದರು. 
ಡಿಡಿಪಿಐ ಎಸ್.ಎ‌ಸ್.ಕೆಳದಿಮಠ, ಡಯಟ್ ಪ್ರಾಚಾರ್ಯೆ ಎನ್.ಕೆ.ಸಾಹುಕಾರ, ಡಿವೈಪಿಸಿ ಎಸ್.ಎಂ.ಹುಡೇದಮನಿ, ಪಿ.ಕೆ.ಚಿಕ್ಕಮಠ, ಮಾತನಾಡಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ ಖಾಜಿ.  ಕಾರ್ಯಕ್ರಮ ಸಹಾಯಕ ಎಸ್.ಆರ್.ರಾಚಣ್ಣವರ ತರಬೇತಿ ನೀಡಿ, ಬಿಇಓ ವಿದ್ಯಾ ಕುಂದರಗಿ  ಸೇರಿದಂತೆ ಜಿಲ್ಲೆಯ ಎಲ್ಲಾ ಬಿ.ಆರ್.ಪಿ.ಹಾಗೂ ಸಿ.ಆರ್.ಪಿ.ಗಳು ಹಾಜರಿದ್ದು ಸಮೀಕ್ಷೆಯ ತರಬೇತಿ ಪಡೆದರು

 

Related posts

ಚನ್ನಪಟ್ಟಣದ ಜೀಪು ಖರೀದಿಸಿದ ಸಿಎಂ ಬೊಮ್ಮಾಯಿ

eNewsLand Team

ಗೂಗಲ್ ನಲ್ಲಿ ಯಂತ್ರ ಖರೀದಿ ಮಾಡಕ ಹೋದ ಹುಬ್ಳಿಂವ ನಾಮ ಹಾಕ್ಸಗೊಂಡಾನ!!

eNEWS LAND Team

ಕ್ರೀಡೆಯಲ್ಲಿ ಸಮತೋಲಿತ ಭಾವ ಅಗತ್ಯ : ಮಹಾಪೌರ ಈರೇಶ್ ಅಂಚಟಗೇರಿ

eNewsLand Team