29 C
Hubli
ಮೇ 3, 2024
eNews Land
ಸುದ್ದಿ

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಕುರಿತು ಜಾಥಾ ಕಾರ್ಯಕ್ರಮಕ್ಕೆ ಚಾಲನೆ: ಹಿರಿಯ ದಿವಾಣಿ ನ್ಯಾಯಾಧೀಶ ಡಿ.ಆರ್.ಮಂಜುನಾಥ

ಬಾಲಕಾರ್ಮಿಕರ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ ಕಾನೂನು ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕು: ಹಿರಿಯ ದಿವಾಣಿ ನ್ಯಾಯಾಧೀಶ ಡಿ.ಆರ್.ಮಂಜುನಾಥ

ಇಎನ್ಎಲ್ ನವಲಗುಂದ : ಚಿಕ್ಕ ಮಕ್ಕಳು ಶಿಕ್ಷಣ ಕಲಿಯುವ ಸಮಯದಲ್ಲಿ ದುಡಿಯಲು ಹೋಗುವಂತಹ ಮಕ್ಕಳನ್ನು ರಕ್ಷಿಸುವ ಕೆಲಸ ಸಾರ್ವಜನಿಕರು ಮಾಡಬೇಕಾಗಿದೆ. ಒಳ್ಳೇಯ ವಿದ್ಯಾಬ್ಯಾಸವನ್ನು ಮಕ್ಕಳ ಮಾಡಿ ಒಳ್ಳೇಯ ಶಿಕ್ಷಣ ಪಡೆದು ಸಾಮಾಜದ ಗೌರವದಿಂದ ಬದುಕಸಾಗಿಸಬೇಕೆಂದು ಜಿ.ಎಮ್.ಎಫ್.ಸಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ ಹೇಳಿದರು.
ಅವರು ಮಂಗಳವಾರ ತಾಲೂಕಾ ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ನ್ಯಾಯಾವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಕುರಿತು ಜಾಥಾ ಕಾರ್ಯಕ್ರಮಕ್ಕೆ ಉದ್ಟಾಟಿಸಿ ಚಾಲನೆ ನೀಡಿ ಮಾತನಾಡಿದರು.
ಮಕ್ಕಳನ್ನು ದುಡಿಯಲು ಕಲಿಸುವಂತಹ ಪಾಲಕರು ಕಾನೂನು ನಿಯಮಗಳನ್ನು ಪಾಲನೆ ಮಾಡಬೇಕು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ತಂದೆ ತಾಯಂದಿರ ಗುರುತರ ಜವಾಬ್ದಾರಿ ಇರುತ್ತದೆ. ಅಷ್ಟೇ ಅಲ್ಲ ಕೂಲಿ, ಇತರೆ ವ್ಯಾಪಾರದ ಮಳಿಗೆಗಳಲ್ಲಿ ಮಕ್ಕಳನ್ನು ದುಡಿಸುತ್ತಿದ್ದವರ ಮೇಲೆ ಯೋಗ್ಯ ಕ್ರಮ ತೆಗೆದುಕೊಳ್ಳಲು ಪ್ರತಿಯೊಬ್ಬ ನಾಗರಿಕರು ದೂರು ನೀಡಿ ಬಾಲಕಾರ್ಮಿಕ ಪದ್ದತಿಯನ್ನು ತಡೆಯಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದಿವಾಣಿ ನ್ಯಾಯಾಧೀಶರಾದ ಸಂತೋಷ ಎಮ್.ಎಸ್. ಅವರು ಮಾತನಾಡಿ ದಿನಾಚರಣೆಗಳು ಪ್ರತಿವರ್ಷವು ಬರುತ್ತದೆ. ಆದರೆ ಅವುಗಳನ್ನು ನಾವು ಜನರ ಮುಟ್ಟುವಂತೆ ಕಾರ್ಯಕ್ರಮಗಳ ಮೂಲಕ, ಜಾಥ ಮೂಲಕ ಜಾಗೃತಿ ಮಕೂಡಿಸಿ ಬಾಲಕರನ್ನು ದುಡಿಯಲು ಕಲಿಸದೇ ಶಿಕ್ಷಣದ ಕಡೆಗೆ ಅವರ ಮನಸ್ಸನ್ನು ಕೇಂದ್ರಿಕರಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಈ ಭಾಗದ ಹಿರಿಯ ಕಾರ್ಮಿಕ ನಿರೀಕ್ಷಕ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡದ ಮಕ್ಕಳು ಶಿಕ್ಷಣದಿಂದ ತಮ್ಮ ಭವಿಷ್ಯವನ್ನು ಉಜ್ವಲ ಮಾಡಲು ಸರಕಾರ ಎಲ್ಲ ರೀತಿಯಿಂದ ಸನ್ನದ್ದವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಹಿರಿಯ ಕಾರ್ಮಿಕ ನಿರೀಕ್ಷಕರು ಅಕ್ರಂ ಅಲ್ಲಾಪೂರ ಹಾಗೂ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಎಚ್.ಎಮ್.ನದಾಫ ಮಾತನಾಡಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವಂತಹ ಉದ್ಯೋಗಿ ಕಾನೂನನ್ನು ಅರಿತು ಕೊಂಡು ತಮ್ಮ ಕೆಲಸವನ್ನು ಮಾಡಬೇಕು ಬಾಲ ಕಾರ್ಮಿಕರ ಕಾನೂನು ನಿಯಮಗಳು ಬಹಳ ಕಠಿಣವಾಗಿದ್ದು ಕಾನೂನಿನ ಅರಿವು ಇಂತಹ ವಿಶ್ವ ಬಾಲಕಾರ್ಮಿಕರ ಪದ್ದತಿ ವಿರೋಧಿ ದಿನದಂದು ಜಾಗೃತಿ ಮೂಡಿಸುವುದರ ಮೂಲಕ ಜನರಿಗೆ ತಿಳಿಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಆನಂದ ಮುರಾಳ, ಯೋಜನಾ ನಿರ್ದೇಶಕರಾದ ಬಸವರಾಜ ಪಂಚಾಕ್ಷರಿಮಠ, ವಕೀಲರ ಸಂಘದ ಕಾರ್ಯದರ್ಶಿ ಎನ್.ಎಮ್.ಪಾಟೀಲ, ವಕೀಲರಾದ ವಾಯ್.ಬಿ.ಕುರಹಟ್ಟಿ, ವಿ.ಪಿ.ಪಾಟೀಲ, ಪ್ರಕಾಶ ಅಂಗಡಿ, ಎನ್.ಬಿ.ಸವದಿ, ರಾಜು ಗದಗ, ಆರ್.ಎಮ್.ರಮಜೇನಿ, ಶಾಂತಮ್ಮ ಚಿಕ್ಕನರಗುಂದ, ವಿ.ಟಿ.ಕುಲಕರ್ಣಿ, ಅನೀಲ ಜಾಂಬೋಟಿ. ವಾಯ್.ಬಿ.ಹೊಂಗಲ ಇತರರು ಇದ್ದರು.

Related posts

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಶೀಘ್ರ ತೀರ್ಮಾನ : ಸಿಎಂ ಬೊಮ್ಮಾಯಿ

eNEWS LAND Team

ನಮ್ಮಲ್ಲಿ ಹುಟ್ಟಿದ ಜೈನ ಧರ್ಮ ಜಗತ್ತಿಗೆ ಶಾಂತಿ ಸಂದೇಶ ನೀಡುತ್ತಿದೆ: ಡಾ. ಜಿ. ಪರಮೇಶ್ವರ

eNewsLand Team

EXTENSION OF PERIODICITY OF SPECIAL TRAINS ಸಾಪ್ತಾಹಿಕ ವಿಶೇಷ ರೈಲುಗಳ ಸೇವೆ ವಿಸ್ತರಣೆ

eNEWS LAND Team