25 C
Hubli
ಮೇ 25, 2024
eNews Land
ಸುದ್ದಿ

ನವಲಗುಂದ ಪಟ್ಟಣದ ರೈತ ಮುಖಂಡರು ರೈತ ಭವನದಲ್ಲಿ ಮಹಾದಾಯಿ ಹಾಗೂ ಇತರೆ ವಿವಿಧ ಬೇಡಿಕೆಗಳಿಗಾಗಿ ಗ್ರೇಡ್ 2 ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಮಹಾದಾಯಿ ಯೋಜನೆ ಟೆಂಡರ್ ಪ್ರಕ್ರಿಯೆಗೆ ತಕ್ಷಣ ಜಾರಿ ಮಾಡಲು ಆಗ್ರಹ

ಇಎನ್ಎಲ್ ನವಲಗುಂದ: ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಹಣ ಮೀಸಲಿದ್ದರು ಯೋಜನೆಗೆ ಪುನ: ಟೆಂಡರ್ ಕರೆದು ಯೋಜನೆ ತಕ್ಷಣವೇ ಜಾರಿ ಮಾಡಬೇಕೆಂದು ಒತ್ತಾಯಿಸಿ ಮಲಪ್ರಭಾ ಮಹಾದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಗ್ರೇಡ್-2 ತಹಶೀಲ್ದಾರ ಸುರೇಂದ್ರ ಹುಕ್ಕೇರಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮಂಗಳವಾರ ರೈತಭವನದಲ್ಲಿ ಮನವಿ ಸಲ್ಲಿಸಿದರು.

ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ ಬ್ಯಾಂಕುಗಳಲ್ಲಿ ರೈತರು ಸೆಟ್ಲಮೆಂಟ್ ಮಾಡಿದಾಗಲೂ ಮರಳಿ ಸಾಲಕೊಡುವುದಿಲ್ಲ ಉತಾರ ಇದ್ದ ಎಲ್ಲ ರೈತರಿಗೂ ಸಿ.ಐ.ಬಿ.ಎಲ್ ತೆಗೆದುಹಾಕಿ ಮರಳಿ ಎಲ್ಲಾ ಬ್ಯಾಂಕುಗಳು ಸಾಲಕೊಡುವಂತೆ ಕೇಂದ್ರ ಮಂತ್ರಿಗಳಾದ ಪ್ರಲ್ಲಾದ ಜೋಶಿಯವರು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.
ಇನ್ನು ನೋಂದಣೆ ಕಛೇರಿಯಲ್ಲಿ ಕಾವೇರಿ ಸಾಪ್ಟವೇರ್ ತೊಂದರೆಯಿಂದ ರೈತರು ಅಲೆದಾಡುತ್ತಿದ್ದಾರೆ. ತಕ್ಷಣ ತಾಂತ್ರಿಕ ದೋಷವನ್ನು ಸರಿಪಡಿಸಿ ರೈತರಿಗೆ ಅನುಕೂಲಮಾಡಬೇಕು. ಉತ್ತರ ಕರ್ನಾಟಕದಲ್ಲಿ ರೈತರಿಗೆ ಮುಂಗಾರು ಮಳೆ ಆಗದೇ ಇರುವುದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಾರಣ ಕೇಂದ್ರ ಹಾಗು ರಾಜ್ಯ ಸರಕಾರ ಪರಿಹಾರ ಘೋಷಣೆ ಮಾಡಬೇಕು.
ರಾಜ್ಯ ಸರಕಾರ ಸಹಕಾರಿ ಬ್ಯಾಂಕ ಮತ್ತು ಪಿ.ಎಲ್.ಡಿ ಬ್ಯಾಂಕಗಳ ಸಾಲಮನ್ನಾ ಮಾಡಬೇಕು. ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಇನ್ನು ಇತ್ತೀಚಿಗೆ ನೀಡಿದ ಹೆಸ್ಕಾಂದವರು ಪ್ರತಿ ಮನೆ ಹಾಗೂ ಅಂಗಡಿಗಳಿಗೆ ನೀಡಿದ ವಿದ್ಯುತ್ತ್ ಬಿಲ್ಲ ಏರಿಕೆ ಮಾಡಿರುವುದನ್ನು ಖಂಡಿಸುತ್ತೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲೇಶ ಉಪ್ಪಾರ, ಕರಿಯಪ್ಪ ತಳವಾರ, ಬಸನಗೌಡ ಫಕ್ಕೀರಗೌಡರ, ಸಿದ್ದಲಿಂಗಪ್ಪ ಹಳ್ಳದ, ಸಂಗಪ್ಪ ನಿಡವಣೆ, ಶಿವಪ್ಪ ಸಂಗಳದ, ಗಂಗಪ್ಪ ಸಂಗಟಿ, ಮುರೆಗೆಪ್ಪ ಪಲ್ಲೇದ ಇತರರು ಇದ್ದರು.

Related posts

ರಾಯಣ್ಣನ ಹೆಸರಿನಲ್ಲಿ 180 ಕೋಟಿ ರು. ವೆಚ್ಚದಲ್ಲಿ ವೆಚ್ಚದಲ್ಲಿ ಮಿಲಿಟರಿ ಶಾಲೆ : ಮುಖ್ಯ ಮಂತ್ರಿ  ಬೊಮ್ಮಾಯಿ

eNewsLand Team

ಮಹಾವೀರ ಲಿಂಬ್ ಸೆಂಟರ್’ನಲ್ಲಿ ಕೃತಕ ಕೈ ಕಾಲುಗಳ ಜೋಡಣೆಯಲ್ಲಿ ಭಾಗಿ : ಮಹಾಪೌರ ಈರೇಶ ಅಂಚಟಗೇರಿ

eNEWS LAND Team

ಯುದ್ಧಪೀಡಿತ ಉಕ್ರೇನ್’ನಲ್ಲಿ ಸಿಲುಕಿದ ಧಾರವಾಡದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿನಿಯರು!! ಕಣ್ಣೀರಲ್ಲಿ ಕುಟುಂಬ

eNewsLand Team