ಮೇ 3, 2024
eNews Land
ಸುದ್ದಿ

EXTENSION OF PERIODICITY OF SPECIAL TRAINS ಸಾಪ್ತಾಹಿಕ ವಿಶೇಷ ರೈಲುಗಳ ಸೇವೆ ವಿಸ್ತರಣೆ

I. EXTENSION OF PERIODICITY OF SPECIAL TRAINS

East Coast Railway has notified for extension of service of Train Nos.  08543/08544 which runs between Visakhapatnam and Bengaluru Cantonment weekly special express with the existing timings and stoppages, as detailed below:

1. Train No. 08543 Visakhapatnam – Bengaluru Cantonment Weekly Express Special, which was earlier notified to run every Sunday up to July 30, 2023, will be further extended from August 6 to September 24, 2023 (8 Trips).

2. Train No. 08544 Bengaluru Cantonment – Visakhapatnam Weekly Express Special, which was earlier notified to run every Monday up to July 31, 2023, will also be  extended from August 7 to September 25, 2023 (8 Trips).

II. RUNNING OF SPECIAL TRAINS

East Central Railway has notified for running of Train Nos. 03241/03242 between Danapur – Sir M. Visvesvaraya Terminal Bengaluru weekly AC superfast express for 5 trips in each direction to clear extra rush of passengers, as detailed below

Train No. 03241 Danapur-Sir M. Visvesvaraya Terminal Bengaluru weekly AC superfast special will leave Danapur at 3 p.m. every Friday on July 28th, August 4th, 11th, 18th and 25th, 2023 and arrive at Sir M. Visvesvaraya Terminal Bengaluru at 1 p.m. on the third day.

In the return direction, Train No. 03242 Sir M. Visvesvaraya Terminal Bengaluru-Danapur weekly AC superfast special will leave SMVT Bengaluru at 11:25 p.m. every Sunday on July 30th, August 5th, 12th, 19th and 26th, 2023 to reach Danapur at 11:30 p.m on the third day.

These trains will have stoppages at Ara Jn., Buxar, PT. Deen Dayal Upadhyaya Jn., Prayagraj Chheoki Jn., Manikpur Jn., Satna, Jabalpur, Itarsi Jn., Nagpur, Balharshah, Warangal, Vijayawada Jn., Perambur, Katpadi Jn., Jolarpettai Jn., and Bangarapet Jn.

The trains will have a composition of one AC first class coach, four AC-2 tier coaches, fourteen AC-3 tier coaches and two generator car cum luggage & brake vans.

To know the details of arrival and departure timings of these trains, please visit www.enquiry.indianrail.gov.in or dial 139.

ಸಾಪ್ತಾಹಿಕ ವಿಶೇಷ ರೈಲುಗಳ ಸೇವೆ ವಿಸ್ತರಣೆ

ವಿಶಾಖಪಟ್ಟಣಂ ಮತ್ತು ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (08543/08544) ರೈಲುಗಳ ಸೇವೆಯನ್ನು ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ವಲಯವು ಸೂಚಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ. 

1. ಪ್ರತಿ ಭಾನುವಾರ ವಿಶಾಖಪಟ್ಟಣಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 08543 ವಿಶಾಖಪಟ್ಟಣಂ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ಆಗಸ್ಟ್ 6 ರಿಂದ ಸೆಪ್ಟೆಂಬರ್ 24 ರವರೆಗೆ (8 ಟ್ರಿಪ್‌) ವಿಸ್ತರಿಸಲಾಗುತ್ತಿದೆ.

2. ಪ್ರತಿ ಸೋಮವಾರ ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 08544 ಬೆಂಗಳೂರು ಕಂಟೋನ್ಮೆಂಟ್ – ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲನ್ನು ಜುಲೈ 31 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ಆಗಸ್ಟ್ 7 ರಿಂದ ಸೆಪ್ಟೆಂಬರ್ 25 ರವರೆಗೆ (8 ಟ್ರಿಪ್‌) ವಿಸ್ತರಿಸಲಾಗುತ್ತಿದೆ.

*ಬೆಂಗಳೂರು – ಬಿಹಾರದ ದಾನಾಪುರ ನಡುವೆ ವಿಶೇಷ ರೈಲು ಸಂಚಾರ*

ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸುವ ಸಲುವಾಗಿ ಬಿಹಾರದ ದಾನಾಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ (03241/03242) ರೈಲುಗಳನ್ನು ಎರಡು ದಿಕ್ಕಿನಲ್ಲೂ 5 ಟ್ರಿಪ್‌ ಓಡಿಸಲು ಪೂರ್ವ ಮಧ್ಯ ರೈಲ್ವೆ ವಲಯವು ಸೂಚಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ.  

ರೈಲು ಸಂಖ್ಯೆ 03241 ದಾನಾಪುರ -ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 28, ಆಗಸ್ಟ್ 4, 11, 18 ಮತ್ತು 25 ರಂದು ಪ್ರತಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ದಾನಪುರದಿಂದ ಹೊರಟು, ಭಾನುವಾರ ಮಧ್ಯಾಹ್ನ 1 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 03242 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 30, ಆಗಸ್ಟ್ 5, 12, 19 ಮತ್ತು 26 ರಂದು ಪ್ರತಿ ಭಾನುವಾರ ರಾತ್ರಿ 11:25 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು, ಮಂಗಳವಾರ ರಾತ್ರಿ 11:30 ಗಂಟೆಗೆ ದಾನಾಪುರ ನಿಲ್ದಾಣವನ್ನು ತಲುಪಲಿದೆ.

ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಅರಾ, ಬಕ್ಸರ್, ದೀನ್ ದಯಾಳ್ ಉಪಾಧ್ಯಾಯ, ಪ್ರಯಾಗ್‌ರಾಜ್ ಛೌಕಿ, ಮಾಣಿಕಪುರ, ಸತ್ನಾ, ಜಬಲ್‌ಪುರ, ಇಟಾರ್ಸಿ, ನಾಗಪುರ, ಬಲ್ಹರ್‌ಷಾ, ವಾರಂಗಲ್, ವಿಜಯವಾಡ, ಪೆರಂಬೂರ, ಕಟ್ಪಾಡಿ, ಜೋಲಾರ್‌ಪೆಟ್ಟೈ ಮತ್ತು ಬಂಗಾರಪೇಟೆ ಈ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರಲಿದೆ.

ಈ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಎಸಿ ಫಸ್ಟ್ ಕ್ಲಾಸ್ ಬೋಗಿ (1), ಎಸಿ ಟು ಟೈಯರ್ ಬೋಗಿಗಳು (4), ಎಸಿ ತ್ರಿ ಟೈಯರ್ ಬೋಗಿಗಳು (14) ಮತ್ತು ಜನರೇಟರ್ ಕಾರ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್‌ ಸಂಯೋಜನೆ ಹೊಂದಿರುವ ಬೋಗಿಗಳು (2) ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.

ಈ ರೈಲುಗಳ ಆಗಮಿಸುವ ಮತ್ತು ನಿರ್ಗಮಿಸುವ ಸಮಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಿ ಅಥವಾ 139 ನಂಬರಿಗೆ ಡಯಲ್ ಮಾಡಿ ತಿಳಿದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟನೆ ತಿಳಿಸಿದ್ದಾರೆ.

Related posts

ಜಿಲ್ಲಾಧಿಕಾರಿ ತಾಲೂಕುಗಳಲ್ಲಿ ಗ್ರಾಮ ವಾಸ್ತವ್ಯ

eNEWS LAND Team

Market Opening Bell

eNEWS LAND Team

ಹುಬ್ಬಳ್ಳಿ ಅಂತಾರಾಜ್ಯ ಹಾಕಿ; ಶಾಹು ಮಣಿಸಿದ ನೈಋತ್ಯ ರೈಲ್ವೆ!

eNewsLand Team