34 C
Hubli
ಮಾರ್ಚ್ 23, 2023
eNews Land
ಜನಪದ ಸಂಸ್ಕೃತಿ

ಕನ್ನಡ ಸಂಸ್ಕೃತಿ ಇಲಾಖೆ ರಂಗಾಯಣ ಹಾಗೂ ಗುಡ್ ನ್ಯೂಸ್ ಕಾಲೇಜ್ ಯುವ ರಂಗ ತರಬೇತಿ ಶಿಬಿರದ ಉದ್ಘಾಟನೆ.

Listen to this article

ಇಎನ್ಎಲ್ ಕಲಘಟಗಿ: ಕಲಘಟಗಿ ಪಟ್ಟಣದ ಗುಡನ್ಯೂಸ್ ಕಾಲೇಜಿನಲ್ಲಿ ಸರ್ಕಾರ ರಂಗಾಯಣ ಇದರ ಯುವ ರಂಗ ತರಬೇತಿಯ ಉದ್ಘಾಟನಾ ಸಮಾರಂಭ ಮಾಡಲಾಯಿತು. ಡಾ.ಮಹೇಶ ಹೊರಕೇರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಧಾರವಾಡ ರಂಗಾಯಣದ ನಿರ್ದೇಶಕ ರಮೇಶ್ ಪರವಿನಾಯ್ಕರ ಮುಖ್ಯ ಅತಿಥಿಗಳಾಗಿ ಆಗಮಿಸಿ,

 

ಕಾರ್ಯಕ್ರಮದಲ್ಲಿ ತಮ್ಮ ರಂಗಾಯಣದ ಅನುಭವವನ್ನು ಹಂಚಿಕೊಂಡರು. ಕಲಾವಿದನ ಹವ್ಯಾಸ ಹಾಗೂ ರಂಗಾಯಣದ ಸಂಬಂಧವನ್ನು ಹೆಚ್ಚಿಸಲು ರಂಗಭೂಮಿ ಸ್ಪೂರ್ತಿ ನೀಡುತ್ತದೆ, ಜಗತ್ತಿನಲ್ಲಿ ಎಲ್ಲ ಜಾತಿಗಳು ಸಮಾನ ಎಂದು ಬದುಕುವ ದೇಶ ನಮ್ಮ ಭಾರತ ಒಂದೇ ಎನ್ನುತ್ತ ಕನ್ನಡವು ಒಂದು ಊಟ ಎಂದು ದೇಶಾಭಿಮಾನ ಮತ್ತು ರಂಗಭೂಮಿ, ಯುವ ರಂಗದ ಮಹತ್ವವನ್ನು ಕುರಿತು ಮಾತನಾಡಿದರು. ನಂತರ ರೆ.ಬ್ರದರ್ ನಿಜು ಥಾಮಸ್ ಕಾರ್ಯಕ್ರಮದ ಕುರಿತು ಮಾತನಾಡಿದರು, ಜಗತ್ತನ್ನು ಒಂದು ಸ್ಟೆಜ ಆಗಿ ನೊಡುವ ನಾವು ಅದರಲ್ಲಿ ನಮ್ಮ ಎಲ್ಲಾ ರೀತಿಯ ಭಾವನೆಗಳನ್ನು ಹಂಚಿ ಕಲೆಗಳು ವಿದ್ಯಾರ್ಥಿಗಳು ಬೆಳೆಸಲಿ ಎಂದು ಜೀವನದಲ್ಲಿ ಕಲೆಗಳು ಬಹಳ ಮಹತ್ವವಾಗಿವೆ ಎಂದು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಬಿರಾದಾರ ಅಧ್ಯಕ್ಷೀಯ ನುಡಿಗಳನ್ನು ಮಾತನಾಡಿದರು, ಕಾವ್ಯಶು ನಾಟಕಂ ರಮ್ಯಂ ಎಂಬ ಕಾಳಿದಾಸನ ನುಡಿ ಹೇಳುತ್ತಾ, ನಾಟಕ ಎಲ್ಲರ ಗಮನ ಸೆಳೆಯುವ ಕಲೆ ನೋಡುಗರಿಗೆ ಆನಂದ ನೀಡುವಂತ ಕಲೆ ಎನ್ನುತ್ತ ಶಿಬಿರಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅತಿಥಿ ನಿರ್ದೇಶಕ ರಮೇಶ್ ಪರವಿನಾಯ್ಕರ, ಯಮನಪ್ಪ ಜಾಲಗಾರ, ಶಶಿಕಲಾ.ಎನ್ ಇವರೆಲ್ಲರಿಗೂ ಕಾಲೇಜ ವತಿಯಿಂದ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮಹದೇವ್ ಉಳ್ಳಾಗಡ್ಡಿ ನಡೆಸಿದರು. ಡಾ.ವಿ.ಆರ್.ಬೆಟಗಾರ ಎಲ್ಲರನ್ನು ಕುರಿತು ವಂದಿಸಿದರು ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರಾದ ಜೆ.ಆರ್ ಸುಳಿಬಾವಿ, ಅನಿತಾ ಭಟ್, ಮಂಜುಳಾ, ಬಸವರಾಜ್ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ರಾಜ್ಯೋತ್ಸವ ಪ್ರಶಸ್ತಿಗೆ 6ಸಾವಿರಕ್ಕೂ ಹೆಚ್ಚು ಅರ್ಜಿ

eNEWS LAND Team

ಹುಬ್ಬಳ್ಳಿ ಧಾರವಾಡದಲ್ಲಿ ಕ್ರಿಸ್‌ಮಸ್‌ ಮೆರುಗು

eNewsLand Team

ಶಿವಾಜಿ ಪ್ರತಿಮೆಗೆ ಸಚಿವ ಜೋಶಿ ಮಾಲಾರ್ಪಣೆ

eNEWS LAND Team