29 C
Hubli
ಮೇ 2, 2024
eNews Land
ಸುದ್ದಿ

ಸನ್ನಡತೆ; ಐದು ಜೈಲು ಹಕ್ಕಿಗಳೀಗ ಫ್ರೀ ಬರ್ಡ್ಸ್!! ಯಾರವರು??

ಇಎನ್ಎಲ್ ಧಾರವಾಡ: 2022 ರ ಜನವರಿಯಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಬಂಧಿಗಳ ಪೈಕಿ ಐದು ಜನ ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸ್ಥಾಯಿ ಸಲಹಾ ಮಂಡಳಿಯು ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸನ್ನು ಸರ್ಕಾರ ಸಮ್ಮತಿಸಿದ ಮೇರೆಗೆ ಇಂದು(ಮೇ.26) ಕೇಂದ್ರ ಕಾರಾಗೃಹದಲ್ಲಿದ್ದ ಐದು ಜನ ಜೀವಾವಧಿ ಶಿಕ್ಷಾ ಬಂಧಿಗಳನ್ನು ನಿಯಮಾನುಸಾರ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ ಹಾಗೂ ಕೇಂದ್ರ ಕಾರಾಗೃಹ ಅಧೀಕ್ಷಕ ಎಂ.ಎ. ಮರಿಗೌಡ ಬಿಡುಗಡೆಯಾದವರಿಗೆ ಮುಂದಿನ ಜೀವನ ಸಾಗಿಸಲು ಮಾರ್ಗದರ್ಶನ ನೀಡಿ ಕಾನೂನು ಮಾಹಿತಿಗಳನ್ನು ಒದಗಿಸಿದರು.

ಶಿಗ್ಗಾಂವಿಯಲ್ಲಿ ಶೂಟ್; ಕತ್ತಲಲ್ಲಿ ಮನೆಯೊಳಗೆ ಓಡಿ ಬಚಾವಾದ ಸಲ್ಮಾ!!

ಬಿಡುಗಡೆಯಾದವರ ವಿವರ: ನಯಾಜ ಅಲಿಯಾಸ್ ನಯಾಜುಲ್ಲಾ ಮೌಲಾಸಾಬ, ಶಿವಮೊಗ್ಗ, ಮುನ್ನಾ ಅಲಿಯಾಸ್ ಸೈಯದ್‍ಖಾದರ್ ಶಿವಮೊಗ್ಗ, ಶಂಕರ್ಯಾ ಅಲಿಯಾಸ್ ಆಂಧ್ರ ಪರಶ್ಯಾ ನವಲಗುಂದ ಸೆಟಲ್‍ಮೆಂಟ್ ಹುಬ್ಬಳ್ಳಿ, ಹನುಮಂತಪ್ಪ ರಾಮಚಂದ್ರಪ್ಪ ದೊಡ್ಡಮನಿ, ಮಂಟೂರು ಹುಬ್ಬಳ್ಳಿ, ಸಕ್ರಪ್ಪ ಅಲಿಯಾಸ್ ಶಂಕ್ರಪ್ಪ ಲಮಾಣಿ, ಹುಲಿಕಟ್ಟಿ ತಾಂಡಾ ಕಲಘಟಗಿ ಬಿಡುಗಡೆ ಆಗಿದ್ದಾರೆ.

Related posts

ಸಾರಿಗೆ ಕಚೇರಿಯಲ್ಲಿ : ಶ್ರೀ ಮಡಿವಾಳ ಮಾಚಿದೇವರ ಜಯಂತಿ

eNewsLand Team

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ CHANGE IN PATTERN OF TRAIN SERVICES

eNewsLand Team

ವಕೀಲರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ -ನ್ಯಾಯಮೂರ್ತಿ ರವಿ ವಿ. ಹೊಸಮನಿ

eNewsLand Team