eNews Land
ಅಪರಾಧ ಜಿಲ್ಲೆ

ಶಿಗ್ಗಾಂವಿಯಲ್ಲಿ ಶೂಟ್; ಕತ್ತಲಲ್ಲಿ ಮನೆಯೊಳಗೆ ಓಡಿ ಬಚಾವಾದ ಸಲ್ಮಾ!!

Listen to this article

ಬೈಕ್ ಮೇಲೆ ಬಂದಿದ್ದ ಮುಸುಕುಧಾರಿಗಳಿಂದ ಹಾರಿದ ಗುಂಡು

ಇಎನ್ಎಲ್ ಹಾವೇರಿ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದಲ್ಲಿ   ಸಲ್ಮಾ ಎಂಬ ಮಹಿಳೆ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ‌ ಬೈಕ್ ನಲ್ಲಿ ಬಂದ ಮುಸುಕುಧಾರಿಗಳು ಗುಂಡು ಹಾರಿಸಿ ಪರಾರಿ ಆಗಿದ್ದು, ಅದೃಷ್ಟವಶಾತ್ ಮಹಿಳೆ ಪಾರಾಗಿದ್ದಾರೆ.

ಕತ್ತಲಾಗಿದ್ದರಿಂದ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮನೆಯೊಳಕ್ಕೆ ಓಡಿ ಹೋಗಿ ಮಹಿಳೆ ಬಚಾವಾಗಿದ್ದಾಳೆ.

ಒಂದು ಸುತ್ತಿನ ಗಂಡಿನ ದಾಳಿಯಾಗಿದೆ. ಮನೆಯಲ್ಲಿ ಇನ್ನೂ ಹಲವರಿದ್ದರು. ಹಾರಿದ ಗುಂಡು ಮನೆಯ ಗೋಡೆಗೆ ತಾಗಿದೆ.

ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳು ಯಾರು? ಯಾರ ಕೊಲೆಗೆ ಬಂದಿದ್ದರು? ಎಲ್ಲಿಂದ ಬಂದಿದ್ದರು? ಎಂಬೆಲ್ಲ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ.

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!

ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವೇಳೆ ವಿಜಯಕುಮಾರ ಸೇರಿದಂತೆ ಶಿಗ್ಗಾಂವಿ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ಮುಂದುವರೆದಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧನೆ ಕೈಗೊಂಡಿದ್ದಾರೆ.

Related posts

 ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??

eNewsLand Team

ಹುಬ್ಬಳ್ಳಿ: ನಕಲಿ ಬಂಗಾರ ಅಡವಿಟ್ಟು ಸಾಲ ಪಡೆದವ ಅಂದರ್

eNewsLand Team

ಹುಬ್ಬಳ್ಳಿ: ಸಹಾಯಕ್ಕೆ ಕರೆದ ಕುರುಡ ಸ್ನೇಹಿತನ ಹಣದಾಸೆಗೆ ಕೊಂದವನಿಗೆ ಜೀವಾವಧಿ ಶಿಕ್ಷೆ

eNewsLand Team