27 C
Hubli
ಮೇ 4, 2024
eNews Land
ಸುದ್ದಿ

ಹುಧಾ ಪಾಲಿಕೆ ವಿರುದ್ಧ ದೂರು ಕೊಟ್ಟವಗೆ ₹ 20 ಸಾವಿರ ದಂಡ!!

ಇಎನ್ಎಲ್ ಹುಬ್ಬಳ್ಳಿ: ಮನೆ ನಿರ್ಮಾಣಕ್ಕೆ ಕಟ್ಟಡ ಪರವಾನಿಗೆ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರಾಕರಿಸುತ್ತಿದೆ ಎಂದು ದೂರು ಸಲ್ಲಿಸಿದ್ದ ಅರ್ಜಿದಾರರಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 20 ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಧಾರವಾಡದ ಕೆಲಗೇರಿ ರಸ್ತೆಯ ಶರದ್ ಎನಕ್ಲೇವ್‍ನ ಮಾಲೀಕ ಸುರೇಶ ಕೊಣ್ಣೂರ ಅವರು ತಮ್ಮ ಆಸ್ತಿಯಲ್ಲಿ ಮನೆ ಕಟ್ಟಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪರವಾನಿಗೆ ನೀಡದೇ ಕರ್ತವ್ಯ ಲೋಪ ಹಾಗೂ ಸೇವಾ ನ್ಯೂನ್ಯತೆ ಎಸಗಿದೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗವು ಮಹಾನಗರ ಪಾಲಿಕೆಯಿಂದ ಯಾವುದೇ ರೀತಿ ಕರ್ತವ್ಯ ಲೋಪ ಅಥವಾ ಸೇವಾ ನ್ಯೂನ್ಯತೆ ಆಗಿಲ್ಲ ಎಂದು ಮೇ 7 ರಂದು ತೀರ್ಪು ನೀಡಿದೆ. ಫಿರ್ಯಾದಿದಾರ ಸುರೇಶ ಕೊಣ್ಣೂರ ಅವರು ಎದುರುದಾರರಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 20 ಸಾವಿರ ರೂ. ದಂಡ ಪಾವತಿಸಬೇಕು ಎಂದು ಆದೇಶಿಸಿ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ತೀರ್ಪು ಪ್ರಕಟಿಸಿದ್ದಾರೆ.

ಇದನ್ನು ಓದಿ: ಲ್ಯಾಪ್‍ಟಾಪ್‍ ದೋಷ: ಸಿಕ್ತು ₹ 52 ಸಾವಿರ ಪರಿಹಾರ!!

Related posts

ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

eNEWS LAND Team

ಸಾರಿಗೆ ಕಚೇರಿಯಲ್ಲಿ : ಶ್ರೀ ಮಡಿವಾಳ ಮಾಚಿದೇವರ ಜಯಂತಿ

eNewsLand Team

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವೀಕ್ಷಿಸಿದ ಗೃಹಲಕ್ಷ್ಮೀಯರು

eNEWS LAND Team