23 C
Hubli
ಸೆಪ್ಟೆಂಬರ್ 25, 2023
eNews Land
ರಾಜಕೀಯ ರಾಜ್ಯ

ಕಾಳಿ ಸ್ವಾಮಿಗೆ ಮಸಿ; ಹಿಂದೂ ಫೈರ್ ಬ್ರ್ಯಾಂಡ್ ಮುತಾಲಿಕ್ ಹೇಳಿದ್ದೇನು ಗೊತ್ತಾ?

ಇಎನ್ಎಲ್ ಧಾರವಾಡ:

ಕಾಳಿ ಸ್ವಾಮೀಜಿ ಮೇಲೆ ಮಸಿ ದಾಳಿ ಮಾಡಿದವರು ಕೂಡಲೇ ಕ್ಷಮೆ ಕೇಳಬೇಕು. ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇವತ್ತು ಕಾಳಿ ಸ್ವಾಮೀಜಿ ಮೇಲೆ ಈ ರೀತಿ ಹಲ್ಲೆ ನಡೆಯುತ್ತದೆ. ನಾಳೆ ಮತ್ತೊಬ್ಬರ ಮೇಲೆ ನಡೆಯುತ್ತದೆ. ಇಂಥವರನ್ನು ಸರ್ಕಾರ ಹದ್ದುಬಸ್ತಿನಲ್ಲಿಡಬೇಕು..

ಇದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳಿ ಸ್ವಾಮೀಜಿಗೆ ಮಸಿ ಬಳೆದು ಅವರ ಮೇಲೆ ದಾಳಿ ಮಾಡಿದವರು ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಎಂದರು.

ಧಾರವಾಡ: ಕಾಳಿ ಸ್ವಾಮೀಜಿ ಕನ್ನಡ ವಿರೋಧಿಯಾಗಿ ಮಾತನಾಡಿಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ. ಕಾಳಿ ಸ್ವಾಮೀಜಿ ಕೆಂಪೇಗೌಡರಿಗೆ ಹಾಗೂ ಕುವೆಂಪು ಅವರಿಗೆ ಬೈದಿದ್ದಾರೆ ಎನ್ನಲಾಗಿದೆ ಆದರೆ, ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ. ಈ ಸಂಬಂಧ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು ಎಂದರು.

ಕಾಳಿ ಸ್ವಾಮೀಜಿ ಏನಾದರೂ ತಪ್ಪು ಮಾಡಿದ್ದರೆ ಕೇಸ್ ಹಾಕಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಖಾವಿಧಾರಿಗಳಿಗೆ ಮಸಿ ಬಳೆಯುವುದು ಸರಿಯಲ್ಲ. ಇದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಎಂದರು.

Related posts

‘ಮಿಷನ್ 150’ ಸಾಧನೆಗೆ ಬೂತ್ ವಿಜಯ ಅಭಿಯಾನ : ಮಹೇಶ್ ಟೆಂಗಿನಕಾಯಿ

eNEWS LAND Team

ಹುಬ್ಬಳ್ಳಿ ಈ ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ..? ಯಾವ್ದು ಗೊತ್ತಾ!!

eNewsLand Team

ಜಗದೀಶ್ ಶೆಟ್ಟರ್ ಅವರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ: ಬಿ.ಎಸ್.ಯಡಿಯೂರಪ್ಪ

eNEWS LAND Team