30 C
Hubli
ಮೇ 6, 2024
eNews Land
ಸುದ್ದಿ

ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಆಗ್ರಹ

ಇಎನ್ಎಲ್ ಅಣ್ಣಿಗೇರಿ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜರುಗಿದ್ದು, ಆದರೆ ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ ದಿನಾಂಕ ನಿಗದಿಗೊಳಿಸಿಲ್ಲ. ತಕ್ಷವೇ ದಿನಾಂಕ ನಿಗದಿಗೊಳಸಬೇಕೆಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಇದನ್ನೂ ಓದಿ:ತಾಲೂಕಿನ ಆಡಳಿತದ ನಡೆ ದುಂದೂರ ಗ್ರಾಮದ ಕಡೆ

ತಾಲೂಕಿನಲ್ಲಿ ಕಾಂಗ್ರೆಸ್ ಡಿಜಿಟಿಲ್ ಸದಸ್ಯತ್ವ ಸಂಖ್ಯೆ ಹೆಚ್ಚಿಸಲು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಜಿ.ಕಾ.ಯುವ ಘಟಕ ಅಧ್ಯಕ್ಷ ವಿನೋದ ಅಸೂಟಿ ವಿನಂತಿಸಿದರು.
ಅಣ್ಣಿಗೇರಿ ತಾಲೂಕಿನ ಬಸಾಪೂರ, ಮಜ್ಜಿಗುಡ್ಡ ಗ್ರಾಮದಲ್ಲಿ ಕಾಂಗ್ರೆಸ್ ಡಿಜಿಟಿಲ್ ಸದಸ್ಯತ್ವ ನೊಂದಣಿ ಹೆಚ್ಚಿಸಬೇಕೆಂದರು. ಬಿಜೆಪಿ ಸರ್ಕಾರ ಆಡಳಿತದ್ದರೂ ತಾಲೂಕಿನ ಮೂಲಸೌಲಭ್ಯಗಳ ಅಭಿವೃದ್ಧಿ ಕುಂಠಿತಗೊoಡಿವೆ. ಮಾಜಿ ಸಿಎಂ ಸಿದ್ರಾಮಯ್ಯ ಅಣ್ಣಿಗೇರಿ ತಾಲೂಕಾಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು ಇತಿಹಾಸವೆಂದರು.

ಇದನ್ನೂ ಓದಿ:ಕನ್ನಡ ನಾಡು ಉಳಿಸಿ ಬೆಳಸಿ ಕನ್ನಡ ಮನಸ್ಸುಗಳನ್ನು ಕಟ್ಟಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

75ನೇ ವರ್ಷ ಪೂರೈಸಿದ ಶಿಕ್ಷಣಪ್ರೇಮಿ ಅಣ್ಣಿಗೇರಿ ಶಿಕ್ಷಣ ಸಂಸ್ಥೆ ಚೇರಮನ್ ಆರ್.ಎ.ದೇಸಾಯಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಅಣ್ಣಿಗೇರಿ ಹಿರಿಯರು, ಪುರಸಭೆ ಸದಸ್ಯರು, ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿ. ದೇವರು ಅವರಿಗೆ ಆರೋಗ್ಯ ಸಂಪತ್ತು ಕರುಣಿಸಿ ನೂರುಕಾಲ ಬಾಳಲಿ ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾರೈಸಿದರು.

ಇದನ್ನೂ ಓದಿ:ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

ಈ ಸಂದರ್ಭದಲ್ಲಿ ಮಂಜುನಾಥ ಮಾಯಣ್ಣವರ, ಚಂಬಣ್ಣ ಹಾಳದೋಟರ, ಶಿವಣ್ಣಾ ಬಾಳೋಜಿ, ಭಗವಂತ ಪುಟ್ಟಣ್ಣವರ, ಶ್ರೀಕಾಂತ ಕೋಳಿವಾಡ, ಗುರುಸಿದ್ದಪ್ಪ ಕೊಪ್ಪದ, ದಾವಲಸಾಬ ದರವಾನ ಮಹಾದೇವಿ ಹುಯಿಲಗೋಳ, ಹಸನಸಾಬ ಸುಂಕದ, ಪರವೀನಬಾನು ಬಸಾಪೂರ, ಅಮೃತ ಮೀಸಿ, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related posts

ಸನ್ನಡತೆ; ಐದು ಜೈಲು ಹಕ್ಕಿಗಳೀಗ ಫ್ರೀ ಬರ್ಡ್ಸ್!! ಯಾರವರು??

eNewsLand Team

ಶಿಕ್ಷಕರ ಮತಕ್ಷೇತ್ರ : ಮತದಾರರ ಹೆಸರು ಸೇರಿಸಲು ಅವಕಾಶ

eNewsLand Team

Kalaghatagi Former MLA Nimbannavar passed away

eNEWS LAND Team