28.2 C
Hubli
ಮೇ 3, 2024
eNews Land
ಸುದ್ದಿ

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಅಮರಣ ಉಪವಾಸ ಸತ್ಯಾಗ್ರಹ

­ಇಎನ್ಎಲ್ ಅಣ್ಣಿಗೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರು ಬೆಳೆ ಬರುವ ಪೂರ್ವದಲ್ಲಿ ಬೆಂಬಲ ಬೆಲೆ ಕಡಲೆ ಕೇಂದ್ರ ತೆರೆಯದೇ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ತಕ್ಷಣವೇ ಕ್ರಮಕೈಗೊಂಡು ಕಡಲೆ ಕೇಂದ್ರ ತೆರೆಯಬೇಕು. ತೆರೆಯದಿದ್ದರೆ, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಪಕ್ಷದ ಮುಖಂಡರು,ಕಾರ್ಯಕರ್ತರು, ತಾಲೂಕಿನ ಸಮಸ್ತ ರೈತ ಹೋರಾಟ ಮುಖಂಡರೊoದಿಗೆ ಅಮರಣ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದಾಗಿ ಹೇಳಿದರು. ಪಟ್ಟಣದ ಬಸ್ ನಿಲ್ದಾಣ ಹತ್ತಿರ ವಿವೇಕಾನಂದ ವೃತ್ತದ ಬಯಲಿನಲ್ಲಿ ಆಯೋಜಿಸಿದ ಅಮರಣ ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಕಡಲೆ ಖರೀದಿ ಕೇಂದ್ರ ಫೆ.14 ಒಳಗೆ ತೆರೆಯಬೇಕೆಂದು ಒತ್ತಾಯಿಸಿ ಕಳೆದ ವಾರ ಮನವಿ ಸಲ್ಲಿಸಿದ್ದರು. ಇನ್ನು ಕಡಲೆ ಖರೀದಿ ಕೇಂದ್ರ ತೆರೆದಿಲ್ಲ. ಈಗಾಗಲೇ  ಶೇ.30-40 ರಷ್ಟು ರೈತರು ಕಡಲೆ ಒಕ್ಕಲಿ ಮಾಡಿ ಖಾಸಗಿ ವ್ಯಾಪಾರಸ್ಥರಿಗೆ ಮಾರಾಟಮಾಡಿದ್ದಾರೆ. ಅತಿವೃಷಿ ಮಳೆಯಿಂದ ಬೆಳೆಹಾನಿಯಾದ ರೈತರು ಸಂಕಷ್ಟದಲ್ಲಿದ್ದು, ಕಡಿಮೆ ಇಳುವರಿ  ಪ್ರಮಾಣ ಬೆಳೆದ ಕಡಲೆ ಬೆಳೆಗೆ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿ ಅಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಎನ್.ಆರ್.ಮಾಡೊಳ್ಳಿ, ಬಸವರಾಜ ಹಾದಿಮನಿ, ವಿರೇಶ ಕುಬಸದ, ಬಿ.ವಾಯ್.ಮುದಕನಾಯ್ಕರ, ಮಲ್ಲಪ್ಪ ಬ್ಯಾಹಟ್ಟಿ, ಯಲ್ಲಪ್ಪ ಮೊರಬಸಿ, ಭಗವಂತ ಪುಟ್ಟಣ್ಣವರ, ಗುರುಸಿದ್ದಪ್ಪ ಕೊಪ್ಪದ, ಎಮ್.ಎನ್.ಹೊನ್ನನವರ, ಎನ್.ಎಚ್. ಸದರಬಾಯಿ, ದಾವಲಸಾಬ ವಿಲಾಪೂರ, ಹಾಗೂ ಸುತ್ತಮುತ್ತಲಿನ ಗ್ರಾಮದ ರೈತ ಮುಖಂಡರು ಉಪಸ್ಥಿತರಿದ್ದರು.

Related posts

ಶಲವಡಿ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

eNEWS LAND Team

ಶಿವರಾತ್ರಿ: ಸಿದ್ಧಾರೂಢರ ಮಠದಲ್ಲಿ ಜಾತ್ರಾ ಮಹೋತ್ಸವಕ್ಕಾಗಿ ಸ್ವಚ್ಛತಾ ಕಾರ್ಯ

eNewsLand Team

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸವಿನೆನಪಿಗೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಉತ್ಸವ

eNEWS LAND Team