27 C
Hubli
ಮಾರ್ಚ್ 4, 2024
eNews Land
ಕೃಷಿ

ಸಾಧಿಸುವ ಛಲ, ದೃಢವಾದ ಸಂಕಲ್ಪ, ಸತತ ಪ್ರಯತ್ನ, ಪರಿಶ್ರಮಕ್ಕೆ ಯಶಸ್ಸು ನಿಶ್ಚಿತ

ಇಎನ್ಎಲ್ ಅಣ್ಣಿಗೇರಿ: ಸಾಧಿಸುವ ಛಲ ದೃಢವಾದ ಸಂಕಲ್ಪ ಸತತ ಪ್ರಯತ್ನ ಪರಿಶ್ರಮಕ್ಕೆ ಯಶಸ್ಸು ನಿಶ್ಚಿತ ಕಳೆದ 45 ವರ್ಷಗಳಿಂದ ವಿಶ್ವಶಾಂತಿ ಕೃಷಿ ಸಂಶೋಧನೆ ಕೇಂದ್ರದ ಮೂಲಕ ರೈತ ಸಮುದಾಯಕ್ಕೆ ಕೃಷಿ ಉಪಕರಗಳನ್ನು ತಯಾರಿಸಿ ಖರ್ಚುವೆಚ್ಚಕ್ಕೆ ಕಡಿವಾಣ ಹಾಕಿ ಕೂರಗಿ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ನೀಡಿ ಪೂರೈಸುತ್ತಿರುವ ಸಾಧನೆ ಪ್ರತೀಕ. ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಅಣ್ಣಿಗೇರಿ ರೈತನ ಮಗ ಅಬ್ದುಲ್ ಖಾದರ್‌ಗೆ  ಸಂದಿರೋದು ಸಂತಸ ತಂದಿದೆ.  ರಾಜ್ಯ, ಜಿಲ್ಲೆ, ತಾಲೂಕಿಗೆ ಕೀರ್ತಿ ತಂದಿರುವ ಪ್ರಯುಕ್ತ ಅಬ್ದುಲ್‌ಖಾದರ ಕಾಯಕವೇ ಕೈಲಾಸವೆಂದು ಕೃಷಿ ಸಂಶೋಧನೆ ಮೂಲಕ ನಡ ಕಟ್ಟಿ ಪರಿಶ್ರಮವಹಿಸಿದ ಪರಿಣಾಮ  ಆಲ್ ಇಂಡಿಯಾ ನಡಕಟ್ಟಿನ ಆಗಿರೋದಕ್ಕೆ ವಂದನೆ ಅಭಿನಂದನೆ ಎಂದು ಪ್ರೊ.ಎಸ್.ಎಸ್.ಹರ್ಲಾಪೂರ ಅಭಿನಂದನಾ ನುಡಿಗಳನ್ನಾಡಿದರು.
ಪಟ್ಟಣದ ಅಂಜುಮನ್ ಸಂಸ್ಥೆ ಶಾದಿ ಮಹಲ್ ಆವರಣದಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ,
ಪ್ರಾಸ್ತವಿಕವಾಗಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಆಯ್.ಜಿ.ಸಮುದ್ರಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಕಾಂಗ್ರೆಸ್ ಜಿ.ಗ್ರಾ.ಯುವ ಘಟಕ ಅಧ್ಯಕ್ಷ ವಿನೋದ ಅಸೂಟಿ. ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಪದ್ಮಶ್ರೀ ಪುರಸ್ಕೃತ ಎ.ಆಯ್.ನಡಕಟ್ಟಿನ ದಂಪತಿಗಳು, ಹಾಗೂ ಪುರಸಭೆ ಚುನಾಯಿತ 23 ಸದಸ್ಯರು. ದಾಸೋಹಮಠದ ಶಿವಕುಮಾರ ಶ್ರೀಗಳು, ಕಮಲಾಪೂರ ದರ್ಗಾದ ಸೈಯದ್ ಸಜ್ಜಾದ ಖಾದ್ರಿ , ಪಿಎಸ್.ಆಯ್. ಎಲ್.ಕೆ.ಜ್ಯೂಲಿಕಟ್ಟಿ, ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಸನ್ಮಾನಿತರಾದ ಎ.ಆಯ್.ನಡಕಟ್ಟಿನ ಮಾತನಾಡಿ, ಬಯಸದ ಬಂದ ಭಾಗ್ಯ ಪದ್ಮಶ್ರೀ ಪ್ರಶಸ್ತಿ, ನನ್ನ ವೈಯಕ್ತಿಕ ಬದುಕಿಗೆ ಬದುಕಿಲ್ಲ. ರೈತನ ಮಗನಾಗಿ ರೈತಸಮುದಾಯ ಎಳ್ಗೆಗೆ ಕೃಷಿ ಸಂಶೋಧನೆ ಮೂಲಕ ಕೃಷಿ ಉಪಕರಣಗಳನ್ನು ತಯಾರಿಸಿ, ಪೂರೈಸುವ ಸಾಧನೆಯಲ್ಲಿ ಸಾಕಷ್ಟು ಕಷ್ಟ ನಷ್ಟ ಪರಿಶ್ರಮವಹಿಸಿ, ಆಸ್ತಿ ಕಳೆದುಕೊಳ್ಳುವ ಸಂಕಷ್ಟ ಸಂದರ್ಭದಲ್ಲಿ ಒಂದೊತ್ತಿನ ಊಟಕ್ಕೆ ಕುಟುಂಬ ನಿರ್ವಹಿಸುವ ಪರದಾಡುವ  ಕ್ಷಣದಲ್ಲಿ ನಮಗೆ ಯಾರಿಂದಲೂ ಸಹಾಯ ಸಿಗಲಿಲ್ಲ. ಧರ್ಮರಾಯನಂತ ಅಳಿಯ, ಪತ್ನಿ, 3 ಗಂಡು ಮಕ್ಕಳ ಸಹಕಾರ ಪ್ರೇರಣೆಯಿಂದ ರೈತರಿಗೆ ಸಲ್ಲಿಸಿದ ಸೇವೆಗೆ  ಪದ್ಮಶ್ರೀ ಪ್ರಶಸ್ತಿ ರೈತರಿಗೆ ಸಂದಿದೆ. ಎಂದರು. ಈ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅನೇಕ ರಾಜಕೀಯ ಮುಖಂಡರ ಸಹಕಾರದಿಂದ ಎಲೆ ಮರೆ ಕಾಯಿಯಂತಿರುವ ಸೇವೆ ಗುರ್ತಿಸಿ, ಪ್ರಶಸ್ತಿ, ಲಭಿಸಿದ್ದಕ್ಕೆ ಧನ್ಯವಾದ ಹೇಳಿದರು.ಅಂಜುಮನ್ ಸಂಸ್ಥೆಗೆ, ತಾಲೂಕಿನ ರೈತ ಸಮುದಾಯದ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು.
ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ದಿಗೆ ಪುರಸಭೆ 23 ಚುನಾಯಿತ ಸದಸ್ಯರೊಂದಿಗೆ 24ನೇ ಸದಸ್ಯನಾಗಿ ಸರಕಾರದ ಅನುದಾನ ಪಡೆದು ಸೇವೆ ಸಲ್ಲಿಸುವುದಾಗಿ ಹೇಳಿದರು. ವಿಧಾನಸಭಾ ಮತಕ್ಷೇತ್ರದಲ್ಲಿ ತಮ್ಮೆಲ್ಲರ ಆರ್ಶಿವಾದದಿಂದ ಶಾಸಕನಾಗಿದ್ದರಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸೇವಕನಾಗಿ ಸೇವೆ ಸಲ್ಲಿಸುವೆನೆಂದರು. ಕೌಶಲ್ಯ ಅಭಿವೃದ್ದಿ ಸಂಸ್ಥೆ ತೆರೆಯುವ ಕಟ್ಟಡಕ್ಕೆ ಅಂಜುಮನ್ ಸಂಸ್ಥೆ ಅನುದಾನದ ಬೇಡಿಕೆ ಸಲ್ಲಿಸಿದ್ದರಿಂದ ಎಸ್.ವಿ.ಸಂಕನೂರ ಜೊತೆಗೂಡಿ, ₹20ಲಕ್ಷ ರೂಗಳನ್ನು ನೀಡುವ ಭರವಸೆ ಕೊಟ್ಟರು.
ಪದ್ಮಶ್ರೀ ಪುರಸ್ಕೃತ ಅಬ್ದುಲ್ ಖಾದರ ವಿಧಾನಸಭಾ ಮತಕ್ಷೇತ್ರದ ಕೀರ್ತಿ ಹೆಚ್ಚಿಸಿದ್ದು,ತಾಲೂಕಿನ ರೈತಭಾಂದವರ ಪರವಾಗಿ ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಹೇಳಿದರು. ಇನ್ನು ಹೆಚ್ಚಿನ ಸಂಶೋಧನೆ ಮೂಲಕ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆ ಉಪಯುಕ್ತತೆಗೆ ಉಪಕರಣ ಯಂತ್ರಗಳನ್ನು ತಯಾರಿಸುವ ನಿರಂತರ ಸೇವಾ ಸಾಧನೆ ಮುನ್ನಗ್ಗಲಿ ಎಂದು ಹಾರೈಸಿ ಅಭಿನಂದಿಸಿದರು.
ಸಾನಿಧ್ಯವಹಿಸಿದ್ದ ದಾಸೋಹಮಠ ಶಿವಕುಮಾರ ಶ್ರೀಗಳು ಆರ್ಶಿವಚನದಲ್ಲಿ ಪದ್ಮಶ್ರೀ ಪುರಸ್ಕೃತ ಎ.ಆಯ್ ನಡಕಟ್ಟಿನ ಕೃಷಿ ಸಂಶೋಧನೆ ಮೂಲಕ ರೈತ ಸಮುದಾಯಕ್ಕೆ ಕೃಷಿ ಉಪಕರಗಳನ್ನು ತಯಾರಿಸಿದ ಸಾಧನೆಗೆ ಸಂದ ಕಠಿಣ ಪರಿಶ್ರಮದ ಫಲವೆಂದು ಶ್ಲಾಘೀಸಿ. ಅಭಿನಂದಿಸಿದರು.  
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಪದಾಧಿಕಾರಿಗಳು ಸರ್ವ ಸದಸ್ಯರು, ಗಣ್ಯಮಾನ್ಯರು, ಸಂಘ ಸಂಸ್ಥೆಗಳ ಮುಖಂಡರು, ಉಪಸ್ಥಿತರಿದ್ದರು.
  

Related posts

ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ: ಕೃಷಿ ವಿಜ್ಞಾನಿ ಎ.ಆಯ್.ನಡಕಟ್ಟಿನ

eNEWS LAND Team

ಹುಬ್ಬಳ್ಳಿ: ಎಪಿಎಮ್’ಸಿ ಯ ನೂತನ ಕಾರ್ಯದರ್ಶಿಗೆ ವ್ಯಾಪಾರಸ್ಥರ ಸಂಘದಿoದ ಸನ್ಮಾನ

eNEWS LAND Team

ಮೂವರು ಶ್ರೀಗಳಿಂದ ಭೂಮಿ ತಾಯಿಗೆ ಚರಗ !!

eNEWS LAND Team