29 C
Hubli
ಮೇ 2, 2024
eNews Land
ದೇಶ ರಾಜ್ಯ

ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ ಬಂಪರ್! ₹ 6900 ಕೋಟಿ, ಇತಿಹಾಸದಲ್ಲೇ ಹೆಚ್ಚು

ಇಎನ್ಎಲ್ ಧಾರವಾಡ: ನೈಋತ್ಯ ರೈಲ್ವೆಗೆ ಪ್ರಸಕ್ತ ಕೇಂದ್ರದ ಬಜೆಟ್‌ನಲ್ಲಿ ₹ 6900 ಕೋಟಿ  ಅನುದಾನ ದೊರೆತಿದ್ದು, ಇದು ವಿಭಾಗದ ಇತಿಹಾಸದಲ್ಲಿಯೇ ದೊರೆತ ಅತೀ ಹೆಚ್ಚಿನ ಹಣ ಎನಿಸಿದೆ.

ಗುರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ವಿವರ ನೀಡಿದ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್, ಕಳೆದ ವರ್ಷದ ಅನುದಾನ ₹ 4900 ಕೋಟಿಗಿಂತ ಶೇ. 43 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಮೂಲಸೌಕರ್ಯ ನಿರ್ಮಾಣ ಹಾಗೂ ಬಳಕೆಯಲ್ಲಿನ ಮೂಲಸೌಕರ್ಯಗಳ ಪುನರ್ನವೀಕರಣ ಕಾರ್ಯಕ್ಕೆ ವಿಸ್ತೃತ ಅಂದಾಜು ಮೂಲ ವೆಚ್ಚದ ಬಂಡವಾಳ ಆಯೋಜನೆ ಹಾಗೂ ಚಾಲ್ತಿಯಲ್ಲಿರುವ ಕಾಮಗಾರಿ ಅತೀ ಶೀಘ್ರವಾಗಿ ಪೂರ್ಣಗೊಳಿಸುವತ್ತ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

₹ 611 ಕೋಟಿ  ಮೊತ್ತವನ್ನು ನೈಋತ್ಯ ರೈಲ್ವೆಯ ವಿದ್ಯುದೀಕರಣ ಕಾಮಗಾರಿಗೆ ಮಂಜೂರು ಮಾಡಲಾಗಿದೆ ಕಳೆದ ವರ್ಷದ ಮುಂಗಡಪತ್ರ ಅನುದಾನ (₹ 492 ಕೋಟಿ) ಕ್ಕಿಂತ ಶೇ. 24ರಷ್ಟು ಹೆಚ್ಚಾಗಿದೆ.
ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗಿದೆ. ಹೊಸ ಮಾರ್ಗಗಳು ಹಾಗೂ ದ್ವಿಪಥೀಕರಣ ಯೋಜನೆಗಳಿಗೆ ₹2325 ಕೋಟಿ  ಅನುದಾನ ದೊರೆತಿದ್ದು ಇದು ಕಳೆದ ವರ್ಷದ ಅನುದಾನ ಕ್ಕಿಂತ ಶೇ. 57.8 ರಷ್ಟು ಹೆಚ್ಚಾಗಿದೆ.
ಹಳಿಗಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತೆಯನ್ನು ಉತ್ತಮಪಡಿಸಲು ಹಳಿ ನವೀಕರಣ ಕಾರ್ಯಕ್ಕೆ ರೂ. 625 ಕೋಟಿ ಹಾಗೂ ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣಕ್ಕೆ ₹254 ಕೋಟಿ ಮಂಜೂರು ಮಾಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕಿಂತ ಇದು ಕ್ರಮವಾಗಿ ಶೇ. 30.2 ಮತ್ತು 46 ರಷ್ಟು ಹೆಚ್ಚಿನ ಅನುದಾನ ವಾಗಿದೆ.
₹1376.5 ಕೋಟಿ ವೆಚ್ಚದ ಹೊಸ ಕಾಮಗಾರಿಗಳು ಮಂಜೂರಾಗಿವೆ. ಈ. ಹೊಸ ಕಾಮಗಾರಿಗಳಲ್ಲಿ ಸುರಕ್ಷತೆ, ಸುರಂಗ ಹಾಗೂ  ಸೇತುವೆ ನಿರ್ಮಾಣ, ರಸ್ತೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ಒಳಗೊಂಡ ರಸ್ತೆ ಸುರಕ್ಷತಾ ಕಾಮಗಾರಿಗಳು ಸೇರಿವೆ. ಕಳೆದ ಮುಂಗಡ ಪತ್ರದಲ್ಲಿ ಹೊಸ ಕಾಮಗಾರಿಗೆ ₹680 ಕೋಟಿ ಮಂಜೂರಾಗಿತ್ತು.
ಉನ್ನತ ಮಟ್ಟದ ಪ್ಲಾಟ್ ಫಾರ್ಮ್ ಗಳು, ಫುಟ್ ಓವರ್ ಬ್ರಿಡ್ಜ್ ಗಳು ಹಾಗೂ ದಿವ್ಯಾಂಗ ಸ್ನೇಹಿ ಸೌಕರ್ಯ ಒಳಗೊಂಡಂತೆ  ಪ್ರಯಾಣಿಕರಿಗೆ ಹೊಸ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ₹100 ಕೋಟಿ ಮೊತ್ತವನ್ನು ಅಂಗೀಕರಿಸಲಾಗಿದೆ.
ಪ್ರಯಾಣಿಕರ ಸೌಲಭ್ಯ, ಪ್ಲಾಟ್ ಫಾರ್ಮ್’ಗಳಿಗೆ ಮೇಲ್ಚಾವಣಿ ಒದಗಿಸುವುದು ಇತ್ಯಾದಿ ಸುಧಾರಣಾ ಕಾರ್ಯಗಳಿಗೆ ₹75 ಕೋಟಿ ಮೊತ್ತ ಅಂಗೀಕರಿಸಲಾಗಿದೆ.

ನೈಋತ್ಯ ರೈಲ್ವೆಯು ಏಪ್ರಿಲ್ 2021 ರಿಂದ ಜನವರಿ 2022ರವರೆಗೆ 35.77 ಮಿಲಿಯನ್ ಟನ್ ಗಳಷ್ಟು ಸರಕುಗಳ ಪ್ರಾರಂಭಿಕ ಲೋಡಿಂಗ್ ಅನ್ನು ಮಾಡಿದ್ದು ಇದು ಏಪ್ರಿಲ್ 2020 ರಿಂದ ಜನವರಿ 2021ರವರೆಗಿನ ಅವಧಿಯ ಲೋಡಿಂಗ್ ಗಿಂತ ಶೇ. 18.38ರಷ್ಟು ಹೆಚ್ಚಾಗಿದೆ. ಏಪ್ರಿಲ್ 2021 ರಿಂದ ಜನವರಿ 2022ರ ವರೆಗಿನ ಅವಧಿಯಲ್ಲಿ ₹ 3406.45 ಕೋಟಿ ಪಾರ್ಸಲ್ ಆದಾಯವನ್ನು ಗಳಿಸಿದೆ. ಏಪ್ರಿಲ್ 2020 ರಿಂದ ಜನವರಿ 2021ರವರೆಗೆ ಗಳಿಸಿದ ಆದಾಯಕ್ಕಿಂತ (₹ 2603.90ಕೋಟಿ) ಶೇ.30.82%ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಹಣಕಾಸು ವರ್ಷದ ವರ್ಷದಲ್ಲಿ 22 ಕಿ ಮೀ ಗಳ ಹೊಸ ಮಾರ್ಗದ  ಸ್ಥಾಪನೆ ಆಯೋಜಿಸಲಾಗಿದೆ.
ಈವರೆಗೆ 61 ಕಿಮೀ ಮಾರ್ಗದ ದ್ವಿಪಥೀಕರಣವಾಗಿದ್ದು ಮಾರ್ಚ್ 2022ರ ವೇಳೆಗೆ 204 ಕಿ ಮೀ ಗಳಷ್ಟು  ದ್ವಿಪಥೀಕೃತ ಮಾರ್ಗಗಳನ್ನು ಕಾರ್ಯಗತಗೊಳಿಸುವ ಯೋಜನೆಯಿದೆ. ಏಪ್ರಿಲ್ 2021 ರಿಂದ ಇಲ್ಲಿಯವರೆಗೆ 6 ರಸ್ತೆ ಮೇಲ್ಸೇತುವೆ 9 ಕೆಳ ಸೇತುವೆ ನಿರ್ಮಾಣ ಹಾಗೂ 2 ರಸ್ತೆಯ ಮಾರ್ಗ ಬದಲಾವಣೆ ಮಾಡುವುದರೊಂದಿಗೆ 17  ಸಿಬ್ಬಂದಿ ಸಹಿತ ಲೆವೆಲ್ ಕ್ರಾಸಿಂಗ್ ಗೇಟ್ ತೊಡೆದು  ಹಾಕ ಲಾಗಿದೆ ಎಂದರು.

ನೈಋತ್ಯ ರೈಲ್ವೆಯ ಒಟ್ಟು 3605.5 ಕೀ.ಮೀಗಳಲ್ಲಿ 232 ರೂಟ್ ಕೀ. ಮೀ ನೈಋತ್ಯ ರೈಲ್ವೆ  ವಿದ್ಯುದೀಕರಿಸಿದ್ದು ಇನ್ನೆರಡು ತಿಂಗಳುಗಳಲ್ಲಿ ಇನ್ನೂ 200 ರೂಟ್ ಕೀ.ಮೀ. ಗಳ ವಿದ್ಯುದೀಕರಣ ಪೂರ್ಣಗೊಳಿಸುವ ಗುರಿ ಹೊಂದಿದೆ. ಮುಂಬರುವ ಹಣಕಾಸು ವರ್ಷದಲ್ಲಿ ವಲಯದಾದ್ಯಂತ ಇನ್ನೂ 554 ರೂಟ್ ಕೀ. ಮೀ. ಗಳ ವಿದ್ಯುದೀಕರಣ ಕಾರ್ಯ ಕೈಗೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ದ್ವಿಪಥೀಕರಣ ಹಾಗೂ ವಿದ್ಯುದೀಕರಣದ ಯೋಜನೆಗಳು ಸಂಪರ್ಕ ಸುಧಾರಿಸುವ ಜೊತೆಗೆ ಪರಿಸರ ಮಾಲಿನ್ಯ ತಡೆದು ರೈಲ್ವೆ ಕಾರ್ಯಾಚರಣೆ ಸುರಕ್ಷತೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

Related posts

ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ವಸತಿ ಯೋಜನೆಗಳಿಗಾಗಿ 530 ಎಕರೆ ಜಮೀನು ನೀಡಿಕೆ:ಸಚಿವ ಅಶೋಕ

eNEWS LAND Team

ಸ್ವಯಂ ಸೇವಕರಿಗೆ ಎನ್.ಡಿ.ಆರ್.ಎಫ್. ತಂಡದಿಂದ ತರಬೇತಿ

eNEWS LAND Team

ಎ.ಟಿ.ರಾಮಸ್ವಾಮಿ ಸೇರ್ಪಡೆಯಿಂದ ಪಕ್ಷದ ಬಲ ವೃದ್ಧಿ: ನಳಿನ್‍ಕುಮಾರ್ ಕಟೀಲ್

eNEWS LAND Team