ಇಎನ್ಎಲ್ ಧಾರವಾಡ:
ಹೊಸ ಮಾರ್ಗಗಳು: ಧಾರವಾಡ – ಕಿತ್ತೂರು ಹೊಸ ಮಾರ್ಗಕ್ಕೆ ₹20ಕೋಟಿ ಮೂಲ ವೆಚ್ಚದ ಬಂಡವಾಳ. ಗದಗ – ವಾಡಿ ಹಂಚಿಕೆ ಹೊಸ ಮಾರ್ಗಕ್ಕೆ ₹187 ಕೋಟಿ ಹಂಚಿಕೆ.
ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು, ತುಮಕೂರು – ಚಿತ್ರದುರ್ಗ – ದಾವಣಗೆರೆ ಬಾಗಲಕೋಟೆ-ಕುಡಚಿ ಹೊಸ ಮಾರ್ಗಗಳಿಗೆ ₹50 ಕೋಟಿ ಹಂಚಿಕೆ ನೀಡಲಾಗಿದೆ. ಕಲ್ಯಾಣ ದುರ್ಗ ಮಾರ್ಗವಾಗಿ ರಾಯದುರ್ಗ ತುಮಕೂರು ಹೊಸ ಮಾರ್ಗಕ್ಕೆ ₹ 100 ಕೋಟಿ ಹಂಚಿಕೆ ಆಗಿದೆ.
ದ್ವಿಪಥೀಕರಣ: ಗದಗ – ಕುಡಗಿ – ಹೊಟ್ಗಿ ಯೋಜನೆಗೆ ₹200 ಕೋಟಿ ಅನುದಾನ ದೊರೆತಿದ್ದು, ಹುಬ್ಬಳ್ಳಿ – ಚಿಕ್ಕಜಾಜೂರು ದ್ವಿಪಥೀಕರಣ ಯೋಜನೆಗೆ ₹210 ಕೋಟಿ ಅನುದಾನ ದೊರೆತಿದೆ.
ಬೆಂಗಳೂರಿನಿಂದ ವಿವಿಧ ದಿಕ್ಕುಗಳಲ್ಲಿನ ರೈಲು ಮಾರ್ಗಗಳನ್ನು ಸದೃಢಗೊಳಿಸಲು ದ್ವಿಪಥೀಕರಣದ ಯೋಜನೆಗೆ ಆದ್ಯತೆ ನೀಡಲಾಗಿದೆ. ಯಶವಂತಪುರ – ಚೆನ್ನಸಂದ್ರ ₹115 ಕೋಟಿ , ಯಲಹಂಕ – ಪೆನುಕೊಂಡ ₹54 ಕೋಟಿ, ಪೆನುಕೊಂಡ – ಧರ್ಮಾವರಂ ₹60 ಕೋಟಿ. ಬೈಯ್ಶಪ್ಪನಹಳ್ಳಿ – ಹೊಸೂರು ₹140 ಕೋಟಿಿ.ಅರಸೀಕೆರೆ – ತುಮಕೂರು ₹51.8 ಕೋಟಿ. ಜೊತೆಗೆ ₹100 ಕೋಟಿ ಗಳ ಅನುದಾನದೊಂದಿಗೆ ಬೆಂಗಳೂರು – ವೈಟ್ ಫೀಲ್ಡ್ ಭಾಗದ ನಾಲ್ಕು ಪಟ್ಟು ವರ್ಧನೆ ತ್ವರಿತಗೊಳಿಸಲಾಗುವುದು.
ದ್ವಿಪಥೀಕರಣ ಹಾಗೂ ವಿದ್ಯುದೀಕರಣಕ್ಕೆ ಅತಿ ಹೆಚ್ಚಿನ ಬಂಡವಾಳದ ಹಂಚಿಕೆಯೊಂದಿಗೆ ನೈಋತ್ಯ ರೈಲ್ವೆಯ. ಪ್ರಮುಖ ಮಾರ್ಗಗಳು ಸಂಚಾರ ದಟ್ಟಣೆಯಿಂದ ಮುಕ್ತವಾಗುವುದರ ಜೊತೆಗೆ ಪರಿಸರಸ್ನೇಹಿಯಾಗಿತೂ ಸಂಪರ್ಕ ವರ್ಧನೆಗೆ ಅನುವು ಮಾಡಿಕೊಡಲಿವೆ.
ಅಂದಾಜು ಮೂಲ ವೆಚ್ಚ
ಹೊಸ ಮಾರ್ಗ: ₹871 ಕೋಟಿ
ದ್ವಿಪಥೀಕರಣ : ₹1455 ಕೋಟಿ
ವಿದ್ಯುದೀಕರಣ : ₹611 ಕೋಟಿ