23.3 C
Hubli
ಮೇ 8, 2024
eNews Land
ಸಣ್ಣ ಸುದ್ದಿ

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನಕ್ಕೆ ಭೂಮಿಪೂಜೆ

ಸರ್ಕಾರವು ಪರಿಸರ, ಜಲ, ಸಂರಕ್ಷಣೆ ಶೈಕ್ಷಣಿಕ ಅಭಿವೃದ್ಧಿ, ಮನೋರಂಜನೆಯ ಇಟ್ಟುಕೊಂಡಿದೆ. ಆದ್ದರಿಂದ ಇಂತಹ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

ಇಎನ್ಎಲ್ ಕಲಘಟಗಿ:ಸರ್ಕಾರ ಪರಿಸರ, ಜಲ, ಸಂರಕ್ಷಣೆ ಶೈಕ್ಷಣಿಕ ಅಭಿವೃದ್ಧಿ, ಮನೋರಂಜನೆಯ ಇಟ್ಟುಕೊಂಡಿದೆ. ಆದ್ದರಿಂದ ಇಂತಹ ಯೋಜನೆಗಳನ್ನು ಜಾರಿಗೊಳಿಸಿದೆ. ಪಟ್ಟಣದ ಹೊರವಲಯದಲ್ಲಿರುವ ಸಾಲು ಮರದ ತಿಮ್ಮಕ್ಕನ ವೃಕ್ಷ ಉದ್ಯಾನದ ಭೂಮಿ ಪೂಜಾ ನೆರವೇರಿಸಿ ಮಾತನಾಡಿದ ಅವರು ಪಟ್ಟಣದ ಕಮಲಾಪುರ ನರ್ಸರಿಯಲ್ಲಿ  ರಾಜ್ಯದ ಅರಣ್ಯ ಪ್ರದೇಶಗಳು ಇದ್ದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ವೃಕ್ಷೋದ್ಯಾನ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದರೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಶೈಕ್ಷಣಿಕ ಚಟುವಟಿಕೆಗಳಿಗೆ ಇದರ ಉತ್ತೇಜನ, ಆಸಕ್ತ ಜನಸಾಮಾನ್ಯರ ಆರೋಗ್ಯ ವೃದ್ಧಿಸುವುದು ಉದ್ದೇಶವಾಗಿದೆ. ಮುಂದಿನ ದಿನಮಾನಗಳಲ್ಲಿ ಇದೊಂದು ಉತ್ತಮ ಪ್ರವಾಸಿ ಸ್ಥಳವಾಗಲಿದೆ. ಅರಣ್ಯ ಸಂರಕ್ಷಣಾಧಿಕಾರಿಗಳ ಕಠಿಣ ಪರಿಶ್ರಮದಿಂದ ಈ ಯೋಜನೆಯು ಸಾಕಾರಗೊಳ್ಳುತ್ತದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
         ಇದು ₹5ಕೋಟಿ ಯೋಜನೆ ಅನುಷ್ಠಾನಗೊಳ್ಳಬೇಕಿದೆ, ಮೂರು ವರ್ಷಗಳಲ್ಲಿ ಇದರಲ್ಲಿ ಆಡಿಟೋರಿಯಮ್, ಎಂಟು ಕುಟೀರಗಳು ಯೋಜನೆಯಲ್ಲಿದ್ದು , ಸದ್ಯಕ್ಕೆ ಒಂದು ಕುಟೀರ ನಿರ್ಮಿಸುತ್ತೇವೆ. ಇದಕ್ಕಾಗಿ 13 ಎಕರೆ ಜಾಗವನ್ನು ಮೀಸಲಿದೆ, ಉತ್ತಮ ನೀರಿರುವ 2 ಕೊಳವೆ ಬಾವಿಗಳಿವೆ, ಈಗ ಮoಜೂರಾದ ಹಣ ಸಂಪೂರ್ಣವಾಗಿ ಸಾಲುವುದಿಲ್ಲ. ಅದಕ್ಕಾಗಿ ಕಲಘಟಗಿಯ ಪ.ಪಂ ಪ್ರವಾಸೋದ್ಯಮ ಇಲಾಖೆ ಹಾಗೂ ಶಾಸಕರ ಸಹಕಾರದಿಂದ ಇನ್ನೂ ಹೆಚ್ಚಿನ ಅನುದಾನ ಕೋರಲಾಗುವುದು. ಮುಂದೊಂದು ದಿನ ತಮ್ಮೆಲ್ಲರ ಸಹಕಾರದಿಂದ ಇದೊಂದು ಉತ್ತಮ ಪ್ರವಾಸಿ ತಾಣವಾಗಿ ಬೆಳೆಯಲಿ, ಹಾಗೂ ರೈತರಿಗಾಗಿ ಕೇವಲ ₹3 ದರದಲ್ಲಿ ಹಲಸು, ಪೇರು, ನೇರಳೆ ಮತ್ತು ಶ್ರೀಗಂಧದ ಸಸಿಗಳು ಲಭ್ಯ ಎಂದು ಆರ್.ಎಫ್.ಓ. ಶ್ರೀಕಾಂತ ಪಾಟೀಲ ಹೇಳಿದರು. ಈ ವೇಳೆ ಕೃಷ್ಣ ತಹಶೀಲ್ದಾರ, ಬಸವರಾಜ ಕಡ್ಡಾಸ್ಕರ, ಲಕ್ಷ್ಮಣ ಬೆಟಗೇರಿ, ಸುನೀಲ್ ಗಟ್ಟೂರ, ಗಂಗಾಧರ ಗೌಳಿ, ಹಾಗೂ ಸಿಬ್ಬಂದಿಗಳಾದ ರಮೇಶ ಕಡೇಮನಿ, ಮೌನೇಶ ಲಿಂಗಶೆಟ್ಟಿ , ರಾಜು ನಂದಿಗಟ್ಟಿ ಇದ್ದರು.

Related posts

ಕಸಾಪ ಅಣ್ಣಿಗೇರಿ ತಾಲೂಕ ಘಟಕ ಹಾಗೂ ಹೋಬಳಿ ಪದಾಧಿಕಾರಿ ಪದಗ್ರಹಣ

eNEWS LAND Team

ಹೊಳಲಾಪೂರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಭೂಮಿ ಪೂಜೆ

eNEWS LAND Team

Journalism school started in the name of Dr.Vijaya Sankeshwar

eNEWS LAND Team