30 C
Hubli
ಏಪ್ರಿಲ್ 24, 2024
eNews Land
ಜಿಲ್ಲೆ

ಪದ್ಮಶ್ರೀ ನಡಕಟ್ಟಿನಗೆ ಸಚಿವ ಮುನೇನಕೊಪ್ಪ ಸನ್ಮಾನ

ಇಎನ್ಎಲ್ ಧಾರವಾಡ:  ಬಿತ್ತನೆ ಯಂತ್ರ ನಡಕಟ್ಟಿನ ಕೂರಿಗೆ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿ ಅವರಿಗೆ ಪದ್ಮಶ್ರೀ ಸಂದಿರುವುದು ಸಂತಸದ ವಿಷಯವಾಗಿದೆ. ನವಲಗುಂದ ಮತಕ್ಷೇತ್ರ ವ್ಯಾಪ್ತಿಯ ನಡಕಟ್ಟಿಯವರ ಸಾಧನೆ ಹೆಮ್ಮೆಯ ವಿಷಯವಾಗಿದೆ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಅಣ್ಣಿಗೇರಿಯ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಬ್ದುಲ್ ಖಾದರ್ ನಡಕಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ನಡಕಟ್ಟಿಯವರ ಕೃಷಿ ಯಂತ್ರಗಳ ಸಂಶೋಧನೆಯ ಹಾದಿ ಕಠಿಣವಾಗಿತ್ತು. ಸಹಾಯಕ್ಕಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಬಳಿ ನೆರವು ಕೇಳುತ್ತಿದ್ದರು. ಹಲವು ವರ್ಷಗಳ ಹಿಂದೆ ಸಹಾಯ ಅರಸಿ ನನ್ನ ಬಳಿಯೂ ಬಂದಿದ್ದರು. ಆ ವೇಳೆಯಲ್ಲಿ ನಿಮ್ಮ ಸಂಶೋಧನೆಯನ್ನು ರೈತರ ನಡುವೆ ಪ್ರಚುರ ಪಡಿಸಿ, ರೈತರು ನಿಮ್ಮ ಯಂತ್ರದಿಂದ ಆದ ಲಾಭವನ್ನು ನೋಡಿ‌ ಪ್ರೋತ್ಸಾಹಿಸುತ್ತಾರೆ. ಶ್ರೇಷ್ಠ ಪ್ರಶಸ್ತಿಗಳು ನಿಮ್ಮನ್ನು ಅರಿಸಿ ಬರುತ್ತೆ ಎಂದು ಹೇಳಿದ್ದೆ. ಭಗವಂತ ಹಾಗೂ ಅಲ್ಲಾನ ದಯೆಯಿಂದ ಆ ಸುದಿನ ಬಂದಿದೆ. ಕೇಂದ್ರ‌ ಸರ್ಕಾರ
ಧರ್ಮ, ಜಾತಿ, ಶಿಫಾರಸ್ಸು ನೋಡದೆ ನಿಜವಾದ ಸಮಾಜ ಸೇವಕರಿಗೆ‌ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಅಬ್ದುಲ್ ಖಾದರ್ ನಡಕಟ್ಟಿ ಮುಂದಿನ ಸಂಶೋಧನೆಗಳು ಜಾಗತಿಕವಾಗಿ ಮನ್ನಣೆಗಳಿಸಲಿ ಎಂದು ಅವರು ಹಾರೈಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ಸಂಶೋಧನೆ, ಅವಿರತ ಶ್ರಮ ಹಾಗೂ ಸಾಮರ್ಥ್ಯ ಇದ್ದವರು ಯಾವುದೇ ಮೂಲೆಯಲ್ಲಿ ಇದ್ದರು ಗುರುತಿಸಲ್ಪಡುತ್ತಾರೆ. ಇದಕ್ಕೆ ಅಬ್ದುಲ್ ಖಾದರ್ ನಡಕಟ್ಟಿ ಉದಾಹರಣೆ. ಕೇಂದ್ರ ಸರ್ಕಾರ ನಡಹಟ್ಟಿ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ಗುಣ ಹಾಗೂ ಅರ್ಹತೆಗೆ ಸಂದ ಪ್ರಶಸ್ತಿಯಾಗಿದೆ. ಕೇಂದ್ರ ಸರ್ಕಾರ ಸಮಾಜಮುಖಿಯಾಗಿ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ಆಯ್ಕೆ ಮಾಡುತ್ತಿದೆ. ಲಾಬಿ ಹಾಗೂ ಶಿಫಾರಸ್ಸು ಇಲ್ಲದೆ ಪ್ರಶಸ್ತಿ ನೀಡಿದೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೃಷಿಕರಿದ್ದಾರೆ. ಕೃಷಿಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಇದಕ್ಕೆ ಪೂರಕವಾಗಿ ನಡಕಟ್ಟಿಯವರು ಕೃಷಿ ಯಂತ್ರಗಳ ಸಂಶೋಧನೆ ಮಾಡಿದ್ದಾರೆ. ಸರ್ಕಾರ ಹಾಗೂ ಕೃಷಿ ಇಲಾಖೆ ನಡಕಟ್ಟಿಯವರಿಗೆ ಬೆಂಬಲವಾಗಿ ನಿಲ್ಲುವುದು. ನಡಕಟ್ಟಿಯವರನ್ನು ಕಳೆದ 20 ವರ್ಷಗಳಿಂದ ನೋಡಿದ್ದೇನೆ. ನಡಕಟ್ಟಿಯವರ ಕೃಷಿ ಸಂಶೋಧನೆ ಕುರಿತು ಸದನದಲ್ಲಿ ಕೂಡ ಮಾತನಾಡಿದ್ದೇನೆ. ನಡಕಟ್ಟಿ ಅವರ ಸಂಶೋಧನೆ ಅವರ ಕುಟುಂಬಕ್ಕೆ ಅಷ್ಟೇ ಸೀಮಿತವಲ್ಲ. ಸಮಸ್ತ ಕೃಷಿ ಕುಟುಂಬಗಳಿಗೆ ಇದರಿಂದ ಅನುಕೂಲವಾಗಿದೆ. ಅವರ ಸಂಶೋಧನೆಗಳು ಮುಂದುವರಿಯಲಿ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುಲ್ ಖಾದರ್ ನಡಕಟ್ಟಿ, ಕೇಂದ್ರ ಸರ್ಕಾರ ನನ್ನ ಸಂಶೋಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅತೀವ ಸಂತಸ ತಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಎಂದರು.
 ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

Related posts

ಭಾರತೀಯ ಸಂಸ್ಕೃತಿ ಜಗತ್ತಿಗೆ ಶ್ರೇಷ್ಠ: ವಿರೇಂದ್ರ ಶ್ರೀಗಳು

eNewsLand Team

ಪಕ್ಷಾತೀತ, ಧರ್ಮಾತೀತ, ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ: ಡಿಸಿ ಗುರುದತ್ತ ಹೆಗಡೆ

eNEWS LAND Team

ಮತದಾನ ಸಿದ್ಧತೆ ಪೂರ್ಣ ; ಒಟ್ಟು 15,23,080 ಮತದಾರರು; 1,642 ಮತಗಟ್ಟೆಗಳು, ಮತಗಟ್ಟೆಗಳಿಗೆ 8,319 ಸಿಬ್ಬಂದಿಗಳ ನಿಯೋಜನೆ; ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ

eNewsLand Team