28.2 C
Hubli
ಮೇ 1, 2024
eNews Land
ರಾಜಕೀಯ ರಾಜ್ಯ

ಮಹಾದಾಯಿ ವಿಚಾರ; ಯಡಿಯೂರಪ್ಪ ಕಾಲೆಳೆದ ಸಿದ್ದರಾಮಯ್ಯ

ಇಎನ್ಎಲ್ ಧಾರವಾಡ

ಮೇಕೆದಾಟು ಪಾದಯಾತ್ರೆಯನ್ನು ಹತ್ತಿಕ್ಕಲು ವೀಕೆಂಡ್ ಕರ್ಪ್ಯೂ ಜಾರಿಗೆ ತರಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಹರಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಸೋಮಶೇಖರ್‌ಗೆ ಕೋವಿಡ್ ದೃಢಪಟ್ಟಿದ್ದು ನಮ್ಮ ಪಾದಯಾತ್ರೆಯಿಂದನಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಮುಂದಿನ ದಿನಗಳಲ್ಲಿ ಮಹದಾಯಿ, ಕೃಷ್ಣ, ಕಲ್ಯಾಣ ಕರ್ನಾಟಕದ 371 ಜೆ ಪರವಾಗಿ ಹೋರಾಟ ನಡೆಸುತ್ತೇವೆ‌. ಮಹದಾಯಿ ಪಾದಯಾತ್ರೆ ಬಗ್ಗೆ ಈಗಾಗಲೇ ಪಕ್ಷದಲ್ಲಿ ಚರ್ಚೆ ನಡೆದಿದೆ.
ನಮ್ಮ ಅಧಿಕಾರದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಹೋರಾಟ ಮಾಡಿದ್ದರು. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹದಾಯಿ ಕಾಮಗಾರಿ ಜಾರಿಗೆ ತರುತ್ತೇವೆ‌. ರಕ್ತದಲ್ಲಿ ಬರೆದು ಕೊಡುತ್ತೇನೆಂದು ಯಡಿಯೂರಪ್ಪ ಅವರು ಮಾತು ಕೊಟ್ಟಿದ್ದರು. ಈಗ ಉತ್ತರ ಕರ್ನಾಟಕ ಭಾಗದ ಜನರಿಗೆ ನೀರು ಬಂತಾ.? ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಜನರು ಈಗಾಗಲೇ ತತ್ತರಿಸಿದ್ದಾರೆ. ಇವರಿಗೆ ವೀಕೆಂಡ್ ಕರ್ಪ್ಯೂ ಅವಶ್ಯಕತೆ ಇರಲಿಲ್ಲ ಎಂದರು.

Related posts

ಈ ಬಾರಿಯ ಚುನಾವಣಾ ವಿಶೇಷ ಏನು ಗೊತ್ತಾ?

eNEWS LAND Team

ರಾಜಾಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಬೃಹತ್ ಯೋಜನೆ : ಸಿಎಂ

eNEWS LAND Team

ಕಾಂಗ್ರೆಸ್ಸಿಗೆ ಮೋದಿ ಫೋಬಿಯಾ: ಸೆಂಟ್ರಲ್ ಮಿನಿಸ್ಟರ್ ಹೀಗೆ ಹೇಳಿದ್ಯಾಕೆ ಗೊತ್ತಾ?

eNewsLand Team