34 C
Hubli
ಮಾರ್ಚ್ 23, 2023
eNews Land
ಸುದ್ದಿ

ಅಣ್ಣಿಗೇರಿಯಲ್ಲಿ ಹೂಗಾರ ಸಮಾಜದ ಸಭೆ

Listen to this article

ಇಎನ್ಎಲ್ ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದ ಹೂಗಾರ ಸಮಾಜ ಬಾಂಧವರ ಸರ್ವ ಸದಸ್ಯರ ಸಭೆ ಜರುಗಿತು. ಅಧ್ಯಕ್ಷತೆಯನ್ನು ಧಾರವಾಡ ಜಿಲ್ಲಾ ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ರವಿಗುರೂಜಿ ಆರ್. ಸಂಗಳಕರ ವಹಿಸಿದ್ದರು. ಸಭೆಯಲ್ಲಿ ಹೂಗಾರ ಸಮಾಜದ ಸಂಘಟನೆ,ಉದ್ದೇಶ, ನೂತನ ಪದಾಧಿಕಾರಿಗಳ ಕುರಿತು ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ, ಸರ್ವಾನುಮತದಿಂದ ತಿರ್ಮಾನ ಕೈಗೊಳ್ಳಲಾಯಿತು.

ಅಧ್ಯಕ್ಷತೆವಹಿಸಿದ್ದ ರವಿಗುರೂಜಿ ಆರ್. ಸಂಗಳಕರ ಮಾತಾಡಿ, ನವಲಗುಂದ ವಿಧಾನಸಭಾ ಕ್ಷೇತ್ರದ ಗೌರವ ಅಧ್ಯಕ್ಷರನ್ನಾಗಿ ಅರುಣಕುಮಾರ ಸಿ. ಹೂಗಾರ ಹಾಗೂ ಅಧ್ಯಕ್ಷರನ್ನಾಗಿ

ಸೋಮು ಹೂಗಾರ, ಖಜಾಂಚಿ ರೇಣುಕಾ ಹೂಗಾರ, ಪ್ರಧಾನ ಕಾರ್ಯದರ್ಶಿ ಕರಿಯಣ್ಣ ಹೂಗಾರ,  ಅವರನ್ನು ನೇಮಕ ಮಾಡಿ ತಕ್ಷಣವೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಸೇವೆ ಸಲ್ಲಿಸಲು, ಹಾಗೂ 3 ದಿನದೊಳಗೆ ಇನ್ನುಳಿದ ಪದಾಧಿಕಾರಿಗಳನ್ನು ನೇಮಕ ಮಾಡಿ, ಜಿಲ್ಲಾ ಘಟಕಕ್ಕೆ ವರದಿಯನ್ನು ಸಲ್ಲಿಸಿ, ಅನುಮತಿ ಪಡೆಯಲು ಸೂಚಿಸಿದರು.


ತಾಲೂಕಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಹಿನ್ನಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜ ಹಿತಚಿಂತಕರಾಗಿ, ಸಮಾಜದ ಜನರ ಕೈಗಳಿಗೆ ಸೌಲಭ್ಯಗಳು ಸಿಗುವಂತೆ, ಎಳ್ಗೆಗೆ ಶ್ರಮಿಸಬೇಕೆಂದು ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ, ಹಾರೈಸಿದರು.
ಈ ಸಂದರ್ಭದಲ್ಲಿ ರಾಜು ರಬರವಿ, ಮೃತ್ಯುಂಜಯ ರಬರವಿ, ಅಮೃತಪ್ಪ ಹೂಗಾರ, ರುದ್ರಪ್ಪ ಹೂಗಾರ, ಬಸವರಾಜ ಹೂಗಾರ, ಮುತ್ತಪ್ಪ ಹೂಗಾರ, ಅನುಸೂಯಾ ಹೂಗಾರ, ಶಾಂತವ್ವ ರಬರವಿ, ಬಸಪ್ಪ ರಬರವಿ, ಜೆ.ಡಿ.ಹೂಗಾರ, ಸಮಾಜ ಬಾಂಧವರು ಉಪಸ್ಥಿತರಿದ್ದರು.

Related posts

ಅಮೃತ ಯೋಜನೆ ಅಡಿಯ ಕಾಮಗಾರಿ ಶೀಘ್ರ ಇತ್ಯರ್ಥಗೊಳಿಸುವಂತೆ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಸೂಚನೆ

eNEWS LAND Team

ಗರ್ಭಿಣಿ‌ ಪತ್ನಿಯ ಪತಿ ಮರ್ಡರ್; ನಡೆದಿದೆ ತನಿಖೆ

eNewsLand Team

ಧರ್ಮದ ಚೌಕಟ್ಟನ್ನು ಮೀರಿ ತತ್ವ ಸಾರಿದ ಸಿದ್ದಪ್ಪಜ್ಜ: ಮುಖ್ಯಮಂತ್ರಿ ಬೊಮ್ಮಾಯಿ

eNEWS LAND Team