36 C
Hubli
ಏಪ್ರಿಲ್ 27, 2024
eNews Land
ರಾಜಕೀಯ ರಾಜ್ಯ

ಈ ಬಾರಿಯ ಚುನಾವಣಾ ವಿಶೇಷ ಏನು ಗೊತ್ತಾ?

ಇಎನ್ಎಲ್ ಡೆಸ್ಕ್:

ಈ ಸಾಲಿನ ರಾಜ್ಯ ಚುನಾವಣೆಯ ಮುಖ್ಯ ವಿಶೇಷಗಳೆಂದರೆ:

* ರಾಜ್ಯದಲ್ಲಿ ಒಟ್ಟು 224 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

* ಚುನಾವಣೆಯು ಒಟ್ಟು 5.22 ಕೋಟಿ ಮತದಾರರನ್ನು ಹೊಂದಿದೆ.

* ಇದರಲ್ಲಿ 2.62 ಕೋಟಿ ಪುರುಷ ಹಾಗೂ 2.59 ಕೋಟಿ ಮಹಿಳಾ ಮತದಾರರಿದ್ದಾರೆ.

* ಈ ಸಾಲಿನಲ್ಲಿ ಮೊದಲ ಬಾರಿ ಮತ ಚಲಾಯಿಸುವ 19.17 ಹೊಸ ಲಕ್ಷ ಮತದಾರರಿದ್ದು, ಇದಕ್ಕೆ ಸೇರ್ಪಡೆಗೊಳ್ಳಲಿರುವ ಏ.1ಕ್ಕೆ 18 ವರ್ಷ ತುಂಬುವ ಹೊಸ ಮತದಾರರ ಸಂಖ್ಯೆ 1.25 ಲಕ್ಷ.

* 80 ವರ್ಷ ಮೇಲ್ಪಟ್ಟ 12.15 ಲಕ್ಷ ಮತದಾರರಿದ್ದು, ಅವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ.

* ಇದರಲ್ಲಿ 5.55 ಲಕ್ಷ ದಿವ್ಯಾಂಗ ಮತದಾರರು ಹಾಗೂ 4,699 ತೃತೀಯ ಲಿಂಗಿ ಮತದಾರರಿದ್ದಾರೆ.

* ಮತದಾನದ ಸಂದರ್ಭ ಯುವಕರಿಗಾಗಿ 224 ಪ್ರತ್ಯೇಕ ಮತಗಟ್ಟೆಗಳಿರಲಿದ್ದು ಮಹಿಳೆಯರಿಗಾಗಿ 1,320 ಮತಗಟ್ಟೆಗಳಿರಲಿವೆ.

* ಚುನಾವಣಾ ಅಕ್ರಮ ತಡೆಗೆ 2,400 ತಂಡಗಳ ರಚನೆಯಾಗಿದ್ದು, ಸಲ್ಲಿಕೆಯಾದ ದೂರುಗಳ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯೋಗದ ಭರವಸೆ.

ಚುನಾವಣಾ ಆ್ಯಪ್:

ಚುನಾವಣಾ ವಿಚಾರಕ್ಕೆ ಸಂಬಂಧಿಸಿ ಆಯೋಗವು ’ಕೆವೈಸಿ’ (know your candidate)ಆ್ಯಪ್ ಮತ್ತು ’ಸಿವಿಜಿಲ್’ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಇದರ ವಿಶೇಷತೆಗಳೆಂದರೆ:

* ’ಕೆವೈಸಿ’ ಆ್ಯಪ್ ಮೂಲಕ ಚುನಾವಣಾ ಅಭ್ಯರ್ಥಿಯ ವಿವರಗಳ ಜತೆಗೆ ಅವರ ಅಫಿಡವಿಟ್ ಲಭ್ಯ.

* ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ’ಸಿವಿಜಿಲ್’ ಆ್ಯಪ್‌ನಲ್ಲೇ ಮತದಾರರು ದೂರು ಸಲ್ಲಿಸಬಹುದಾಗಿದೆ.

* ಚುನಾವಣಾ ಅಕ್ರಮ ತಡೆಗೆ 2400 ತಂಡಗಳ ರಚನೆಯಾಗಿದ್ದು ಸಲ್ಲಿಸಿದರ ದೂರುಗಳ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗದ ಭರವಸೆ.

Related posts

ಹಿಜಾಬ್: ಕಾಂಗ್ರೆಸ್ ಬಗ್ಗೆ ಪ್ರಹ್ಲಾದ ಜೋಶಿ ಹೇಳಿದ್ದೇನು ಗೊತ್ತಾ?

eNewsLand Team

ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

eNEWS LAND Team

ಉಪಚುನಾವಣೆ: ಅ.17 ರಿಂದ ಹಾನಗಲ್ ನಲ್ಲಿ ಪ್ರಚಾರ ಸಿ.ಎಂ

eNEWS LAND Team